RCB ತನ್ನ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ಹೆಸರನ್ನು ತೆಗೆದುಹಾಕಿ RCB ಅಭಿಮಾನಿಗಳ ಗಾಯದ ಮೇಲೆ ಉಪ್ಪು ಸುರಿದಂತೆ ಮಾಡಿತ್ತು. ಇದೀಗ RCB ಕನ್ನಡಿಗರ ಹೃದಯ ಗೆಲ್ಲುವಂತಹ ಕೆಲಸ ಆರಂಭಿಸಿದೆ.
ಬೆಂಗಳೂರು[ಡಿ.04] ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿದ್ದರೂ, ಫ್ಯಾನ್ ಪಾಲೋವರ್ಸ್ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗಲೇ ಕಳೆದ ಕೆಲ ವರ್ಷಗಳಿಂದ ಕನ್ನಡದ ಆಟಗಾರರನ್ನು ಕಡೆಗಣಿಸಿ ಫ್ರಾಂಚೈಸಿ ಟೀಕೆಗೂ ಗುರಿಯಾಗಿತ್ತು.
ಇವೆಲ್ಲದರ ನಡುವೆ RCB ತನ್ನ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ಹೆಸರನ್ನು ತೆಗೆದುಹಾಕಿ RCB ಅಭಿಮಾನಿಗಳ ಗಾಯದ ಮೇಲೆ ಉಪ್ಪು ಸುರಿದಂತೆ ಮಾಡಿತ್ತು. ಇದೀಗ RCB ಕನ್ನಡಿಗರ ಹೃದಯ ಗೆಲ್ಲುವಂತಹ ಕೆಲಸ ಆರಂಭಿಸಿದೆ.
ಹೌದು, RCB ಒಂದೊಂದು ಟ್ವೀಟ್ ಕೂಡಾ ಅಭಿಮಾನಿಗಳ ಮನಗೆಲ್ಲುವಂತೆ ಮಾಡುತ್ತಿದೆ. ಅಷ್ಟಕ್ಕೂ RCB ಮಾಡುತ್ತಿರುವುದಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...