ಆರೋಗ್ಯ ಚೆನ್ನಾಗಿರಬೇಕು ಎಂದರೆ ಆಹಾರ ಚೆನ್ನಾಗಿರಬೇಕು. ನಾವು ತಯಾರಿಸೋ ಆಹಾರ ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರಬೇಕು ಅಂದ್ರೆ ಅಡುಗೆಮನೆಯ ವಾಸ್ತು ಚೆನ್ನಾಗಿರಬೇಕು.
ಅಡುಗೆ ಕೋಣೆ(kitchen) ಮನೆಯ ಪವರ್ ಹೌಸ್. ಆಹಾರದ ಮುಖಾಂತರ ಮನೆಯ ಪ್ರತಿ ಸದಸ್ಯರಿಗೂ ಎನರ್ಜಿ ದೊರೆಯುವುದು ಇಲ್ಲಿಂದಲೇ. ಅದಕ್ಕೆ ಅಡುಗೆ ಮನೆ ಚೆನ್ನಾಗಿರಬೇಕು. ಬಹಳಷ್ಟು ಜನ ಮನೆ ಕಟ್ಟುವಾಗ ಅಡುಗೆ ಮನೆ ಬಗ್ಗೆ ಹೆಚ್ಚು ಗಮನ ವಹಿಸುವುದಿಲ್ಲ. ಆದರೆ, ಮನೆಯಲ್ಲಿ ಮೊದಲು ಅಡುಗೆ ಕೋಣೆ ವಿಶಾಲವಾಗಿರಬೇಕು, ಜೊತೆಗೆ ವಾಸ್ತು(vastu) ಪ್ರಕಾರ ಇರಬೇಕು. ಆಗಲೇ ಮನೆ ಮಂದಿಯೆಲ್ಲ ಆರೋಗ್ಯ(health)ದಿಂದಲೂ, ಸಂತೋಷದಿಂದಲೂ ಇರಲು ಸಾಧ್ಯ. ಕಿಚನ್ ವಾಸ್ತು ಹೇಗಿರಬೇಕೆಂಬ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳಿದೆ ನೋಡೋಣ.
ಬಾಗಿಲು(door)
ಅಡುಗೆಮನೆಯ ಬಾಗಿಲು ಪೂರ್ವ, ಪಶ್ಚಿಮ, ಉತ್ತರದಲ್ಲಿರಬಹುದು. ದಕ್ಷಿಣದಲ್ಲಿ ಬೇಡ. ಜೊತೆಗೆ, ಯಾವುದೇ ಮೂಲೆಯಲ್ಲಿ ಬಾಗಿಲಿಡುವುದು ಒಳ್ಳೆಯದಲ್ಲ. ಗೋಡೆಯ ಮಧ್ಯಯದಲ್ಲಿದ್ದರೆ ಒಳ್ಳೆಯದು.
undefined
ದಿಕ್ಕು(direction)
ಭೂಮಿ, ಆಕಾಶ, ಗಾಳಿ, ನೀರು, ಬೆಂಕಿ- ಇವು ಅಡುಗೆಮನೆಯಲ್ಲಿ ಸರಿಯಾದ ರೀತಿಯಲ್ಲಿ ಬ್ಯಾಲೆನ್ಸ್ ಆದರೆ ಮನೆಯು ಪಾಸಿಟಿವ್ ಆಗಿರುತ್ತದೆ. ಅಗ್ನಿಯು ಆಗ್ನೇಯ ದಿಕ್ಕಿನ ಒಡೆಯನಾಗಿರುವುದರಿಂದ ಅಡುಗೆ ಕೋಣೆ ಮನೆಯ ಆಗ್ನೇಯ ದಿಕ್ಕಿನಲ್ಲಿರುವುದು ಹೆಚ್ಚು ಸಮಂಜಸ. ಇದಕ್ಕೆ ನಿಮ್ಮ ಮನೆಯಿರುವ ಸ್ಥಳ ಅವಕಾಶ ಮಾಡಿಕೊಡುತ್ತಿಲ್ಲವೆಂದಾದಲ್ಲಿ ವಾಯುವ್ಯ ಭಾಗ ಆರಿಸಿಕೊಳ್ಳಬಹುದು.
