ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!

ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!

Published : Sep 15, 2024, 12:01 PM ISTUpdated : Sep 15, 2024, 12:06 PM IST

ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್​​ಗೆ ಆ ಜೈಲು ಸಹವಾಸ ಸಾಕ್ ಸಾಕಾಗಿದೆ. ಬಳ್ಳಾರಿ ಜೈಲಲ್ಲಿ ದಚ್ಚು ದರ್ಪ ಒಂದ್ ಕಡೆ ಆದ್ರೆ ಆ ಜೈಲಲ್ಲಿರಲಾಗದೆ ಪರದಾಡುತ್ತಿದ್ದಾರೆ, ಹೈ ಸೆಕ್ಯುರಿಟಿ ಸೆಲ್ ನಲ್ಲಿ ಏಕಾಂಗಿಯಾಗಿರವ ದರ್ಶನ್..

ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 70 ದಿನದ ಜೈಲು ವಾಸದ ಕಾಲ್​ ಶೀಟ್ ಮುಗಿದೆ. ದರ್ಶನ್​ ಕಾಲ್​ ಶೀಟ್​​ ಮತ್ತೆ 14 ದಿನ ಹೆಚ್ಚಾಗಿದ್ದು, ಜೈಲುವಾಸ ಬಳ್ಳಾರಿಯಲ್ಲಿ ಜೋರಾಗೆ ನಡೆಯುತ್ತಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆದ್ರೂ ದರ್ಶನ್​​​ ದರ್ಪ ಕುಗ್ಗಿಲ್ಲ. ಅಸಭ್ಯ ವರ್ತನೆ ಜೊತೆ ಜೈಲು ಸಿಬ್ಬಂಧಿಗಳ ಮೇಲೆ ಕೋಪದ ಜ್ವಾಲೆ ಹೆಚ್ಚಿಸಿಕೊಂಡಿದ್ದಾರೆ. 

ಜೈಲು ಸಿಬ್ಬಂದಿಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು ಕಾಟೇರ ಕಟ ಕಟ ಎನ್ನುತ್ತಿದ್ದಾರಂತೆ. ಹಾಗಾದ್ರೆ ಏನಿದು ಕಾಟೇರನ ಕೋಪ ದರ್ಪದ ಕತೆ.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್.. ಬಳ್ಳಾರಿ ಜೈಲು ಕಂಬಿ ಹಿಂದೆ ಇದ್ರೂ ಕಟ ಕಟ ಎನ್ನುತ್ತಿರೋ 'ಕಾಟೇರ' ದಾಸನಿಗೆ ಹೆಚ್ಚಾಗಿದೆಯಂತೆ ಕೋಪ ದ್ವೇಷ, ಅಸಭ್ಯ ವರ್ತನೆ ಹುಚ್ಚು..!  

ಸಾಧು ಕೋಕಿಲ ಬಗ್ಗೆ ಉಪೇಂದ್ರ ಹೇಳಿದ್ದೇನು? ರಕ್ತ ಕಣ್ಣೀರು ಟೈಮಲ್ಲಿ ಏನ್ ಮಾಡಿದ್ರಂತೆ..!?

ಜೈಲು ಸೆಲೆಬ್ರಿಟಿ ದರ್ಶನ್​ ಜೈಲು ವಾಸಕ್ಕೆ 84 ದಿನ ಆಗಿದೆ. ದಾಸನ ಜೈಲು ವಾಸದ 100 ಡೇಸ್ ಸೆಲಬ್ರೇಷನ್​​ಗೆ ಇನ್ನು 16 ದಿನ ಬಾಕಿ ಇದೆ. ಅಷ್ಟರಲ್ಲಾಗಲೇ ಜೈಲೊಳಗಿರೋ ದರ್ಶನ್ ಕಟ ಕಟ ಅಂತ ಹಲ್ಲು ಗಿರಿಯುತ್ತಿದ್ದಾರೆ. ಕೋಪ ದ್ವೇಷ, ಅಸಭ್ಯ ವರ್ತನೆ ಹುಚ್ಚು ದಾಸನಿಗೆ ಹೆಚ್ಚಾಗಿದೆಯಂತೆ.

ಟಿವಿ ಕೊಡದಿದ್ದಕ್ಕೆ ಜೈಲು ಸಿಬ್ಬಂದಿ ಮೇಲೆ ದರ್ಶನ್ ಗರಂ..!
ಜೈಲಿಗೆ ಹೋದ್ರೂ ಪಾಠ ಕಲಿಯದ ದರ್ಶನ್ ನಿನ್ನೆ ಕ್ಯಾಮೆರಾಗಳು ಕಂಡ ಕೂಡ್ಲೆ ಅಸಭ್ಯ ವರ್ತನೆ ತೋರಿದ್ರು. ಮಧ್ಯದ ಬೆರಳು ತೋರಿಸಿ ಕೆಟ್ಟದಾಗಿ ನಡೆದು ಬಂದಿದ್ರು. ದರ್ಶನ್​ರ ಈ ವರ್ತನೆ ಕಂಡು ಜೈಲಲ್ಲಿದ್ರೂ ಈ ಮನುಷ್ಯ ಬುದ್ಧಿ ಕಲಿತಿಲ್ವಲ್ಲಾ ಅಂತ ಉಗಿದವರು ಎಷ್ಟೋ ಜನ. ಆದ್ರೆ ಇವತ್ತು ಜೈಲು ಸಿಬ್ಬಂದಿ ಮೇಲೆಯೇ ದರ್ಶನ್ ದರ್ಪ ತೀರಿಸಿದ್ದಾರೆ. 

