IPL

ಕೊರೋನಾ ವೈರಸ್‌ಗೆ ಹೆದರಿದ್ರಾ ಕ್ರಿಕೆಟ್ ಆಟಗಾರರು..?

Mar 4, 2020, 12:20 PM IST

ನವದೆಹಲಿ(ಮಾ.04):  ವಿಶ್ವದೆಲ್ಲೆಡೆ ಕೊರೋನಾ ವೈರಸ್‌ ಭೀತಿಯಿಂದಾಗಿ ಸಾಕಷ್ಟುಕ್ರೀಡೆಗಳು ರದ್ದಾಗಿದ್ದು, ಕೆಲವು ಮುಂದೂಡಲ್ಪಟ್ಟಿವೆ. ಇದರ ಬೆನ್ನಲ್ಲೇ ಕ್ರೀಡಾಪಟುಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ. 

IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

ಕೊರೋನಾ ವೈರಸ್ ಭಾರತದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ಮೇಲೂ ಕರಿನೆರಳು ಬೀರುವ ಸಾಧ್ಯತೆಯಿದೆ. ಈ ಮಾರಣಾಂತಿಕ ವೈರಸ್ ಭೀತಿಯಿಂದ ಕೆಲ ವಿದೇಶಿ ಕ್ರಿಕೆಟಿಗರು ಭಾರತಕ್ಕೆ ಬರಲು ಹಿಂದೇಟು ಹಾಕುವ ಸಾಧ್ಯತೆಯಿದೆ. 

8 ಐಪಿಎಲ್ ತಂಡದ ಬ್ರ್ಯಾಂಡ್ ವ್ಯಾಲ್ಯೂ, RCB, CSKಗೆ ಇಲ್ಲ ಅಗ್ರಸ್ಥಾನ!

ಇನ್ನು ಇಂಗ್ಲೆಂಡ್ ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರ ಕೈ ಕುಲುಕುವುದಿಲ್ಲ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಜೋ ರೂಟ್‌ ಮಂಗಳವಾರ ಹೇಳಿದ್ದಾರೆ. ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಂಡದ ವೈದ್ಯರ ಸಲಹೆಯಂತೆ ಸಾಕಷ್ಟುಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುವುದು ಎಂದು ರೂಟ್‌ ಹೇಳಿದ್ದಾರೆ. ಕಳೆದ ಸೋಮವಾರ ಇಂಗ್ಲೆಂಡ್‌ ತಂಡ, ಶ್ರೀಲಂಕಾ ಪ್ರವಾಸ ಆರಂಭಿಸಿದ್ದು, ಮಾ.19ರಿಂದ 2 ಟೆಸ್ಟ್‌ ಪಂದ್ಯಗಳ ಸರಣಿ ನಡೆಯಲಿದೆ.