ಬಣ್ಣ(colour)
ಅಡುಗೆ ಕೋಣೆಯ ಗೋಡೆ ಹಾಗೂ ನೆಲದ ಬಣ್ಣವು ವಾಸ್ತು ಪ್ರಕಾರ ಹಳದಿ, ಆರೆಂಜ್, ಕೆಂಪು, ಚಾಕೋಲೇಟ್ ಅಥವಾ ಗುಲಾಬಿ ಬಣ್ಣವಿರಬೇಕು. ಕಪ್ಪು ಬಣ್ಣವನ್ನಂತೂ ಅಡುಗೆ ಮನೆಗೆ ಹೊಡೆಸಲೇಬೇಡಿ.
ಸಾಧನಗಳು
ವಿದ್ಯುತ್ ಸಾಧನಗಳಾದ ರೆಫ್ರಿಜರೇಟರ್, ಮೈಕ್ರೋಓವನ್, ಎಲೆಕ್ಟ್ರಿಕ್ ಸ್ಟೌವ್ ಎಲ್ಲವೂ ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು. ಆದರೆ ಸ್ಟೌವ್(stove) ಯಾವತ್ತೂ ಬಾಗಿಲಿಗೆ ಮುಖ ಮಾಡಿರಬಾರದು. ಸಿಲಿಂಡರನ್ನು ಕೂಡಾ ಆಗ್ನೇಯ ಮೂಲೆಯಲ್ಲಿಡುವುದು ಉತ್ತಮ. ಅಡಿಗೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ನಿಲ್ಲಬೇಕು. ಒಂದು ವೇಳೆ ಪಶ್ಚಿಮಕ್ಕೆ ಮುಖ ಮಾಡಿ ನಿಂತು ಅಡಿಗೆ ಮಾಡಿದರೆ ಅದರಿಂದ ಆರೋಗ್ಯ ಸಮಸ್ಯೆಗಳಾಗಬಹುದು.
ಸ್ಟೋರೇಜ್(storage)
ದಿನಸಿ ಸಾಮಗ್ರಿಗಳನ್ನಿಡುವ ಸ್ಥಳ, ಪಾತ್ರೆಗಳನ್ನಿಡುವ ಅಲ್ಮೆರಾವು ಯಾವಾಗಲೂ ಕಡ್ಡಾಯವಾಗಿ ದಕ್ಷಿಣ(South) ಹಾಗೂ ಪಶ್ಚಿಮ(West) ಭಾಗದ ಗೋಡೆಗಳಲ್ಲೇ ಇರಬೇಕು. ಆಗ ಆಹಾರದ ಕೊರತೆ ಎಂದಿಗೂ ಬಾಧಿಸುವುದಿಲ್ಲ.
Parenting Mistakes: ಈ ರಾಶಿಯವರು ಮುದ್ದಿನ ಹೆಸರಲ್ಲಿ ಮಕ್ಕಳನ್ನು ಹಾಳು ಮಾಡುತ್ತಾರೆ!
