ಮೈಸೂರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆ

Jan 29, 2023, 3:58 PM IST

ಖ್ಯಾತ ಸಿನಿಮಾ ತಾರೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ಲೋಕಾರ್ಪಣೆ ಇಂದು ಎಚ್‌.ಡಿ ಕೋಟಿ ರಸ್ತೆಯಲ ಹಾಲಾಳು ಗ್ರಾಮದಲ್ಲಿ ನಡೆದಿದೆ. ಸ್ಮಾರಕದ ಆವರಣದಲ್ಲಿ ಡಾ.ವಿಷ್ಣುವರ್ಧನ್‌ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಖ್ಯಾತ ಶಿಲ್ಪ ಕಲಾವಿದ ಅರುಣ್‌ ಯೋಗಿರಾಜ್‌ ಅವರು ಎರಡೂವರೆ ತಿಂಗಳ ಅವಧಿಯಲ್ಲಿ ನಿರ್ಮಿಸಿದ್ದಾರೆ.'ಕರ್ನಾಟಕಕ್ಕೆ ಆ ಸ್ಮಾರಕ ಬಹುದೊಡ್ಡ ಕೊಡುಗೆ ಹಾಗೂ ಮಾದರಿಯಾಗಿ ನಿರ್ಮಿಸಲಾಗಿದೆ. ಇದರ ವೈಶಿಷ್ಟ್ಯತೆ ಕುರಿತು ನಾಳೆ ಕಾರ್ಯಕ್ರಮದಲ್ಲಿ ವಿವರವಾಗಿ ಹೇಳುತ್ತೇನೆ. ಸ್ಮಾರಕದ ಮುಂದೆ ಕಡಗ ಇರಿಸಲಾಗಿದೆ. ಆದರೆ ಸ್ಮಾರಕವೇ ಕಡಗದ ರೂಪದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ನಾಳೆ ವಿವರಿಸುತ್ತೇನೆ' ಎಂದು ಅನಿರುದ್ಧ್ ಮಾತನಾಡಿದ್ದಾರೆ.