ಜೈಲಿನ ನಿಯಮಗಳಲ್ಲಿ ಟಿವಿ ಕೊಡಬೇಕೆಂದು ಇದೆ ಏಕೆ ಕೊಡ್ತಿಲ್ಲ. ಅದಕ್ಕೂ ಕೋರ್ಟ್ ಗೆ ಅಪ್ಲಿಕೇಶನ್ ಹಾಕಬೇಕಾ ಅಂತ ದರ್ಶನ್ ಜೈಲಿ ಸಿಬ್ಬಂದಿ ಮೇಲೆ ಕೊತ ಕೊತಾ ಅಂತ ಕುದಿಯುತ್ತಿದ್ದಾರಂತೆ.  ನಾನಿನ್ನೂ ಆರೋಪಿ ಅಷ್ಟೇ ಅಪರಾಧಿಯಲ್ಲ, ಒಳ್ಳೆ ಟಿವಿ ಕೊಡಿ ನಾಲ್ಕೇ ದಿನಕ್ಕೆ ಕೆಟ್ಟು ಹೋಗೋ ಟಿವಿ ಕೊಡಬೇಡಿ ಎಂದು ಎಂದು ದರ್ಶನ್​ ಆವಾಜ್. ಹಾಕಿದ್ದಾರಂತೆ. 

ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್ ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್.!
ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್​​ಗೆ ಆ ಜೈಲು ಸಹವಾಸ ಸಾಕ್ ಸಾಕಾಗಿದೆ. ಬಳ್ಳಾರಿ ಜೈಲಲ್ಲಿ ದಚ್ಚು ದರ್ಪ ಒಂದ್ ಕಡೆ ಆದ್ರೆ ಆ ಜೈಲಲ್ಲಿರಲಾಗದೆ ಪರದಾಡುತ್ತಿದ್ದಾರೆ, ಹೈ ಸೆಕ್ಯುರಿಟಿ ಸೆಲ್ ನಲ್ಲಿ ಏಕಾಂಗಿಯಾಗಿರವ ದರ್ಶನ್ ಬಳ್ಳಾರಿ ಜೈಲಿನ ಕಠಿಣ ನಿಯಮಗಳಿಗೆ ಬೆಂಡಾಗಿದ್ದಾರಂತೆ. ಅನಾರೋಗ್ಯದ ನೆಪವೊಡ್ಡಿ ಬೆಂಗಳೂರು ಸುತ್ತ ಮುತ್ತ ಇರೋ ಬೇರೆ ಜೈಲಿಗೆ ಶಿಪ್ಟ್ ಮಾಡುವಂತೆ ಮನವಿ ಮಾಡೋ ಆಲೋಚನೆಯಲ್ಲೂ ಇದ್ದಾರೆ. 

'ಸೂಪರ್‌ ಸ್ಟಾರ್‌'ಗೆ ನಾಗತಿಹಳ್ಳಿ ಬಂದಿದ್ದು ಯಾಕೆಂಬ ಸಂಗತಿಯನ್ನು ಬಿಚ್ಚಿಟ್ಟ ಉಪೇಂದ್ರ!

ಮತ್ತೆ ನಾಲ್ಕು ದಿನ 'ದಚ್ಚು' ನ್ಯಾಯಾಂಗ ಬಂಧನ ವಿಸ್ತರಣೆ..!
ನಟ ದರ್ಶನ್ ಗ್ಯಾಂಗ್​ನ ನ್ಯಾಯಾಂಗ ಬಂಧನ ಇಂದಿಗೆ ಮುಗಿದಿತ್ತು. ಇಂದು ಮತ್ತೆ ವಿಚಾರಣೆ ಮಾಡಿದ ಕೋರ್ಟ್​ ದಾಸನಿಗೆ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಸೆಪ್ಟೆಂಬರ್​ 17ರ ವರೆಗೆ ದಾಸನ ಗ್ಯಾಂಗ್​ಗೆ ಜೈಲೂಟವೇ ಗತಿ. ಆ ಕಡೆ ಹೈಕೋರ್ಟ್ ನಲ್ಲಿ ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಆಗಿದ್ದು, ಪವಿತ್ರಾಗೌಡ ಜಾಮೀನು ಅರ್ಜಿ ಹಿಂಪಡೆದಿದ್ದಾರೆ. 

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more