20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಇದ್ದ ಮೋದಿ
ಪ್ರಧಾನಿ ರಕ್ಷಣೆಯ ವಿಚಾರದಲ್ಲಿ ಪಂಜಾಬ್ ಸರ್ಕಾರದ ಮೈಮೆರವು
ರಾಷ್ಟ್ರಾದ್ಯಂತ ಪಂಜಾಬ್ ಸರ್ಕಾರದ ವರ್ತನೆಗೆ ಕಿಡಿ
ನವದೆಹಲಿ (ಜ. 6): ದೇಶದ ಅತ್ಯಂತ ಸುರಕ್ಷಿತ ವ್ಯಕ್ತಿ. ಸಾಲು ಸಾಲು ಬೆಂಗಾವಲು ಪಡೆಯ ರಕ್ಷಣೆ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ನ (SPG) ರಕ್ಷಣಾ ಕೋಟೆಯ ಒಳಗಿರುವ ವ್ಯಕ್ತಿ ದೇಶದ ಪ್ರಧಾನ ಮಂತ್ರಿಗೆ ಪಂಜಾಬ್ ನಲ್ಲಿ ಭದ್ರತಾ ಆತಂಕ ಎದುರಾಗಿದೆ. ಪ್ರಧಾನಿ ಮೋದಿ (Prime Minister Narendra Modi)ಸೇರಿದಂತೆ ಇಡೀ ಬೆಂಗಾವಲು ಪಡೆಯ ವಾಹನಗಳು ಪಂಜಾಬ್ ನ ಮೇಲ್ಸೇತುವೆ ಮೇಲೆ ರೈತರ ಪ್ರತಿಭಟನೆಯ ಕಾರಣ 20 ನಿಮಿಷಗಳ ಕಾಲ ನಿಂತಿದ್ದವು. ಅಕ್ಕ ಪಕ್ಕ ಸಾರ್ವಜನಿಕ ವಾಹನಗಳೂ ತಿರುಗಾಡುತ್ತಿದ್ದವು. ಅಂಥದ್ದೊಂದು ದೊಡ್ಡ ಭದ್ರತಾ ಲೋಪಕ್ಕೆ ಪಂಜಾಬ್ ಸರ್ಕಾರ (Punjab government) ಗುರಿಯಾಗಿದೆ. ಎಷ್ಟೇ ರಾಜಕೀಯ ಕೆಸರೆರಚಾಟ ನಡೆದರೂ ದೇಶದ ಪ್ರಧಾನ ವ್ಯಕ್ತಿಯ ರಕ್ಷಣೆಯಲ್ಲಿ ಮೈಮೆರವು ಸಲ್ಲದು. ಅಂಥದ್ದೊಂದು ದುಸ್ಸಾಸಹ ಪಂಜಾಬ್ ಸರ್ಕಾರ ಮಾಡಿದ್ದು, ಇದರ ಪರಿಣಾಮ ಇನ್ನು ಮುಂದೆಯಷ್ಟೇ ತಿಳಿಯಬೇಕಿದೆ.
PM Modi security breach : ಚನ್ನಿಗೆ ಹೇಳ್ಬಿಡಿ, "ಟೈಗರ್ ಅಭಿ ಜಿಂದಾ ಹೇ" ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮೋದಿ ಅಲೆ!
ಈಗಾಗಲೇ ರಕ್ಷಣೆಯಲ್ಲಿ ಎಸಗಿದ ಪ್ರಮಾದದಿಂದಾಗಿ ಭಾರತ ಇಬ್ಬರು ಪ್ರಧಾನಮಂತ್ರಿಗಳನ್ನು ಕಳೆದುಕೊಂಡಿದೆ. ಅದೇ ಕಾರಣಕ್ಕೆ ಮೋದಿ, ವಾಪಸ್ ದೆಹಲಿಗೆ ತೆರಳುವ ವೇಳೆ "ಜೀವಂತವಾಗಿ ಕಳಿಸಿದ್ದಕ್ಕೆ ಥ್ಯಾಂಕ್ಸ್" ಎಂದಿದ್ದರು. ಮೋದಿ ಅವರ ಕಾರು ಫ್ಲೈ ಓವರ್ ಮೇಲೆ ನಿಂತಿದ್ದು ಇಷ್ಟೆಲ್ಲಾ ಆಘಾತ ಹುಟ್ಟಿಸಿರೋದ್ಯಾಕೆ..?ಅಸಲಿಗೆ ದೇಶದ ಸುರಕ್ಷಿತ ವ್ಯಕ್ತಿಗೇ ಇಂಥಾ ಗತಿ ಹೇಗೆ ಬಂತು..? ಪ್ರಧಾನಿ ಪ್ರಾಣಕ್ಕೇ ಸಂಚಕಾರ ತರಬಲ್ಲ ಪ್ರತಿಭಟನೆ ನಡೆಸೋ ಜರೂರತ್ತು ಯಾರಿಗಿತ್ತು..? ಇವೆಲ್ಲವೂಗಳೂ ಈಗ ಹುಟ್ಟಿರೋ ಪ್ರಶ್ನೆಗಳು. ಪಾಕಿಸ್ತಾನದ ಗಡಿಯ ಸಮೀಪದಲ್ಲೇ ಪ್ರಧಾನಿ ಮೋದಿ ಅವರನ್ನ ನಿಲ್ಲಿಸಿತ್ತು ಪಂಜಾಬ್ ಸರ್ಕಾರದ ಮೈಮರೆವು.. ಹಾಗಾಗಿನೇ, ಇದು ಬರೀ ಬೇಕಂತಲೇ ಮಾಡಿದ ಕುತಂತ್ರ ಅಷ್ಟೇ ಅಲ್ಲ, ಇದು ಪಾಕ್ ಕಾಂಗ್ರೆಸ್ ಸೇರಿ ನಡೆಸಿದ ಷಡ್ಯಂತ್ರ ಅನ್ನೋ ಮಾತೂ ಕೇಳಿಬರ್ತಿದೆ.