ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ ಬಡ್ಡಿ ರಹಿತ ಸಾಲ, ಸಾಲ ಮರುಪಾವತಿ ಅವಧಿ 50 ವರ್ಷಕ್ಕೆ ವಿಸ್ತರಣೆ, ಕೇಂದ್ರದಿಂದ ಡಿಜಿಟಲ್ಸ್ ಕರೆನ್ಸಿ ಘೋಷಣೆ ಮಾಡಲಾಗಿದೆ.
ಬೆಂಗಳೂರು (ಫೆ. 01): ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ ಬಡ್ಡಿ ರಹಿತ ಸಾಲ, ಸಾಲ ಮರುಪಾವತಿ ಅವಧಿ 50 ವರ್ಷಕ್ಕೆ ವಿಸ್ತರಣೆ, ಕೇಂದ್ರದಿಂದ ಡಿಜಿಟಲ್ಸ್ ಕರೆನ್ಸಿ ಘೋಷಣೆ ಮಾಡಲಾಗಿದೆ.
ಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.
2 ವರ್ಷ ಕೋವಿಡ್‌ನಿಂದ ಆರ್ಥಿಕತೆ ಹಿಂಜರಿತವಾಗಿತ್ತು. ಈ ಬಾರಿ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶವನ್ನಿಟ್ಟುಕೊಂಡು, ಬಜೆಟ್ ಮಂಡಿಸಲಾಗಿದೆ. ಇದೊಂದು ಆರ್ಥಿಕತೆಯನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು.