Coronavirus Karnataka
Apr 11, 2020, 12:24 PM IST
ಬೆಂಗಳೂರು(ಏ.11): ಕೊರೋನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡ ಬೆಂಗಳೂರಿನ ಎರಡು ಪ್ರಮುಖ ವಾರ್ಡ್‌ಗಳಾದ ಬಾಪೂಜಿ ನಗರ ಹಾಗೂ ಪಾದರಾಯನಪುರ ಸೀಲ್‌ಡೌನ್ ಮಾಡಲಾಗಿದೆ.
ಲಾಕ್‌ಡೌನ್ ನಿರ್ಲಕ್ಷ್ಯ ಮಾಡಿ ಜನರು ಬೀದಿಗಿಳಿಯುತ್ತಿದ್ದರು. ಹೀಗಾಗಿ ಶುಕ್ರವಾರದಿಂದಲೇ ಜಾರಿಗೆ ಬರುವಂತೆ 14 ದಿನಗಳ ಸೀಲ್‌ಡೌನ್ ಘೋಷಣೆಯಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾದರಾಯನಪುರ ಹಾಗೂ ಬಾಪೂಜಿನಗರಗಳಲ್ಲಿ ಸೀಲ್‌ಡೌನ್ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದರು.
ಸದ್ಯಕ್ಕೆ ಈ ಎರಡು ಪ್ರದೇಶಗಳಲ್ಲಿ ಸೀಲ್‌ಡೌನ್ ಹೇಗಿದೆ? ನಿಜಕ್ಕೂ ಸೀಲ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆಯಾ ಎನ್ನುವುದನ್ನು ಸುವರ್ಣ ನ್ಯೂಸ್ ಪ್ರತಿನಿಧಿಗಳುಗಳು ಪ್ರತ್ಯಕ್ಷ ವರದಿ ಮಾಡಿದ್ದಾರೆ. ಹೇಗಿದೆ ಪರಿಸ್ಥಿತಿ ನೀವೇ ನೋಡಿ.