Maybach Car: ಮೋದಿ ಬತ್ತಳಿಕೆಗೆ ಹೊಸ ಕಾರು, ಜಗತ್ತಲ್ಲೇ ಇಲ್ವಂತೆ ಇಂಥಾ ಸುರಕ್ಷಿತ ಕಾರು!

Maybach Car: ಮೋದಿ ಬತ್ತಳಿಕೆಗೆ ಹೊಸ ಕಾರು, ಜಗತ್ತಲ್ಲೇ ಇಲ್ವಂತೆ ಇಂಥಾ ಸುರಕ್ಷಿತ ಕಾರು!

Published : Dec 29, 2021, 03:50 PM ISTUpdated : Dec 29, 2021, 04:01 PM IST

ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ (PM Modi) ಹೊಸ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನ ಸ್ಪೆಷಾಲಿಟಿ ಚರ್ಚೆಯ ವಿಷಯವಾಗಿದೆ. ದೇಶದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಗಣ್ಯರ ಪೈಕಿ  ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. 

ಬೆಂಗಳೂರು (ಡಿ. 29): ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ (PM Modi) ಹೊಸ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನ ಸ್ಪೆಷಾಲಿಟಿ ಚರ್ಚೆಯ ವಿಷಯವಾಗಿದೆ. ದೇಶದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಗಣ್ಯರ ಪೈಕಿ  ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಅಮೆರಿಕದ ಮರ್ಸಿಡಿಸ್‌ ಬೆಂಝ್‌ ಕಂಪನಿ ತಯಾರಿಸಿರುವ ‘ಮೈಬ್ಯಾಕ್‌ ಎಸ್‌ 650’ (Mercedes MayBach) ಕಾರನ್ನು ಇದೀಗ ಪ್ರಧಾನಿ ಮೋದಿಗೆ ನೀಡಲಾಗಿದ್ದು, ಅವರಿಗೆ ಭಾರೀ ಅಪಾಯದ ಸಂದರ್ಭಗಳಲ್ಲೂ ಇದು ಗರಿಷ್ಠ ಸುರಕ್ಷತೆಯನ್ನು ನೀಡಲಿದೆ.

ಇದರೊಂದಿಗೆ ಇದುವರೆಗೆ ರೇಂಜ್‌ ರೋವರ್‌ ವಾಗ್‌, ಟೊಯೋಟಾ ಲ್ಯಾಂಡ್‌ ಕ್ರೂಸರ್‌ ಮೊದಲಾದವುಗಳನ್ನು ತಮ್ಮ ಸಂಚಾರಕ್ಕೆ ಬಳಸುತ್ತಿದ್ದ ಪ್ರಧಾನಿ ಬತ್ತಳಿಕೆಗೆ ಹೊಸ ಕಾರು ಸೇರ್ಪಡೆಯಾದಂತಾಗಿದೆ.  12 ಕೋಟಿ ರು. ಬೆಲೆಬಾಳುವ ಕಾರನ್ನು ಮರ್ಸಿಡಿಸ್‌ ಕಂಪನಿ, ಬೇಡಿಕೆಗೆ ತಕ್ಕಂತೆ ವಿಶೇಷವಾಗಿ ರೂಪಿಸಿಕೊಡುತ್ತದೆ. ಎಕೆ 47 ಗನ್‌ನಿಂದ ನಡೆಸುವ ದಾಳಿ ತಡೆಯುವ, ಕಾರಿನ 2 ಮೀಟರ್‌ ವ್ಯಾಪ್ತಿಯಲ್ಲಿ 15 ಕೇಜಿ ಟಿಎನ್‌ಟಿ ಸ್ಫೋಟವಾದರೂ ರಕ್ಷಣೆ ನೀಡುವ, ವಿಷಾನಿಲ ದಾಳಿ ವೇಳೆ ಒಳಗಿದ್ದವರಿಗೆ ಗಾಳಿಯ ಪೂರೈಕೆಗಾಗಿ ಪ್ರತ್ಯೇಕ ವ್ಯವಸ್ಥೆ, ಇಂಧನ ಟ್ಯಾಂಕ್‌ ಪಂಚರ್‌ ಆದರೆ ಸ್ವಯಂ ಸರಿಪಡಿಸುವ ವಿಶೇಷ ವ್ಯವಸ್ಥೆ, ಏನೇ ಹಾನಿಯಾದರೂ ತ್ವರಿತವಾಗಿ ಸ್ಥಳದಿಂದ ತೆರಳಲು ಅವಕಾಶ ಕಲ್ಪಿಸುವ ಟೈಯರ್‌ ಮೊದಲಾದ ವಿಶೇಷತೆಗಳನ್ನು ಕಾರು ಒಳಗೊಂಡಿದೆ.

 

20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!