Jan 1, 2025, 7:06 PM IST
2024 ಅಂತ್ಯಗೊಂಡಿದೆ.. ವರ್ಷದ ಕೊನೆ ಚಿತ್ರವಾಗಿ ಬಂದ ಮ್ಯಾಕ್ಸ್ ಸಕ್ಸಸ್ ಕಂಡಿದ್ದು, ಚಿತ್ರರಂಗ ಗೆಲುವಿನ ಖುಷಿಯಲ್ಲಿದೆ. ಆದ್ರೆ ಇಡೀ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೆಲುವು , ಸೋಲುಗಳೆಷ್ಟು. ಕನ್ನಡ ಚಿತ್ರೋದ್ಯಮ ಈ ವರ್ಷ ಎಷ್ಟು ಗಳಿಕೆ ಮಾಡ್ತು.. ಎಷ್ಟು ಕಳೆದುಕೊಂಡ್ತು. ಸ್ಯಾಂಡಲ್ವುಡ್ ಪಾಲಿಗೆ 2024 ಎಷ್ಟು ಖುಷಿ ತಂತು..? ಎಷ್ಟು ನೋವು ತಂತು ಅನ್ನೋ ಫ್ಲ್ಯಾಶ್ ಬ್ಯಾಕ್ ಕಹಾನಿ ಇಲ್ಲಿದೆ ನೋಡಿ..ನ್ನಡ ಸಿನಿರಂಗದ 2024ರ ಫ್ಲ್ಯಾಶ್ ಬ್ಯಾಕ್ ನೋಡಹೋದ್ರೆ ಈ ವರ್ಷ ಉದ್ಯಮದ ಪಾಲಿಗೆ ಅಷ್ಟೇನೂ ಲಾಭದಾಯಕವಾಗಿ ಇರಲಿಲ್ಲ. ಹಾಗಂತ ತೆರೆಗೆ ಬಂದ ಸಿನಿಮಾಗಳ ಸಂಖ್ಯೆಯೇನೂ ಕಮ್ಮಿಯಿಲ್ಲ. ಬರೊಬ್ಬರಿ 226 ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ಆದ್ರೆ ಇವುಗಳ ಪೈಕಿ ನಿರ್ಮಾಪಕರಿಗೆ ಲಾಭ ಅಂತ ಮಾಡಿಕೊಟ್ಟಿದ್ದು ಜಸ್ಟ್ 10 ಸಿನಿಮಾಗಳು ಮಾತ್ರ. ಜನ ಚಿತ್ರಮಂದಿರಕ್ಕೆ ಬರೋದು ಈ ವರ್ಷವೂ ಕಡಿಮೆ ಆಯ್ತು. ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಬಾಗಿಲು ಹಾಕಿದ್ವು.ಹೀಗಾದ್ರೆ ನಮ್ಮ ಇಂಡಸ್ಟ್ರಿಯ ಬಿಜಿನೆಸ್ ಗತಿಯೇನು ಅಂತ ಚಿತ್ರಕರ್ಮಿಗಳು ಟೆನ್ಶನ್ ಆಗಿದ್ರು. ಹೀಗೆ ಟೆನ್ಶನ್ನಲ್ಲಿದ್ದವರನ್ನ ಕೊಂಚ ರಿಲ್ಯಾಕ್ಸ್ ಮಾಡಿದ ಸಿನಿಮಾ ಅಂದ್ರೆ ದುನಿಯಾ ವಿಜಯ್ ನಟನೆ ನಿರ್ದೇಶನದ ಭೀಮ ಸಿನಿಮಾ.