Nov 6, 2019, 7:27 PM IST
ನವದೆಹಲಿ (ನ.06): ಹಸಿರುಮನೆ ಪರಿಣಾಮ ಇದೇ ರೀತಿ ಮುಂದುವರಿದರೆ ಮುಂದಿನ ಶತಮಾನ ಆರಂಭವಾಗುವ ಮುನ್ನ, ಅತಿಯಾದ ಉಷ್ಣತೆಯಿಂದ ಪ್ರತಿವರ್ಷ 1 ದಶಲಕ್ಷ ಭಾರತೀಯರು ಸಾವನ್ನಪ್ಪುತ್ತಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಇದನ್ನೂ ನೋಡಿ | ಮರ ಕಡಿಯಲು ಬಿಟ್ಟಿಲ್ಲ ಎಂದು ವಿಷದ ಇಂಜೆಕ್ಷನ್ ಕೊಟ್ಟ ಡಾಕ್ಟರ್ ದಂಪತಿ?...
ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಎಂಬ ಸಂಸ್ಥೆ ಶಿಕಾಗೋ ವಿವಿಯ ಟಾಟಾ ಸೆಂಟರ್ ಫಾರ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ನಡೆಸಿರುವ ಈ ಅಧ್ಯಯನದ ಪ್ರಕಾರ, ಭಾರತದ ವಾರ್ಷಿಕ ಸರಾಸರಿ ತಾಪಮಾನ 2100ರ ವೇಳೆಗೆ 4 ಡಿಗ್ರಿಯಷ್ಟು ಹೆಚ್ಚಾಗಲಿದೆ.