Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಬಡತನ ಕಾಡುತ್ತೆ!

By Suvarna News  |  First Published Dec 20, 2022, 4:00 PM IST

ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂಬುದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ವಾಸ್ತು ಪ್ರಕಾರ, ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಬಡತನ ತಪ್ಪೋದಿಲ್ಲ. 


ಮನೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಲಾಗುತ್ತದೆ ಮತ್ತು ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಆದ್ದರಿಂದ ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಪೊರಕೆ ಮನೆಯಲ್ಲಿ ಬಹೂಪಯೋಗಿ ವಸ್ತುವಾಗಿದೆ. ಆದರೆ, ಪೊರಕೆಯನ್ನು ಇಡುವ ಸರಿಯಾದ ವಿಧಾನದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೆಚ್ಚಿನ ಜನರು ತಮ್ಮ ಮನಸ್ಸಿಗೆ ತಕ್ಕಂತೆ ಎಲ್ಲಿ ಬೇಕಾದರೂ ಇಡುತ್ತಾರೆ. ಆದರೆ, ಅದನ್ನು ಎಲ್ಲಿಯಾದರೂ ಮತ್ತು ವಿಶೇಷವಾಗಿ ತಪ್ಪು ದಿಕ್ಕಿನಲ್ಲಿ ಇಡುವುದು ಕೆಲವೊಮ್ಮೆ ತೊಂದರೆಯನ್ನು ಆಹ್ವಾನಿಸಬಹುದು. ವಾಸ್ತವವಾಗಿ, ಯಾವುದೇ ದಿಕ್ಕಿನಲ್ಲಿ ಪೊರಕೆ(broom) ಇಟ್ಟುಕೊಳ್ಳುವುದು ನಿಮ್ಮ ಕುಟುಂಬದಲ್ಲಿ ವಿವಾದಗಳನ್ನು ಹೆಚ್ಚಿಸಬಹುದು, ಜೊತೆಗೆ ಹಣದ ಕೊರತೆಗೆ ಕಾರಣವಾಗಬಹುದು. ಇದಲ್ಲದೆ, ಪೊರಕೆಯನ್ನು ತಪ್ಪು ದಿಕ್ಕಿನಲ್ಲಿಟ್ಟರೆ ಸಹ ಮನೆಯಲ್ಲಿ ವಾಸ್ತು ದೋಷ(Vastu Dosh)ಗಳನ್ನು ಉಂಟು ಮಾಡಬಹುದು.

ಪೊರಕೆ ಇಡಲು ಸರಿಯಾದ ದಿಕ್ಕು ಯಾವುದು?
ನೀವು ಪೊರಕೆ ಮತ್ತು ಒರೆಸುವ ಸಾಧನವನ್ನು ನಿಮ್ಮ ಮನೆಯ ವಾಯುವ್ಯ ಅಥವಾ ಪಶ್ಚಿಮ ಮೂಲೆಯಲ್ಲಿ ಇಡಬೇಕು. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷ ಮತ್ತು ಶಾಂತಿಯೊಂದಿಗೆ ಆಶೀರ್ವಾದವೂ ಉಳಿಯುತ್ತದೆ. ಆದರೆ, ನೀವು ಅದನ್ನು ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆ(Puja Room)ಯಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು(negativity) ಹೆಚ್ಚಿಸುತ್ತದೆ. ಜೊತೆಗೆ ಧನನಷ್ಟವೂ ಉಂಟಾಗುತ್ತದೆ. 

