ಸಾಲಮುಕ್ತರಾಗಲು 10 vastu ಸಲಹೆಗಳು

By Suvarna News  |  First Published Nov 28, 2022, 11:09 AM IST

ಕೆಲವೊಮ್ಮೆ ಕಷ್ಟಪಟ್ಟು ದುಡಿದರೂ ಹಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಅನಗತ್ಯವಾಗಿ ಹಣ ಖರ್ಚು ಮಾಡುವ ಹಿಂದೆ ವಾಸ್ತು ದೋಷವೂ ಇರುತ್ತದೆ. ವಾಸ್ತು ದೋಷವನ್ನು ಹೋಗಲಾಡಿಸಲು ಈ ಕ್ರಮಗಳನ್ನು ಅನುಸರಿಸಿ..


ಕೆಲವೊಮ್ಮೆ ಕಷ್ಟಪಟ್ಟು ದುಡಿದರೂ ಹಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಅನಗತ್ಯವಾಗಿ ಹಣ ಖರ್ಚು ಮಾಡುವ ಹಿಂದೆ ವಾಸ್ತು ದೋಷವೂ ಇರುತ್ತದೆ. ಅನೇಕ ಬಾರಿ ಕಷ್ಟಗಳು ಮತ್ತು ಅನಿವಾರ್ಯಗಳಿಂದ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಲಕ್ಷಗಟ್ಟಲೆ ಪ್ರಯತ್ನಗಳ ನಂತರವೂ ಸಾಲವು ಉಳಿದು ನಿದ್ದೆಗೆಡಿಸುತ್ತದೆ. ಇದಲ್ಲದೆ ಎಷ್ಟೇ ದುಡಿದರೂ ಅದಕ್ಕೆ ತಕ್ಕ ಹಣ ಸಿಗುತ್ತಿರುವುದಿಲ್ಲ. ಸುಖಸುಮ್ಮನೆ ಖರ್ಚು ಮಾಡುವುದನ್ನು ತಪ್ಪಿಸಲೂ ಸಾಧ್ಯವಾಗುತ್ತಿರುವುದಿಲ್ಲ. ಇದಕ್ಕೆಲ್ಲ ವಾಸ್ತು ದೋಷ ಕಾರಣವಾಗಿರಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಚಾವಾಗಲು, ವಾಸ್ತು ದೋಷ(vastu dosh)ವನ್ನು ಹೋಗಲಾಡಿಸಲು ವಾಸ್ತು ಶಾಸ್ತ್ರದಲ್ಲಿ ಕೆಲ ವಿಷಯಗಳನ್ನು ಹೇಳಲಾಗಿದೆ.

1. ವಾಸ್ತು ಶಾಸ್ತ್ರದ ಪ್ರಕಾರ, ಸಾಲದ ಕಂತನ್ನು ಮರುಪಾವತಿಸಲು ಮಂಗಳವಾರ(Tuesday)ವನ್ನು ಆಯ್ಕೆ ಮಾಡಬೇಕು. ಈ ದಿನ ಹಣವನ್ನು ಹಿಂದಿರುಗಿಸುವ ಮೂಲಕ, ಸಾಲವು ತ್ವರಿತವಾಗಿ ತೆರವುಗೊಳ್ಳುತ್ತದೆ ಎಂದು ನಂಬಲಾಗಿದೆ.

Tap to resize

Latest Videos

undefined

2. ಮನೆಯ ನೈಋತ್ಯ ಭಾಗದಲ್ಲಿ ನಿರ್ಮಿಸಲಾದ ಸ್ನಾನಗೃಹವು ವ್ಯಕ್ತಿಯ ಮೇಲೆ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮನೆಯ ಈ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸಬಾರದು.

3. ಸಾಲ ಪರಿಹಾರಕ್ಕಾಗಿ ಮನೆ ಅಥವಾ ಅಂಗಡಿಯ ಈಶಾನ್ಯ ದಿಕ್ಕಿನಲ್ಲಿ(North east direction) ಗಾಜನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಗಾಜು ಕೆಂಪು, ಸಿಂಧೂರ ಅಥವಾ ಕೆಂಗಂದು ಬಣ್ಣವನ್ನು ಹೊಂದಿರಬಾರದು.

