ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದ RCB..!

ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದ RCB..!

Suvarna News   | Asianet News
Published : Mar 03, 2020, 06:08 PM IST

ಕೆಲದಿನಗಳ ಹಿಂದಷ್ಟೇ ತಮ್ಮ ಲೋಗೋ ಬದಲಾಯಿಸಿ ಸರ್ಫ್ರೈಸ್ ಕೊಟ್ಟಿದ್ದ ಬೆಂಗಳೂರು ಮೂಲದ ಫ್ರಾಂಚೈಸಿ, ಇದೀಗ ಕನ್ನಡಿಗರನ್ನು ಗೆಲ್ಲಲು ಮತ್ತೊಂದು ವಿನೂತನ ಪ್ರಯತ್ನ ಮಾಡಿದೆ. ಈ ಮೂಲಕ ಕನ್ನಡಿಗರನ್ನು ಸೆಳೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

ಬೆಂಗಳೂರು(ಮಾ.03): ಕಳೆದ 12 ಐಪಿಎಲ್ ಆವೃತ್ತಿಗಳಿಂದಲೂ ಕಪ್‌ ಗೆಲ್ಲಲು ವಿಫಲವಾಗುತ್ತಲೇ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿಮಾನಿಗಳು ಕೈಬಿಟ್ಟಿಲ್ಲ. ವರ್ಷದಿಂದ ವರ್ಷಕ್ಕೆ RCB ಅಭಿಮಾನಿಗಳು ಹೆಚ್ಚುತ್ತಲೇ ಹೋಗುತ್ತಿದ್ದಾರೆ.

ಕೆಲದಿನಗಳ ಹಿಂದಷ್ಟೇ ತಮ್ಮ ಲೋಗೋ ಬದಲಾಯಿಸಿ ಸರ್ಫ್ರೈಸ್ ಕೊಟ್ಟಿದ್ದ ಬೆಂಗಳೂರು ಮೂಲದ ಫ್ರಾಂಚೈಸಿ, ಇದೀಗ ಕನ್ನಡಿಗರನ್ನು ಗೆಲ್ಲಲು ಮತ್ತೊಂದು ವಿನೂತನ ಪ್ರಯತ್ನ ಮಾಡಿದೆ. ಈ ಮೂಲಕ ಕನ್ನಡಿಗರನ್ನು ಸೆಳೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

ಆರ್‌ಸಿಬಿ ಕನ್ನಡವನ್ನು ಕಡೆಗಣಿಸುತ್ತಿದೆ ಎನ್ನುವ ಅಪವಾದದಿಂದ ಹೊರಬರಲು ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ವಿನೂತನ ಪ್ರಯತ್ನ ನಡೆಸಿದೆ. ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