ಓಡ್ರೋ.. ಓಡ್ರೋ.. ಓಡ್ರೋ.. ಇದು ಸರ್ಜಾ ಅಡ್ಡಾ: ನೆರೆ ಹೊರೆಯವರಿಗೆ ಹೊರೆಯಾದ ಅಮುಕು ಡುಮುಕು ಫ್ಯಾನ್ಸ್!

ಓಡ್ರೋ.. ಓಡ್ರೋ.. ಓಡ್ರೋ.. ಇದು ಸರ್ಜಾ ಅಡ್ಡಾ: ನೆರೆ ಹೊರೆಯವರಿಗೆ ಹೊರೆಯಾದ ಅಮುಕು ಡುಮುಕು ಫ್ಯಾನ್ಸ್!

Published : Nov 01, 2025, 01:54 PM ISTUpdated : Nov 03, 2025, 11:33 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅದೆಂಥಾ ಕಟ್ಟಾ ಅಭಿಮಾನಿಗಳ ಬಳಗ ಇದೆ ಅನ್ನೋದು ಗೊತ್ತೇ ಇದೆ. ಆದ್ರೆ ಅದೇ ಅಭಿಮಾನಿಗಳ ದೆಸೆಯಿಂದ ಈಗ ಧ್ರುವ ಸರ್ಜಾ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಅಮುಕು ಡುಮುಕು ಕಿರಿಕ್ಕು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅದೆಂಥಾ ಕಟ್ಟಾ ಅಭಿಮಾನಿಗಳ ಬಳಗ ಇದೆ ಅನ್ನೋದು ಗೊತ್ತೇ ಇದೆ. ಆದ್ರೆ ಅದೇ ಅಭಿಮಾನಿಗಳ ದೆಸೆಯಿಂದ ಈಗ ಧ್ರುವ ಸರ್ಜಾ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಅಮುಕು ಡುಮುಕು ಕಿರಿಕ್ಕು ಈ ಸ್ಟೋರಿ ನೋಡಿ. ಯೆಸ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೇಲೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಅಷ್ಟೇ ಅಲ್ಲದೇ ಅವರ ಕಾರ್ ಡ್ರೈವರ್, ಮ್ಯಾನೇಜರ್ ಮತ್ತು ಧ್ರುವ ಅಭಿಮಾನಿಗಳ ಮೇಲೆ ಕೂಡ ದೂರು ನೀಡಲಾಗಿದೆ. ಈ ದೂರನ್ನಾಧರಿಸಿ ಎಫ್.ಐ.ಆರ್ ಮಾಡುವಂತೆ ಒತ್ತಾಯಿಸಲಾಗಿದೆ. ಹೌದು ಧ್ರುವ ಮೇಲೆ ದೂರು ದಾಖಲು ಮಾಡಿದವರು ಬೇರ್ಯಾರೂ ಅಲ್ಲ.

ಖುದ್ದು ಸರ್ಜಾ ವಾಸವಿರುವ ಮನೆಯ ಅಕ್ಕಪಕ್ಕದವರು. ಅಷ್ಟಕ್ಕೂ ಇವರು ಸಲ್ಲಿಸಿರೋ ದೂರಿನಲ್ಲಿ ಧ್ರುವನ ಅಮುಕು ಡುಮುಕು ಅಭಿಮಾನಿಗಳಿಂದ ತಮಗೆ ಭಯಂಕರ ಹಿಂಸೆಯಾಗ್ತಾ ಇದೆ ಅಂತ ದೂರಿದ್ದಾರೆ. ಧ್ರುವ ಸರ್ಜಾ ಮನೆಯಲ್ಲಿದ್ರೆ ಸಾಕು ರಾಶಿ ರಾಶಿ ಅಭಿಮಾನಿಗಳು ಅವರ ಮನೆ ಮುಂದೆ ಸೇರ್ತಾರೆ. ಅಕ್ಕಪಕ್ಕದ ಮನೆಯ ಮುಂದೆ ವಾಹನಗಳನ್ನ ಪಾರ್ಕ್ ಮಾಡ್ತಾರೆ. ಕೆಲವರು ಅಲ್ಲೇ ನಿಂತು ಸಿಗರೇಟ್ ಹೊಗೆ ಉಗಳ್ತಾರೆ. ಮತ್ತೆ ಕೆಲವರು ಗುಟ್ಕಾ ತಿಂದು ಪಕ್ಕದ ಮನೆ ಗೋಡೆಗೆ ಉಗುಳ್ತಾರೆ. ಇದರಿಂದ ತಮ್ಮ ಮನೆಯಲ್ಲಿ ಇರಲಾಗ್ತಾ ಇಲ್ಲ ಅಂತಿದ್ದಾರೆ ಧ್ರುವ ನೇಬರ್ಸ್.

