Indigomusic.com ಪ್ರತಿ ವಾರ ಮ್ಯೂಸಿಕ್‌ನಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆಗಳ ಅನಾವರಣ ಮಾಡುತ್ತಲೇ ಬಂದಿದೆ. ಈ ವಾರ ಇಬ್ಬರು ಕಲಾವಿದರ ಅದ್ಭುತ ಪ್ರತಿಭೆಗಳನ್ನು ಪರಿಚಯದ ಜೊತೆಗೆ ಪ್ರದರ್ಶಿಸಲಾಗಿದೆ. ಹಾಗಾದರೆ ಈ ವಾರದ ಮನಸೂರೆಗೊಂಡಿರುವ ಪ್ರತಿಭೆಗಳು ಯಾರು?
ಬೆಂಗಳೂರು(ಮಾ.31): ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವ Indigomusic.com ಈ ವಾರದ Indie Scoop ಕಾರ್ಯಕ್ರಮದಲ್ಲಿ ಎರಡು ಪ್ರತಿಭೆಗಳ ಅನಾವರಣ ಮಾಡಲಾಗಿದೆ. ಹೊಚ್ಚ ಟ್ರ್ಯಾಕ್ ಲೈಟ್ಸ್ ಹೋ ಡೌನ್ ಮೂಲಕ ಭಾರಿ ಸದ್ದು ಮಾಡುತ್ತಿರುವ ಸೌತ್ ಆಫ್ರಿಕಾದ ಗಾರ್ನೆಟ್ ಮೊದಲ ಪ್ರತಿಭೆ. ಇನ್ನು ಎರಡನೇ ಪ್ರತಿಭೆ ಮುಂಬೈನ ಅತೀವ್. ಪ್ರತಿಭಾನ್ವಿತ ಕಲಾವಿದ ಅತೀವ್ ಧ್ವನಿ ಹಾಗೂ ಹೊಸ ಇಪಿ ಇದೀಗ ಟ್ರೆಂಡಿಂಗ್ ಆಗಿದೆ. ಈ ಪ್ರತಿಭೆಗಳ ಅದ್ಬುತ ಹಾಡನ್ನು ಕೇಳಿ ಆನಂದಿಸಿ.