ಬೇಕಾ ಬಿಟ್ಟಿ ವಿಂಟ್ ಚೈಮ್ ತೂಗು ಬಿಡೋದು ಅಪಾಯ: ಅದಕ್ಕೂ ಇದೆ ವಾಸ್ತು..!

By Suvarna News  |  First Published Aug 13, 2020, 5:22 PM IST

ಮನೆ ಅಥವಾ ಅಂಗಡಿಗಳಲ್ಲಿ ಭಾಗ್ಯ ಬರುವಂತಾಗಲು ರೋಡ್ ವಿಂಡ್ ಚೈನ್ ತೂಗಿಸಿದರೆ ಸಾಲದು, ಆ ವಿಂಡ್ ಚೈಮ್ ಎಷ್ಟು ಸುತ್ತಿನದು..? ಎಲ್ಲಿದ್ದರೆ ಸರಿ..? ಎಲ್ಲಿ ತೂಗಿಸಿದರೆ ಅಪಾಯ ಎನ್ನುವುದರ ಅರಿವಿರಬೇಕು. ವಿಂಡ್ ಚೈಮ್ ತೂಗಿಸುವವರಿಗೆ ಇಲ್ಲಿದೆ ಕೆಲವು ವಾಸ್ತು ಟಿಪ್ಸ್


ಮನೆಯಲ್ಲಿ ವಿಂಡ್ ಚೈಮ್‌ ಖರೀದಿಸುವವರು ಬಹಳಷ್ಟು ಜನ ಸಂದರ್ಯಕ್ಕಿರಲಿ ಎಂದೇ ತೆಗೆದುಕೊಳ್ಳುತ್ತಾರೆ. ಆದರೆ ಬೇಕಾ ಬಿಟ್ಟಿಯಾಗಿ ಮನೆಯಲ್ಲಿ ವಿಂಟ್ ಚೈಮ್ ತುಗು ಬಿಡುವ ಹಾಗಿಲ್ಲ. ಅದಕ್ಕೂ ಇದೆ. ವಾಸ್ತು ಇದೆ.

ಮನೆ ಅಥವಾ ಅಂಗಡಿಗಳಲ್ಲಿ ಭಾಗ್ಯ ಬರುವಂತಾಗಲು ರೋಡ್ ವಿಂಡ್ ಚೈನ್ ತೂಗಿಸಿದರೆ ಸಾಲದು, ಆ ವಿಂಡ್ ಚೈಮ್ ಎಷ್ಟು ಸುತ್ತಿನದು..? ಎಲ್ಲಿದ್ದರೆ ಸರಿ..? ಎಲ್ಲಿ ತೂಗಿಸಿದರೆ ಅಪಾಯ ಎನ್ನುವುದರ ಅರಿವಿರಬೇಕು. ವಿಂಡ್ ಚೈಮ್ ತೂಗಿಸುವವರಿಗೆ ಇಲ್ಲಿದೆ ಕೆಲವು ವಾಸ್ತು ಟಿಪ್ಸ್

Latest Videos

undefined

ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣ ಈ ಫೋಟೋಗಳ ತನ್ನಿ ವಾಸ್ತು ದೋಷ ನಿವಾರಿಸಿಕೊಳ್ಳಿ..!

ಮನೆ, ಕಚೇರಿ, ಅಂಗಡಿಗಳಲ್ಲಿ ಸಂಪತ್ತು, ಸೌಭಾಗ್ಯ, ಹೊಂದಾಣಿಕೆ ಇರಲು ಕ್ರಮ ಬದ್ಧವಾಗಿ ವಿಂಡ್ ಚೈಮ್ ತೂಗಿಸಬಹುದು. ವಿಂಡ್ ಚೈಮ್ ಸರಿಯಾದ ಜಾಗದಲ್ಲಿ ತೂಗಿಸುವುದರಿಂದ ನಿಮಗೆ ಗುಡ್‌ ಲಕ್ ಬರುತ್ತದೆ.

ಮನೆ ಅಥವಾ ಅಂಗಡಿಯಲ್ಲಿ ದೌರ್ಭಾಗ್ಯ ಹೋಗಲಾಡಿಸಿ, ಶುಭವನ್ನು ತುಂಬಿಕೊಳ್ಳುವುದಕ್ಕೆ 7 ಸುತ್ತಿನ ವಿಂಡ್ ಚೈಮ್ ಅಳವಡಿಸಬಹುದು. ಇದರಿಂದ ಒಳ್ಳೆಯದಾಗುತ್ತದೆ.

ವಾಸ್ತು ದೋಷ; ಫೆಂಗ್ ಶುಯ್‌ನಲ್ಲಿದೆ ಪರಿಹಾರ

ಮನೆಯ ಬೆಡ್‌ ರೂಂನಲ್ಲಿ 9 ಸುತ್ತಿನ ವಿಂಡ್ ಚೈಮ್ ಅಳವಡಿಸಿ. ಇದರಿಂದ ಮಕ್ಕಳ ಮಧ್ಯೆ ಪರಸ್ಪರ ಹೊಂದಾಣಿಕೆ, ಪ್ರೀತಿ, ಗೌರವ ಹೆಚ್ಚುತ್ತದೆ. ಹಾಗೆಯೇ ಅಂಡರ್‌ಸ್ಟಾಂಡಿಂಗ್ ಹೆಚ್ಚುತ್ತದೆ. ಬೆಡ್‌ ರೂಮಿನ ಕಿಟಿಕಿಯ ಬಳಿ ವಿಂಡ್ ಚೈನ್ ತೂಗಿಸಿ ಬಿಡಬೇಕು.

ಮನೆ ಮತ್ತು ಕಚೇರಿಯಲ್ಲಿ ಒಂದೇ ಲೈನ್‌ನಲ್ಲಿ ಸಾಲಾಗಿ ಮೂರು ಕೋಣೆಗಳಿದ್ದರೆ, ನಡುವಿನ ಕೋಣೆಗೆ ವಿಂಡ್ ಚೈಮ್ ಅಳವಡಿಸಬಹುದು. ಇಲ್ಲಿ 5 ಸುತ್ತಿನ ವಿಂಡ್ ಚೈಮ್‌ನ್ನು ಅಳವಡಿಸಿದರೆ ಒಳ್ಳೆಯದು.

click me!