ಮರಗಿಡಗಳಿಗೆ ಒಳ್ಳೇದು ಮಾಡೋದು ಬಿಟ್ಟು ಬೇರೆ ತಿಳಿದಿಲ್ಲ. ಅವನ್ನು ಸಾಧ್ಯವಾದಷ್ಚು ಬೆಳೆಸುವುದು ಒಳ್ಳೆಯದೇ. ವಾಸ್ತು ಶಾಸ್ತ್ರದಲ್ಲಿ ಕೆಲ ಸಸ್ಯಗಳನ್ನು ಲಕ್ಕಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಅಪರೂಪದ ಸಸ್ಯ ಬೆಳೆಸಿದರೆ ಮನೆಗೆ ಸಂಪತ್ತು ಆಕರ್ಷಿಸುತ್ತದೆ.
ಸಸ್ಯಗಳು ಮನೆಗೆ ಉತ್ತಮ ಕಳೆ ತರುತ್ತವೆ. ಅವು ಮನೆಯಲ್ಲಿದ್ದರೆ ಮನೆಯ ಗಾಳಿ ಸ್ವಚ್ಛಗೊಳಿಸುವ ಜೊತೆಗೆ, ಧೂಳು, ಕಸ ಮನೆಗೆ ಬರುವುದು ಕಡಿಮೆಯಾಗುತ್ತದೆ. ವಾಸ್ತು(Vastu)ವಿನಲ್ಲಿ ಕೆಲ ಸಸ್ಯಗಳಿಗೆ ಬಹಳ ಮಹತ್ವವಿದೆ.
ಆ ಸಸ್ಯಗಳನ್ನು ವಾಸ್ತುವಿನ ನಿಯಮದ ಪ್ರಾಕಾರವೇ ಬೆಳೆಸಿದಾಗ ಅವು ಮನೆಗೆ ಅದೃಷ್ಟ, ಧನಾತ್ಮಕ ಶಕ್ತಿ, ಸಂಪತ್ತನ್ನು ತರುತ್ತವೆ. ಮತ್ತೆ ಕೆಲವನ್ನು ಮನೆಯಲ್ಲಿ ಬೆಳೆಸಬಾರದೆಂದೂ ವಾಸ್ತು ಹೇಳುತ್ತದೆ.
ಇಂದು ಅಪರೂಪದ ಸಸ್ಯವೊಂದರ ಬಗ್ಗೆ ತಿಳಿಯೋಣ. ಇದಕ್ಕೆ ವಾಸ್ತುವಿನಲ್ಲಿ ಬಹಳ ಮಹತ್ವವಿದೆ. ಇದನ್ನು ಮನೆಯಲ್ಲಿ ಬೆಳೆಸುವುದರಿಂದ ನಿಮ್ಮ ಆಸ್ತಿ ಕೂಡಾ ಬೆಳೆಯುತ್ತದೆ. ಸಂಪತ್ತನ್ನು ಆಕರ್ಷಿಸುತ್ತದೆಂದು ವಾಸ್ತು ಹೇಳುವ ಈ ಗಿಡವೇ ಅಪರಾಜಿತಾ. ಸಾಮಾನ್ಯ ಆಡು ಭಾಷೆಯಲ್ಲಿ ಲಕ್ಷ್ಮಣ ಗಿಡ, ಗುಮಾ ಎಂದೆಲ್ಲ ಕರೆಸಿಕೊಳ್ಳುವ ಅಪರಾಜಿತಾವನ್ನು ಮನೆಯಲ್ಲಿ ನೆಡಲು ಸಲಹೆ ನೀಡುತ್ತದೆ ವಾಸ್ತು.
undefined
ಲಕ್ಷ್ಮಣ ಗಿಡ(Lakshmana plant) ಕಾಣುವುದು ಬಹಳ ಅಪರೂಪ. ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಈ ಸಸ್ಯ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಟ್ಟರೆ ತುಂಬಾ ಶುಭ. ಮನೆಯಲ್ಲಿ ಈ ಗಿಡ ನೆಟ್ಟರೆ ಹಣದ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ತಾಯಿ ಲಕ್ಷ್ಮಿ ಇದರ ಎಲೆಗಳಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ಬೆಳೆಸುವುದಾದರೆ ದೊಡ್ಡ ತೊಟ್ಟಿಯನ್ನು ಬಳಸಬೇಕು. ಅಲ್ಲಿ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಲಕ್ಷ್ಮಣ ಗಿಡದ ಎಲೆ ಬೇಲ್ ಅಥವಾ ವೀಳ್ಯದೆಲೆಯಂತೆ ಇರುತ್ತದೆ. ಈ ಗಿಡವನ್ನು ಎಲ್ಲಿ ನೆಟ್ಟರೂ ಅಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ(Lakshmi) ನೆಲೆಸುತ್ತಾಳೆ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಪರಿಸರ ತಾಜಾವಾಗಿರುತ್ತದೆ.
ಲಕ್ಷ್ಮಣ ಸಸಿ ನೆಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ನೋಡೋಣ.