2009ರ ಐಪಿಎಲ್ 2020ಕ್ಕೆ ಸ್ಪೂರ್ತಿಯಾಗುತ್ತಾ..?

2009ರ ಐಪಿಎಲ್ 2020ಕ್ಕೆ ಸ್ಪೂರ್ತಿಯಾಗುತ್ತಾ..?

Suvarna News   | Asianet News
Published : Mar 17, 2020, 01:58 PM IST

ಐಪಿಎಲ್ ಟೂರ್ನಿ ಆಯೋಜನೆಯೇ ಅನಿಶ್ಚಿತತೆಯಿಂದ ಕೂಡಿದೆ. ಕೊರೋನಾ ಭೀತಿ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಗಳ ಮೇಲೆ ಕರಿ ನರಳು ಬೀರಿದೆ. ಐಪಿಎಲ್ ಟೂರ್ನಿ ನಡೆಯುವುದೇ ಅನುಮಾನ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಬೆಂಗಳೂರು(ಮಾ.17): ಬಹುನಿರೀಕ್ಷಿತ 2020ರ ಐಪಿಎಲ್ ಟೂರ್ನಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಹೀಗಾಗಿ ಒಂದು ವೇಳೆ ಟೂರ್ನಿ ನಡೆದರೂ ಪಂದ್ಯಗಳು ಕಡಿತಗೊಳ್ಳುವ ಸಾಧ್ಯತೆಯಿದೆ.

ಐಪಿಎಲ್ ಟೂರ್ನಿ ಆಯೋಜನೆಯೇ ಅನಿಶ್ಚಿತತೆಯಿಂದ ಕೂಡಿದೆ. ಕೊರೋನಾ ಭೀತಿ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಗಳ ಮೇಲೆ ಕರಿ ನರಳು ಬೀರಿದೆ. ಐಪಿಎಲ್ ಟೂರ್ನಿ ನಡೆಯುವುದೇ ಅನುಮಾನ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಹೀಗಿರುವಾಗಲೇ ಕೇವಲ 37 ದಿನಗಳು ಸಿಕ್ಕರೂ ಸಾಕು, 60 ಐಪಿಎಲ್ ಪಂದ್ಯಗಳನ್ನು ನಡೆಸಬಹುದಾಗಿದೆ. ಯಾಕೆಂದರೆ ಈ ಹಿಂದೆ 2009ರಲ್ಲೂ ಕೇವಲ 37 ದಿನಗಳಲ್ಲಿ ಚುಟುಕು ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿತ್ತು. ಈ ಕುರಿತಾದ ವಿವರ ಇಲ್ಲಿದೆ ನೋಡಿ.