Dec 14, 2024, 4:43 PM IST
ದತ್ತಜಯಂತಿ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಗೆ ಶಾಂತಿಯುತವಾಗಿ ತೆರೆಬಿದ್ದಿದೆ. ಬಸವನಹಳ್ಳಿ ಮುಖ್ಯರಸ್ಯೆ, ಎಂ ಜಿ ರಸ್ತೆ ಮೂಲಕ ಅಜಾದ್ ಪಾರ್ಕ್ ವರೆಗೆ ಸಾಗಿದ ಮೆರವಣಿಗೆಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾದರು. ಡಿಜೆ ಸೌಂಡ್ಸ್ ಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ವಿವಿಧ ಕಲಾತಂಡಗಳು ಶೋಭಯಾತ್ರೆಗೆ ಮೆರಗು ಕೊಟ್ಟವು. ಶೋಭಯಾತ್ರೆಯ ದೃಶ್ಯ ಡ್ರೋನ್‌ನಲ್ಲಿ ಸೆರೆಯಾಗಿದೆ