Union Budget 2022: ನಿರ್ಮಲಾ ಸೀತಾರಾಮನ್ ಲೆಕ್ಕಾಚಾರದತ್ತ ದೇಶದ ಚಿತ್ತ, ನಿರೀಕ್ಷೆ, ಸವಾಲುಗಳು!

Feb 1, 2022, 11:29 AM IST

ಬೆಂಗಳೂರು (ಫೆ. 01): ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟು ನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್‌ ಇಂದು ಮಂಡನೆಯಾಗಲಿದೆ.

Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

ಹಾಲಿ 5 ಲಕ್ಷ ರು.ವರೆಗೆ ಇರುವ ಆದಾಯ ತೆರಿಗೆ ಮಿತಿ ಹೆಚ್ಚಳ ನಿರೀಕ್ಷೆ ಇದೆ.  80ಸಿ ಅಡಿಯ 1.5 ಲಕ್ಷ ರು.ವರೆಗಿನ ಆದಾಯ ತೆರಿಗೆ ವಿನಾಯ್ತಿ ಮೊತ್ತ ಹೆಚ್ಚಳ ಸಾಧ್ಯತೆ ಇದೆ.  ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಹಿಂಪಡೆವ ಸಾಧ್ಯತೆ ಇದೆ. ಎಲೆಕ್ಟ್ರಿಕ್‌ ವಾಹನ ಉದ್ಯಮಕ್ಕೆ ನೆರವು ನೀಡಲು ಹಲವು ರಿಯಾಯಿತಿ ಘೋಷಣೆಯಾಗುವ ನಿರೀಕ್ಷೆ ಇದೆ.