Name Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿದ್ದವರು ಮಹಾನ್ ಧೈರ್ಯಶಾಲಿಗಳು

4. ವಾಸ್ತು ಪ್ರಕಾರ, ಸಾಧ್ಯವಾದಷ್ಟು ಬೇಗ ಋಣಭಾರವನ್ನು ತೊಡೆದುಹಾಕಲು, ಹಣವನ್ನು ಮನೆ ಅಥವಾ ಅಂಗಡಿಯ ಉತ್ತರ(North) ದಿಕ್ಕಿನಲ್ಲಿ ಇಡಬೇಕು. ಇದನ್ನು ಮಾಡುವುದರಿಂದ ಋಣಭಾರದಿಂದ ಮುಕ್ತರಾಗುವುದರ ಜೊತೆಗೆ ಧನಲಾಭವೂ ಆಗುತ್ತದೆ ಎಂದು ನಂಬಲಾಗಿದೆ.

5. ವಾಸ್ತು ಶಾಸ್ತ್ರದ ಪ್ರಕಾರ ಸಾಲದಿಂದ ಮುಕ್ತಿ ಹೊಂದಲು ಮುಖ್ಯ ದ್ವಾರದ ಬಳಿ ಇನ್ನೊಂದು ಚಿಕ್ಕ ಬಾಗಿಲನ್ನು ಅಳವಡಿಸಬೇಕು.

6. ಸಾಲಕ್ಕೆ ಒಳಪಟ್ಟ ವ್ಯಕ್ತಿಯು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬೇಕು.

7. ನೈಋತ್ಯ ವಲಯದಲ್ಲಿರುವ ಮಲಗುವ ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವ ಕಬೋರ್ಡ್‌ನಲ್ಲಿ ಎಲ್ಲಾ ಹಣ, ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ಇರಿಸಿ. ಇದು ಆದಾಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಸಾಲಗಾರನ ಜೀವನದಲ್ಲಿ ಕಡಿಮೆ ತೊಂದರೆ ಇರುತ್ತದೆ.

ಮೇಷ ರಾಶಿಯವರ ಜತೆ ಲವ್ ರಿಲೇಶನ್ ಶಿಪ್ ಹೇಗೆ?

8. ಮಲಗುವ ಕೋಣೆಯ ವಾಯುವ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಯಾವುದೇ ಬಾಗಿಲು ಅಥವಾ ಕಿಟಕಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಆ ದಿಕ್ಕಿನಲ್ಲಿ ಯಾವುದೇ ಕಿಟಕಿಗಳು ಅಥವಾ ಗೇಟ್ ಇದ್ದರೆ, ಅದನ್ನು ಮುಚ್ಚಿಡಿ.

9. ಹಣದ ಒಳಹರಿವು ಯಾವಾಗಲೂ ಮನೆಯ ಉತ್ತರ ದಿಕ್ಕಿಗೆ ನಿರ್ದೇಶಿಸಲ್ಪಡುತ್ತದೆ. ಆದ್ದರಿಂದ ನೀವು ಯಾವಾಗಲೂ ಈ ದಿಕ್ಕಿನಲ್ಲಿ ನೆಲದಡಿಯಲ್ಲಿ ನೀರಿನ ಟ್ಯಾಂಕ್ ಇರಿಸಬಹುದು.   

10. ಸಾಲವನ್ನು ತೀರಿಸಲು ನಿಮ್ಮ ಮನೆಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಗೆ ಸಿಲುಕುವುದನ್ನು ತಪ್ಪಿಸಲು, ನೈಋತ್ಯ ವಲಯವನ್ನು ಎತ್ತರಕ್ಕೆ ನಿರ್ಮಿಸಿ ಅಥವಾ ಆ ಪ್ರದೇಶದಲ್ಲಿ ಕಬ್ಬಿಣದ ಕೋನ/ಇಟ್ಟಿಗೆ ನಿರ್ಮಾಣವನ್ನು ರಚಿಸಿ. ಇದು ಸಾಲದಿಂದ ಮನೆಯನ್ನು ಸುರಕ್ಷಿತವಾಗಿರಿಸಲು ನಿಮಗೆ ಸಹಾಯ ಮಾಡುತ್ತದೆ. 

ಈ ಸರಳ 10 ವಾಸ್ತು ಸಲಹೆಗಳು ನಿಮ್ಮ ಹಣಕಾಸಿನ ಅಡಚಣೆಯನ್ನು ಸಾಕಷ್ಟು ತಗ್ಗಿಸುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!