ಹೌದು ಧ್ರುವ ಮನೆಯೆದರು ಸೇರುವ ಫ್ಯಾನ್ಸ್ ಹಾವಳಿ ಹೇಗಿರುತ್ತೆ ಅನ್ನೋದ್ರ ಸ್ಯಾಂಪಲ್ ನೀವು ಸೋಷಿಯಲ್ ಮಿಡಿಯಾದಲ್ಲಿ ನೋಡಿರಬಹುದು. ಅದ್ಯಾರೋ ಒಬ್ಬ ಅಮುಡು ಡುಮುಕು.. ಡಮಾಲ್ ಡಮಿಲ್ ಅಂತ ನರ್ತಿಸಿದ್ರೆ, ಇನ್ನೊಬ್ಬ ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ ಅಂತ ಏಕಸ್ವರದಲ್ಲಿ ಹಾಡು ಹಾಡ್ತಾನೆ. ತಮ್ಮ ಅಭಿಮಾನಿಗಳನ್ನ ಧ್ರುವ ಏನೋ ಸಹಿಸಿಕೊಳ್ತಾರೆ. ಆದ್ರೆ ಪಾಪ ಅಕ್ಕದ ಪಕ್ಕದ ಮನೆಯವರು ಹೇಗೆ ತಾನೇ ಈ ಅತಿರೇಕವನ್ನ ಸಹಿಸೋಕೆ ಸಾಧ್ಯ. ಪಾಪ ಅವರು ಸರ್ಜಾ ಅಡ್ಡಾದಿಂದ ಓಡಿ ಹೋಗೋದೊಂದೆ ದಾರಿ ಅನ್ನೋ ಸ್ಥಿತಿ ತಲುಪಿದ್ದಾರೆ. ಈ ಹಿಂದೆ ಅಭಿಮಾನಿಗಳನ್ನ ಹೀಗೆ ಮನೆ ಬಳಿ ಸೇರಿಸಬೇಡಿ ಅಂತ ಸರ್ಜಾ ಮ್ಯಾನೇಜರ್ ಬಳಿ , ಅಕ್ಕ ಪಕ್ಕದ ಮನೆಯವರು ಮನವಿ ಮಾಡಿಕೊಂಡಿದ್ದಾರೆ.

ಆದ್ರೆ ಈ ಅಮುಡು ಡುಮುಕು ಫ್ಯಾನ್ಸ್ ಹಾವಳಿ ಹೆಚ್ಚಾಗ್ತಾನೇ ಇದೆ. ಸೋ ಸದ್ಯ ಮನೋಜ್ ಎಂಬುವವರು ಧ್ರುವ ಮತ್ತವರ ಮ್ಯಾನೇಜರ್ , ಡ್ರೈವರ್ ಮೇಲೆ ಕಂಪ್ಲೇಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜನಪ್ರಿಯ ನಟರ ಅಕ್ಕ ಪಕ್ಕದ ಮನೆಯವರಿಗೆ ಇಂಥಾ ಕಾಟ ಸಹಜ. ಆದ್ರೆ ಆ ನಟರು ನೆರೆಹೊರೆಯವರಿಗೆ ತಮ್ಮ ಅಭಿಮಾನಿಗಳು ಹೊರೆಯಾಗದಂತೆ ಎಚ್ಚರ ವಹಿಸಿಬೇಕು. ಅಭಿಮಾನಿಗಳ ಭೇಟಿ ಸೂಕ್ತ ಜಾಗ, ಸಮಯದ  ವ್ಯವಸ್ಥೆ ಮಾಡಬೇಕು. ಅದು ಬಿಟ್ಟು ಹೀಗೆ ಮನೆಮುಂದೆ ಓಡ್ರೋ ಓಡ್ರೋ ಇದು ಸರ್ಜಾ ಅಂತ ಹಾವಳಿ ಇಟ್ರೆ, ಪಾಪ ಅಕ್ಕಪಕ್ಕದವರು ಅದೆಲ್ಲಿಗೆ ತಾನೇ ಓಡಬೇಕು ನೀವೇ ಹೇಳಿ..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more