ಬೆಂಗಳೂರಿನ ಶಿಫಾ ಆಸ್ಪತ್ರೆಯಲ್ಲಿ ತಬ್ಲಿಘಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ನೀಡಿದ ವೈದ್ಯರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಡಾಕ್ಟರ್‌ನಿಂದ ಚಿಕಿತ್ಸೆ ಪಡೆದವರಿಗೆ ಎದೆಯಲ್ಲಿ ಢವಢವ ಶುರುವಾಗಿದೆ.
ಬೆಂಗಳೂರು(ಏ.12): ತಬ್ಲಿಘಿಗಳಿಗೆ ಚಿಕಿತ್ಸೆ ನೀಡಿದ ಬೆಂಗಳೂರಿನ ವೈದ್ಯರಿಗೂ ಕೊರೋನಾ ಸೋಂಕು ತಗುಲಿರುವ ಆಘಾತಕಾರಿ ಸುದ್ದಿ ಇದೀಗ ಹೊರ ಬಿದ್ದಿದೆ. ಆಸ್ಪತ್ರೆಯನ್ನು ಕ್ಲೋಸ್ ಮಾಡಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನ ಶಿಫಾ ಆಸ್ಪತ್ರೆಯಲ್ಲಿ ತಬ್ಲಿಘಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ನೀಡಿದ ವೈದ್ಯರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಡಾಕ್ಟರ್‌ನಿಂದ ಚಿಕಿತ್ಸೆ ಪಡೆದವರಿಗೆ ಎದೆಯಲ್ಲಿ ಢವಢವ ಶುರುವಾಗಿದೆ.
ಶಿಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.