ನೀರು(water)
ಸಿಂಕ್ ಕಿಚನ್‌ನ ಈಶಾನ್ಯ ಭಾಗದಲ್ಲಿರಲಿ. ಸಾಧ್ಯವಾದಷ್ಟು ಗ್ಯಾಸ್ ಸ್ಟೌವ್‌ನಿಂದ ದೂರವಿರಲಿ. ಕುಡಿಯುವ ನೀರು, ವಾಟರ್ ಬಾಟಲ್ ಎಲ್ಲವೂ ಈ ಮೂಲೆಯಲ್ಲೇ ಇರಬೇಕು. ಕಿಚನ್ ಸ್ಲ್ಯಾಬ್ ಹಳದಿ, ಹಸಿರು ಅಥವಾ ಆರೆಂಜ್ ಬಣ್ಣದಲ್ಲಿರಬೇಕು.|
ವೆಂಟಿಲೇಟರ್ಸ್(ventilators)
ಅಡುಗೆ ಮನೆ ಕತ್ತಲ ಕೋಣೆಯಾಗಿರಬಾರದು. ಅಡುಗೆಮನೆಯ ದೊಡ್ಡ ಕಿಟಕಿಗಳು ಪೂರ್ವ ಭಾಗದಲ್ಲಿದ್ದರೆ ಸಣ್ಣ ಕಿಟಕಿಯು ದಕ್ಷಿಣ ಭಾಗದಲ್ಲಿರಬೇಕು. ಇದರಿಂದ ಬೆಳಗಿನ ಸೂರ್ಯ ಕಿರಣಗಳು(Sun rays) ಅಡುಗೆಮನೆಗೆ ಉತ್ತಮ ಬೆಳಕಿರುವಂತೆ ನೋಡಿಕೊಳ್ಳುತ್ತವೆ. ಪ್ರತಿ ಅಡುಗೆ ಕೋಣೆಯಲ್ಲೂ ಒಂದಾದರೂ ಕಿಟಕಿ ಪೂರ್ವದಲ್ಲಿರಲೇಬೇಕು. ಎಕ್ಸ್ಹಾಸ್ಟ್ ಫ್ಯಾನ್‌ಗಳು ಯಾವಾಗಲೂ ಅಡುಗೆಮನೆಯ ದಕ್ಷಿಣದಲ್ಲಿರಬೇಕು.
Weekly Horoscope: ಈ ರಾಶಿಗೆ ಆಸ್ತಿ ವಿಚಾರದಲ್ಲಿ ಮಹತ್ತರ ಸುದ್ದಿ ಸಿಗಲಿದೆ..
ಡೈನಿಂಗ್(dining)
ಡೈನಿಂಗ್ ಟೇಬಲ್ ಅಡುಗೆ ಮನೆಯ ಈಶಾನ್ಯ ಭಾಗದಲ್ಲಿದ್ದಾಗ ಮನೆ ಮಂದಿಯ ಆರೋಗ್ಯ ಹೆಚ್ಚು ಚೆನ್ನಾಗಿರುತ್ತದೆ. ಆದರೆ, ಯಾವುದೇ ಕಾರಣಕ್ಕೂ ಕಿಚನ್ ಮಧ್ಯೆ ಡೈನಿಂಗ್ ಟೇಬಲ್ ಇಡಬೇಡಿ. ಆಹಾರ ತೆಗೆದುಕೊಳ್ಳುವವರು ಪೂರ್ವ ಅಥವಾ ಉತ್ತರ(North)ಕ್ಕೆ ಮುಖ ಮಾಡಿದ್ದರೆ ಜೀರ್ಣಸಮಸ್ಯೆಗಳು ಇರುವುದಿಲ್ಲ.
ಫ್ಲೋರಿಂಗ್(flooring)
ಸೆರಾಮಿಕ್ ಟೈಲ್ಸ್, ಮೊಸಾಯಿಕ್, ಮಾರ್ಬಲ್ ಫ್ಲೋರ್‌ಗಳು ಅಡುಗೆ ಮನೆ ಉತ್ತಮ. ಅದರಲ್ಲೂ ಸೆರಾಮಿಕ್ ಟೈಲ್ಸ್ ಧೂಳು, ಸ್ಕ್ರ್ಯಾಚ್ ಹಾಗೂ ಕಲೆ ಮುಕ್ತವಾಗಿರುವುದರಿಂದ ಕಿಚನ್‌ಗೆ ಅದೇ ಬೆಸ್ಟ್.