ಬದುಕಿನ ಉದ್ದಗಲಕ್ಕೂ ಕಷ್ಟದಲ್ಲೇ ಬೆಳೆದು ನಿಂತ ಕೆಜಿಎಫ್ ಚಾಚ: ಕಿಕ್ ಕೊಟ್ಟ ಹರೀಶ್​ ರಾಯ್​ ಪಾತ್ರಗಳು ಈಗ ನೆನಪು

ಬದುಕಿನ ಉದ್ದಗಲಕ್ಕೂ ಕಷ್ಟದಲ್ಲೇ ಬೆಳೆದು ನಿಂತ ಕೆಜಿಎಫ್ ಚಾಚ: ಕಿಕ್ ಕೊಟ್ಟ ಹರೀಶ್​ ರಾಯ್​ ಪಾತ್ರಗಳು ಈಗ ನೆನಪು

Published : Nov 07, 2025, 05:29 PM IST

ಕೆಜಿಎಫ್ ಚಾಚ ಅಂತಲೇ ಫೇಮಸ್ ಆಗಿದ್ದ ಹರೀಶ್​ ರಾಯ್​ ಬದುಕಿನ ಒಂದು ಕಿರು ನೋಟ ಇಲ್ಲಿದೆ. ಕೆಜಿಎಫ್​​​​​​ ಸಿನಿಮಾ ಮಾಡಿದ್ದ ದಾಖಲೆಗಳು ಒಂದೆರೆಡಲ್ಲ. ಬಾಕ್ಸಾಫೀಸ್​ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ತರಹೇವಾರಿ ಇತಿಹಾಸಗಳನ್ನ ಸೃಷ್ಟಿಸಿಬಿಟ್ಟಿತ್ತು.

ಕನ್ನಡ ಚಿತ್ರರಂಗವನ್ನ ಮತ್ತೊಂದು ಅದ್ಭುತ ಪ್ರತಿಭೆ ಅಗಲಿದೆ. ಶಿವರಾಜ್​ ಕುಮಾರ್​ ದರ್ಶನ್, ಸುದೀಪ್​​​ ಯಶ್​​ರಂತಹ ದಿಗ್ಗಜ ನಟರ ಜೊತೆ ಮಿಂಚಿ ಮೆರೆದಿದ್ದ ಹರೀಶ್ ರಾಯ್​ ಕ್ಯಾನ್ಸರ್​​​​ಗೆ ತನ್ನ 55ನೇ ವಯಸ್ಸಿನಲ್ಲೇ ಬಲಿ ಆಗಿದ್ದಾರೆ. ಕೆಜಿಎಫ್ ಚಾಚ ಅಂತಲೇ ಫೇಮಸ್ ಆಗಿದ್ದ ಹರೀಶ್​ ರಾಯ್​ ಬದುಕಿನ ಒಂದು ಕಿರು ನೋಟ ಇಲ್ಲಿದೆ. ಕೆಜಿಎಫ್​​​​​​ ಸಿನಿಮಾ ಮಾಡಿದ್ದ ದಾಖಲೆಗಳು ಒಂದೆರೆಡಲ್ಲ. ಬಾಕ್ಸಾಫೀಸ್​ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ತರಹೇವಾರಿ ಇತಿಹಾಸಗಳನ್ನ ಸೃಷ್ಟಿಸಿಬಿಟ್ಟಿತ್ತು. ಈ ಸಿನಿಮಾದಲ್ಲಿ ನಟಿಸಿದ್ದ ಕಲಾವಿಧರೆಲ್ಲಾ ಹೊಸ ಲೈಫ್​ ಕಟ್ಟಿಕೊಳ್ಳೊ ಹಾಗೆ ಮಾಡಿತ್ತು.

