
ಜುಲೈ 30, 2000 ರಂದು, ಆಗಷ್ಟೇ ಊಟ ಮಾಡಿ ವಿಶ್ರಮಿಸುತ್ತಿದ್ದ ಡಾ.ರಾಜಕುಮಾರ್ ಮನೆಗೆ ಕಾಡುಗಳ್ಳ ವೀರಪ್ಪನ್ ಎಂಟ್ರಿಕೊಟ್ಟಿದ್ದ.. ಸಹಚರರೊಂದಿಗೆ ಬಂದಿದ್ದ ವೀರಪ್ಪನ್ನನ್ನು ನೋಡಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು..ಡಾ. ರಾಜ್ರನ್ನು ಕರೆದೊಯ್ದಿದ್ದು, ದಟ್ಟಾರಣ್ಯ ಪ್ರದೇಶಕ್ಕೆ…
ಡಾ.ರಾಜ್‌ಕುಮಾರ್ (Dr Rajkumar) ಅಪಹರಣ ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದು.. ವರನಟ ರಾಜಕುಮಾರ್ ಅಪಹರಣ (Dr Rajkumar Kidnap) ಆಗಿ ಇಂದಿಗೆ 25 ವರ್ಷವಾದ್ರೂ ಕುಟುಂಬಸ್ಥರಿಗೆ ಮರೆಯಲಾಗದ ಒಂದು ಕಹಿಘಟನೆಯಾಗಿ ಉಳಿದಿದೆ..
ಜುಲೈ 30, 2000 ರಂದು, ಆಗಷ್ಟೇ ಊಟ ಮಾಡಿ ವಿಶ್ರಮಿಸುತ್ತಿದ್ದ ಡಾ.ರಾಜಕುಮಾರ್ ಮನೆಗೆ ಕಾಡುಗಳ್ಳ ವೀರಪ್ಪನ್ ಎಂಟ್ರಿಕೊಟ್ಟಿದ್ದ.. ಸಹಚರರೊಂದಿಗೆ ಬಂದಿದ್ದ ವೀರಪ್ಪನ್ನನ್ನು ನೋಡಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು..ಡಾ. ರಾಜ್ರನ್ನು ಕರೆದೊಯ್ದಿದ್ದು, ದಟ್ಟಾರಣ್ಯ ಪ್ರದೇಶಕ್ಕೆ.
ರಾಜಕುಮಾರ್ ಅಪಹರಣದ ಬಗ್ಗೆ ಪಾರ್ವತಮ್ಮ ರಾಜಕುಮಾರ್ ಅಂದಿನ ಸಿಎಂ ಎಸ್.ಎಂ ಕೃಷ್ಣಪ್ಪಗೆ ದೂರು ನೀಡಿದ್ರು.. ಅಂದಿನ ಸರ್ಕಾರ ರಾಜಕುಮಾರ್ ಬಿಡಿಸಿಕೊಂಡು ಬರಲು ಹರಸಾಹವೇ ಪಟ್ಟಿತ್ತು..ತನ್ನ ಬೇಡಿಕೆಗಾಗಿ ರಾಜ್ಕುಮಾರ್ರನ್ನು ಒತ್ತೆಯಾಳಾಗಿ ವೀರಪ್ಪನ್ ಇರಿಸಿಕೊಂಡಿದ್ದ.. 108 ದಿನದ ಬಳಿಕ ಕಾಡುಕಳ್ಳ ವೀರಪ್ಪನ್, ರಾಜಕುಮಾರ್ರನ್ನು ಬಿಡುಗಡೆ ಮಾಡಿದ್ದ
ಇಂದಿಗೂ ಗಾಜನೂರಿನ ಜನ ಈ ಕರಾಳ ದಿನವನ್ನು ನೆನಪಿಸಿಕೊಳ್ಳುತ್ತಾರೆ. ವೀರಪ್ಪನ್ಗೆ ಹಿಡಿಶಾಪ ಹಾಕ್ತಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..