Tap to resize

Latest Videos

undefined

ಮನೆಯ ಈ ಸ್ಥಳಗಳಲ್ಲಿ ಪೊರಕೆ ಇಡುವುದನ್ನು ತಪ್ಪಿಸಿ
ಮನೆಯ ಈ ದಿಕ್ಕುಗಳ ಹೊರತಾಗಿ, ಕೆಲವು ಸ್ಥಳಗಳಲ್ಲಿ ಪೊರಕೆ ಇಡುವುದನ್ನು ತಪ್ಪಿಸಬೇಕು. ನೀವು ಪೊರಕೆಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಮತ್ತು ಮನೆಯ ಹೊರಗೆ ಇಡಬಾರದು. ಇದಲ್ಲದೇ ರಾತ್ರಿ ವೇಳೆ ಪೊರಕೆಯನ್ನು ತಾರಸಿ ಮೇಲೆ ಅಥವಾ ಬಯಲಿನಲ್ಲಿ ಬಿಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ನಷ್ಟವಾಗುತ್ತದೆ. ಹಾಗೆಯೇ ಮಲಗುವ ಕೋಣೆ, ಡ್ರಾಯಿಂಗ್ ರೂಮ್ ಮತ್ತು ಪೂಜಾ ಮನೆಯಲ್ಲಿ ಪೊರಕೆ ಇಡುವುದನ್ನು ತಪ್ಪಿಸಿ.

Palmistry: ಹಸ್ತರೇಖೆ ನೋಡಿ ಸರ್ಕಾರಿ ನೌಕರಿ ಸಿಗುವುದೋ ಇಲ್ಲವೋ ತಿಳಿಯಿರಿ..

ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ಪೊರಕೆಯನ್ನು ಯಾರಿಗಾದರೂ ಸ್ಪರ್ಶಿಸುವುದನ್ನು ತಪ್ಪಿಸಿ ಏಕೆಂದರೆ ಅದು ಲಕ್ಷ್ಮಿಗೆ(Maa Lakshmi) ಅವಮಾನವೆಂದು ಪರಿಗಣಿಸಲಾಗಿದೆ. ಇದಲ್ಲದೆ, ನೀವು ಹೊಸ ಮನೆಗೆ ಹೋದರೆ, ಹೊಸ ಪೊರಕೆಯನ್ನೇ ಬಳಸಿ. ಹಳೆಯ ಪೊರಕೆಯನ್ನು ಹೊಸ ಮನೆಗೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಿ. ಇದಲ್ಲದೆ, ಮುರಿದ ಪೊರಕೆಯನ್ನು(broken broom) ಬಳಸುವುದನ್ನು ತಪ್ಪಿಸಿ.
ಅಲ್ಲದೆ, ನಿಮ್ಮ ಪೊರಕೆ ಮುರಿದರೆ ಅಥವಾ ಹಾನಿಗೊಳಗಾದರೆ, ಅದನ್ನು ಶನಿವಾರದಂದು ಮನೆಯ ಹೊರಗಿನ ಕಸದಲ್ಲಿ ಹಾಕಿ. ಭಾನುವಾರ ಮತ್ತು ಮಂಗಳವಾರ ಹೊರತುಪಡಿಸಿ ಯಾವುದೇ ದಿನ ಪೊರಕೆ ಖರೀದಿಸಿ.
ವಾಸ್ತು ಪ್ರಕಾರ ಪೊರಕೆಯನ್ನು ಎಲ್ಲರಿಗೂ ಕಾಣುವ ಜಾಗದಲ್ಲಿ ಇಡಬೇಡಿ. ಆದ್ದರಿಂದ, ಪೊರಕೆಯನ್ನು ಯಾರಿಗೂ ಕಾಣದ ಜಾಗದಲ್ಲಿ ಮಲಗಿಸಿ ಇಡಿ. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಹಣದ ಸುಗಮ ಹರಿವು ಇರುವುದಿಲ್ಲ. ಪೊರಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿ ಇಡಬೇಡಿ.

Tuesday astro: ಮಂಗಳವಾರ ಈ ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ

ಸಂಜೆ ಸೂರ್ಯಾಸ್ತದ ಬಳಿಕ ಪೊರಕೆ ಬಳಸಬಾರದು. ಹಗಲು ಬೆಳಕಿನಲ್ಲಿ ಮಾತ್ರ ಮನೆಯ ಕಸ ಗುಡಿಸಬೇಕು. 
ಅಡುಗೆ ಮನೆಯಲ್ಲಿ ಪೊರಕೆ ಇಡಬಾರದು, ಇದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!