ಅಂತವರಲ್ಲೊಬ್ಬರು ಕೆಜಿಎಫ್​​ನ ಚಾಚ ಅಂತಲೇ ಫೇಮಸ್ ಆದ ಬಹುಭಾಷಾ ನಟ ಕರಾವಳಿಯ ಕಲಾವಿದಹರೀಶ್ ರಾಯ್. ಯೆಸ್.. ಹರೀಶ್ ರಾಯ್ ಇಲ್ಲದೇ ಕೆಜಿಎಫ್ ಸಿನಿಮಾ ಇಲ್ಲ.  ಹೇಗೆ ಅನಂತ್ ನಾಗ್​ ವೀರಗಲ್ಲು ಕತೆಯನ್ನ ಜಗತ್ತಿಗೆ ತೆರೆದಿಡುತ್ತಾರೋ ಹಾಗೆ ಕೆಜಿಎಫ್​​​ನ ಹೀರೋ.. ಅಲ್ಲ ಅಲ್ಲ ವಿಲನ್​​ ರಾಕಿಯ ವೈಭವೀಕರಣ ಮಾಡುತ್ತಾ ಅವನ ಆಸೆ ಈಡೇರಿಸೋಕೆ ರಾಕಿ ಬೆನ್ನ ಹಿಂದೆ ನಿಲ್ಲೋ ರೋಲ್​​ನಲ್ಲಿ ಈ ಕೆಜಿಎಫ್ ಚಾಚ ಮಿಂಚಿದ್ರು. ಅಂದಿನಿಂದ ಹರೀಶ್ ರಾಯ್ ಕೆಜಿಎಫ್​ ಚಾಚ ಎಂದೇ ಫೇಮಸ್ ಆದ್ರು. ಆದ್ರೆ ಈಗ ಈ ಚಾಚಾ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್​ ರೋಗದ ಜೊತೆ ಶಕ್ತಿ ಮೀರಿ ಹೋರಾಡಿ ಉಸಿರು ಚೆಲ್ಲಿದ್ದಾರೆ.

ಕೆಜಿಎಫ್ ಚಾಚ ಈಗ ನೆನಪು ಮಾತ್ರ. ಹರೀಶ್ ರಾಯ್ ಅಂತ್ಯ ಕ್ರೀಯೆ ಹುಟ್ಟೂರಾದ ಉಡುಪಿಯಲ್ಲಿ ಇಂದು ನಡೆಯುತ್ತಿದೆ. ನಟ ಯಶ್ ಕೂಡ ಹರೀಶ್ ರಾಯ್​​ ಅಂತಿಮ ದರ್ಶನ ಪಡೆದಿದ್ದಾರೆ. ಹರೀಶ್ ರಾಯ್​ ಬಣ್ಣದ ಜಗತ್ತಲ್ಲಿ ಏನೆಲ್ಲಾ ಕಷ್ಟ ನೋಡಬೇಕೋ ಎಲ್ಲವನ್ನೂ ಅನುಭವಿಸಿದವರು. ಇವರು ಬದುಕಿನ ಉದ್ದಗಲಕ್ಕೂ ಕಷ್ಟಗಳೇ ಎದುರಾಗಿವೆ.  ಆ ಕಲ್ಲು ಮುಳ್ಳಿನ ಹಾದಿಯಲ್ಲಿ ಹರೀಶ್ ರಾಯ್ ಬೆಳೆದು ಹೆಸರು ಮಾಡಿದ್ದೇ ಒಂದು ರೋಚಕ. ಯಾಕಂದ್ರೆ ಸಿನಿಮಾ ಜಗತ್ತಲ್ಲಿ ಹೆಸರು ಮಾಡೋ ಮೊದಲೇ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದವರು ಈ ಹರೀಶ್ ರಾಯ್.. ಉಡುಪಿಯವರಾದ ಹರೀಶ್ ರಾಯ್​ ಚಿತ್ರರಂಗಕ್ಕೆ ಬರೋ ಮೊದಲೇ ಶಿಕ್ಷಕರೊಬ್ಬರ ಕೊಲೆ ಪ್ರಕರಣದಲ್ಲಿ ಜೈಲು ಸೇರೋ ಹಾಗಾಗಿತ್ತು.

ಆದ್ರೆ ಬೇಲ್ ಮೇಲೆ ಹೊರ ಬಂದಿದ್ದ ಹರೀಶ್​ ಓಂ ಸಿನಿಮಾದಲ್ಲಿ ನಟಿಸಿ ದೊಡ್ಡದಾಗಿ ಬೆಳೆದಿದ್ರು, ಕೊಲೆ ಕೇಸ್ ಹರೀಶ್ ರಾಯ್​ರನ್ನ ಜೀವಾವಧಿ ಶಿಕ್ಷೆಗೆ ಒಳಗಾಗೋ ಹಾಗೆ ಮಾಡಿತ್ತು. ಆದ್ರೆ ಕೋರ್ಟ್​ನಲ್ಲಿ ಆ ಕೇಸ್ ಗೆದ್ದ ಹರೀಶ್​ ಕೊಲೆ ಕೇಸ್​ನಿಂದ ಮುಕ್ತಿ ಪಡೆದಿದ್ರು.  ನಂತ್ರ ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು. ಹರೀಶ್ ರಾಯ್​ 10ನೇ ತರಗತಿ ಓದುವಾಗ ಅಪ್ಪನ ಬಯಕ್ಕೆ ಊರು ಬಿಟ್ಟು ಮುಂಬೈ ಸೇರುತ್ತಾರೆ. ಅಲ್ಲಿ ಭೂಗತ ಜಗತ್ತಿನ ನಂಟು ಬೆಳೆಸಿಕೊಂಡಿದ್ದ ಈ ಚಾಚ ಹಲವು ಕೇಸ್​ಗಳಲ್ಲೂ ಫಿಟ್ ಆಗಿದ್ರು, ಕೊನೆಗೆ ಈ ಸಹವಾಸವೇ ಬೇಡ ಅಂತ 1994ರಲ್ಲಿ ಬೆಂಗಳೂರಿಗೆ ವಾಪಸ್ ಬಂದಿದ್ರು. ಅಲ್ಲಿಂದ ಸಿನಿಮಾ ಗೀಳು ಬೆಳೆಸಿಕೊಂಡು ಹೊಸ ಜೀವನ ಕಟ್ಟಿಕೊಂಡಿದ್ರು. ಈ ಕತೆಯನ್ನ ಹರೀಶ್ ರಾಯ್ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ.

ಇವರ ಜೀವನ ಕಥೆ ಕೆಜಿಎಫ್​ ಸಿನಿಮಾದಲ್ಲಿ ಇವರ ಪಾತ್ರಕ್ಕೆ ಟಚ್​​ ಕೊಡಲಾಗಿದೆ. ಹೆಸರು ಕೀರ್ತಿ, ಹಣ ಎಲ್ಲವೂ ಇದ್ದ ಹರೀಶ್​ ರಾಯ್​ಗೆ ಮೆಜೆಸ್ಟಿಕ್ , ಓಂ, ಬೆಂಗಳೂರು ಅಂಡರ್​ವರ್ಲ್ಡ್​, ಜೋಡಿ ಹಕ್ಕಿ, ಮೆಜೆಸ್ಟಿಕ್​​ ಹೀಗೆ ಹಿಟ್ ಸಿನಿಮಾಗಳಲ್ಲಿ ನಟಿಸಿದವರು. ಆದ್ರೆ ಆರ್ಥಿಕವಾಗಿ ಹರೀಶ್​ ರಾಯ್​ ಗೆಲ್ಲಲಿಲ್ಲ. ಆಪಾರ್ಟ್ ಮೆಂಟ್​ ಒಂದರಲ್ಲಿ ಎರಡು ಬೆಡ್​ ರೂಮ್ ಮನೆಯಲ್ಲಿದ್ದ ಈ ಚಾಚ ಕೊನೆ ಕಾಲದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡೋ ಸ್ಥಿತಿ ಬಂದಿತ್ತು. ಆಗ ನಟ ಯಶ್ಮ ಧ್ರುವ ಸರ್ಜಾ ಸೇರಿದಂತೆ ಹಲವರು ನೆರವಿಗೂ ಬಂದಿದ್ದಿದೆ. ಬಟ್ ವಿಧಿ ಬರಹ ಬೇರೆಯೇ ಇದ್ದ ಮೇಲೆ ಏನ್ ಮಾಡೋಕೆ ಆಗುತ್ತೆ. ಹರೀಶ್ ರಾಯ್ ಪ್ರಾಣ ಬಿಟ್ಟಿದ್ದಾರೆ. ಇಂದು ಉಡುಪಿಯಲ್ಲಿ ಅವರ ಅಂತ್ಯಕ್ರೀಯೆ ನಡೆಯಲಿದೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more