
ನಾವು ಸಾಮಾನ್ಯವಾಗಿ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ದೀಪ ಹಚ್ಚುವುದರ ಜೊತೆಗೆ ಅಗರಬತ್ತಿ ಹಚ್ಚುವುದು ಸಾಮಾನ್ಯ. ಅಗರಬತ್ತಿಯ ಪರಿಮಳದಿಂದ ಪೂಜಾ ಸ್ಥಳದಲ್ಲಿ ಶಾಂತ ಮತ್ತು ಸುಗಂಧಭರಿತ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮನೆ ಮತ್ತು ಮನಸಲ್ಲಿ ಸಕಾರಾತ್ಮಕ ಅಲೆಗಳು ಮೂಡುತ್ತವೆ ಅನ್ನೋದು ನಮ್ಮ ನಂಬಿಕೆ. ಆದರೆ ಒಂದೇ ಸಮಯದಲ್ಲಿ ಎಷ್ಟು ಅಗರಬತ್ತಿ ಹಚ್ಚುವುದು ಸೂಕ್ತ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವರಿಗೆ ಈ ಬಗ್ಗೆ ತುಂಬಾನೆ ಸಂಶಯ ಇದೆ. ಮುಖ್ಯವಾಗಿ ಹೇಳಬೇಕು ಅಂದ್ರೆ, ಪೂಜೆಯಲ್ಲಿ ಎಷ್ಟು ಅಗರಬತ್ತಿ ಹಚ್ಚುತ್ತೇವೆ ಎನ್ನುವುದಕ್ಕಿಂತ ನಮ್ಮ ಭಕ್ತಿ ಮತ್ತು ಮನಸ್ಸಿನ ಪರಿಶುದ್ಧತೆ ಹೆಚ್ಚು ಮುಖ್ಯವಾಗಿದೆ.
ಮನೆಯ ದೇವರ ಕೋಣೆಯಲ್ಲಿ ನಾವು ಪ್ರತಿದಿನ ಪೂಜೆ ಮಾಡುವಾಗ ಒಂದು ಅಥವಾ ಎರಡು ಅಗರಬತ್ತಿ ಹಚ್ಚುವುದು ಸಾಕು. ದೇವರನ್ನು ಪ್ರಸನ್ನಗೊಳಿಸಲು ಹೆಚ್ಚು ಅಗರಬತ್ತಿಗಳನ್ನು ಹಚ್ಚುವ ಅಗತ್ಯವಿಲ್ಲ. ಪೂಜೆಯಲ್ಲಿ ಆಡಂಬರಕ್ಕಿಂತ ನಿಜವಾದ ಭಕ್ತಿ ಮತ್ತು ಶ್ರದ್ಧೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಿಮಗೆ ಒಂದು ಹಚ್ಚಬೇಕು ಅನಿಸಿದರೆ, ಒಂದು ಅಥವಾ ಎರಡು ಹಚ್ಚಬೇಕು ಅನಿಸಿದರೆ ಎರಡು ಹಚ್ಚಿ. ಎಷ್ಟು ಅಗರಬತ್ತಿ ಹಚ್ಚಿದರೂ ಮನಸ್ಸಿನಲ್ಲಿ ಭಕ್ತಿ ಮಾತ್ರ ಹೆಚ್ಚಿರಲಿ.
ಹೆಚ್ಚು ಅಗರಬತ್ತಿ ಹಚ್ಚುವುದು ಅಗತ್ಯವಿಲ್ಲ
ಧಾರ್ಮಿಕ ನಂಬಿಕೆಗಳ ಪ್ರಕಾರ, ಹೆಚ್ಚು ಅಗರಬತ್ತಿ ಹಚ್ಚಿದರೆ ಹೆಚ್ಚು ಪುಣ್ಯ ಸಿಗುತ್ತದೆ ಎಂಬ ಯಾವುದೇ ನಿರ್ದಿಷ್ಟ ನಿಯಮವಿಲ್ಲ. ಅಗತ್ಯಕ್ಕಿಂತ ಹೆಚ್ಚು ಅಗರಬತ್ತಿ ಹಚ್ಚುವುದರಿಂದ ಹೊಗೆ ಹೆಚ್ಚಾಗಬಹುದು. ಇದರಿಂದ ಮನೆಯ ವಾತಾವರಣದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಪೂಜೆಯಲ್ಲಿ ಮಿತವಾಗಿ ಅಗರಬತ್ತಿ ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ.
ಅಗರಬತ್ತಿಗೆ ಧಾರ್ಮಿಕ ಮಹತ್ವವೇನು?
ಆಚಾರ್ಯರ ಪ್ರಕಾರ, ಅಗರಬತ್ತಿಯ ಪರಿಮಳವು ಪೂಜೆಯ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ನಂಬಿಕೆಯಲ್ಲಿ ಅಗರಬತ್ತಿಯ ಸುಗಂಧವನ್ನು ವಾತಾವರಣದಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.
ಅಗರಬತ್ತಿ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಡಿ