
ದರ್ಶನ್ ಫ್ಯಾಮಿಲಿ ಸಮೇತ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಒಟ್ಟಿಗೆ ಆತುರಾತುರವಾಗಿ ಏರ್ಪೋರ್ಟ್ ಪ್ರವೇಶಿಸಿರೋ ಈ ವಿಡಿಯೋ ವೈರಲ್ ಅಗಿದ್ದು ದರ್ಶನ್ ದಿ ಡೆವಿಲ್ ಶೂಟ್ಗೆ ವಿದೇಶಕ್ಕೆ ಹಾರಿದರು ಅಂತ ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದ್ರೆ ದರ್ಶನ್ ಇನ್ನೂ ವಿದೇಶಕ್ಕೆ ಹೋಗಿಲ್ಲ. ಅಸಲಿಗೆ ದರ್ಶನ್ಗೆ ಕೋರ್ಟ್ ವಿದೇಶ ಪ್ರಯಾಣಕ್ಕೆ ಅನುಮತಿ ಕೊಟ್ಟಿದೆ. ಆದ್ರೆ ಕೋರ್ಟ್ ಜುಲೈ 1ರ ಬಳಿಕ 25 ದಿನಗಳ ವಿದೇಶಕ್ಕೆ ಹೋಗಬುದು ಅಂತ ಆದೇಶ ನೀಡಿದೆ. ಸೋ ದಾಸನ ವಿದೇಶ ಯಾತ್ರೆ ಏನಿದ್ರೂ ಜುಲೈ 1ರ ಬಳಿಕ. ಸದ್ಯ ದಿ ಡೆವಿಲ್ ಟೀಂ ಯುರೋಪ್ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡು ಎಲ್ಲೆಲ್ಲಿ ಶೂಟ್ ಮಾಡಬೇಕು, ಏನೆಲ್ಲಾ ಚಿತ್ರಿಸಬೇಕು ಅಂತ ತಯಾರಿ ಮಾಡ್ತಾ ಇದೆ. ಇನ್ನೂ ವಿದೇಶಕ್ಕೆ ಸಾಂಗ್ ಶೂಟ್ಗೆ ಹೋಗುವ ಮುನ್ನ ಈಗಾಗಲೇ ಕಂಪ್ಲೀಟ್ ಆಗಿರೋ ಟಾಕಿ ಪೋರ್ಷನ್ನ ಡಬ್ಬಿಂಗ್ ಕೆಲಸವನ್ನ ಮಾಡ್ತಾ ಇದೆ. ಸದ್ಯ ದರ್ಶನ್ ಫ್ಲೈಟ್ ಹತ್ತಿರೋದು ಹೈದರಾಬಾದ್ಗೆ ತೆರಳೋದಕ್ಕೆ ಕುಟುಂಬದ ಜೊತೆಗೆ ಒಂದಿಷ್ಟು ಸಮಯ ಕಳೀಬೇಕು ಅಂತ ದರ್ಶನ್ ಹೈದ್ರಾಬಾದ್‌ಗೆ ಹೋಗಿದ್ದಾರಂತೆ.