Aug 2, 2020, 10:10 AM IST
ಬೆಂಗಳೂರು (ಆ. 02): ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲವರು ಮಹಾನಗರವನ್ನು ಬಿಟ್ಟು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸ್ ಆಗುವುದನ್ನು ನೋಡಿದ್ದೇವೆ. ಇಲ್ಲೊಬ್ಬ ವಿದೇಶಿ ಯುವತಿ ಭಾರತ ಸುತ್ತೋಕೆ ಅಂತ ಬಂದವರು ಭಾರತವನ್ನೇ ತವರು ಮನೆಯನ್ನಾಗಿಸಿಕೊಂಡಿರು ಅಪರೂಪದ ಸಂಗತಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಸ್ಪೇನ್ ದೇಶದ ತೆರೆಸಾ ಎಂಬ ಯುವತಿ ಭಾರತದಲ್ಲಿ ಸುತ್ತಾಡೋಕೆ ಅಂತ ಇಲ್ಲಿಗೆ ಬರುತ್ತಾರೆ. ಲಾಕ್‌ಡೌನ್‌ನಿಂದಾಗಿ ವಾಪಸ್ ತಮ್ಮ ದೇಶಕ್ಕೆ ಹೋಗೋಕಾಗದೇ ಇಲ್ಲಿಯೇ ಉಳಿಯಬೇಕಾಯಿತು.
ಇದು ಅವರ ಬದುಕನ್ನೇ ಬದಲಾಯಿಸಿತು. ಥೆರೆಸಾ ಭಾರತೀಯ ಹೆಣ್ಣು ಮಕ್ಕಳಂತೆ ಹಾಲು ಕರೆಯೋದು, ಕಸ ಗುಡಿಸಿ ರಂಗೋಲಿ ಹಾಕೋದು, ತೋಟಕ್ಕೆ ಗೊಬ್ಬರ ಹಾಕೋದು, ನಾಟಿ ಮಾಡೋದು ಎಲ್ಲವನ್ನು ಕಲಿತಿದ್ದಾರೆ. ಭಾರತೀಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಏನ್ ಹೇಳ್ತಾರೆ ಥೆರೆಸಾ ಇಲ್ಲಿದೆ ನೋಡಿ..!