IIMC ಹಳೇ ವಿದ್ಯಾರ್ಥಿಗಳ ಘಟಕ ಕೊಚ್ಚಿಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿದೆ. ಇದೇ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಹಳೇ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.
ಕೊಚ್ಚಿ(ಮೇ.01): IIMC ಹಳೆ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 2017-18 ರ ಮಲಯಾಳಂ ಪತ್ರಿಕೋದ್ಯಮ ಬ್ಯಾಚ್‌ನ ಸಂಧ್ಯಾ ಮಣಿಕಂದನ್ ಅವರಿಗೆ ವರ್ಷದ ಭಾರತೀಯ ಭಾಷಾ ವರದಿಗಾರ(ಪ್ರಸಾರ) ಪ್ರಶಸ್ತಿ ನೀಡಲಾಗಿದೆ. ಇನ್ನು ಐಐಎಂಸಿ ಕೊಟ್ಟಾಯಂನ 2017-18ರ ಬ್ಯಾಚ್ ವಿದ್ಯಾರ್ಥಿ ಬಿಜಿನ್ ಸ್ಯಾಮ್ಯುಯೆಲ್‌ಗೆ ಭಾರತೀಯ ಭಾಷಾ ವರದಿಗಾರ (ಪ್ರಕಾಶನ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.