ಹೊಂದಿದ್ರೆ ಸಿರಿತನ; ನಿಯಮ ಮೀರಿದ್ರೆ ಬಡತನ ತರುವ ಆಮೆ ಉಂಗುರ

By Suvarna News  |  First Published Jun 18, 2023, 5:51 PM IST

'ಆಮೆ ಉಂಗುರ' ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಪರ್ಕ ಹೊಂದಿದೆ ಮತ್ತು ಅದನ್ನು ಧರಿಸಿರುವ ಜನರ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೆ ಧರಿಸುವ ಮುನ್ನ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಸಂಪತ್ತು ಕರಗತೊಡಗುತ್ತದೆ. 


ಆಮೆಯ ಉಂಗುರ ಬಹಳ ವಿಶಿಷ್ಠವಾಗಿದೆ. ಅದು ನೋಡಲೂ ಸೊಗಸು, ಪರಿಣಾಮಕಾರಿಯೂ ಹೌದು. ಇದು ನೇರವಾಗಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ. 'ಆಮೆ ಉಂಗುರ' ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಪರ್ಕ ಹೊಂದಿದೆ ಮತ್ತು ಅದನ್ನು ಧರಿಸಿರುವ ಜನರ ಅದೃಷ್ಟವನ್ನು ಬದಲಾಯಿಸುತ್ತದೆ. ಜ್ಯೋತಿಷ್ಯದಲ್ಲಿ ಆಮೆಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಸಂಪತ್ತನ್ನು ತರುವ ಲಕ್ಷ್ಮಿ ದೇವಿಗೆ ನೇರವಾಗಿ ಸಂಬಂಧಿಸಿದೆ. ಭಗವಾನ್ ವಿಷ್ಣು ಕೂಡಾ ಆಮೆಯ ಅವತಾರ ತಾಳಿದ್ದ. ಆದ್ದರಿಂದ ಲಕ್ಷ್ಮಿ ದೇವಿಯು 'ಆಮೆಯ ಉಂಗುರವನ್ನು' ಧರಿಸಿದವರಿಗೆ ಯಾವಾಗಲೂ ಆಶೀರ್ವಾದವನ್ನು ನೀಡುತ್ತಾಳೆ. ಎರಡನೆಯದಾಗಿ, ಆಮೆಯು ನೀರಿನಲ್ಲಿರುತ್ತದೆ ಮತ್ತು ಲಕ್ಷ್ಮಿ ದೇವಿಯು ನೀರಿನಿಂದ ಹುಟ್ಟಿಕೊಂಡಿದ್ದಾಳೆ. ಅದಕ್ಕಾಗಿಯೇ ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಆಮೆ ಅದೃಷ್ಟ ಮತ್ತು ಶ್ರೀಮಂತ ಎಂದು ಹೇಳಲಾಗುತ್ತದೆ. 

ಆಮೆ ಉಂಗುರವನ್ನು ಧರಿಸುವಾಗ ನೀವು ನಿಯಮಗಳನ್ನು ತಿಳಿದಿದ್ದರೆ, ಅದು ಸಂಪತ್ತಿನ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಜೀವನದಲ್ಲಿ ಸೌಕರ್ಯಗಳ ಕೊರತೆ, ಹಣದ ಕೊರತೆ, ಶಾಂತಿ ಮತ್ತು ಸಂತೋಷ ಕಡಿಮೆಯಾಗುತ್ತಿದ್ದರೆ, 'ಆಮೆಯ ಉಂಗುರ' ಧರಿಸುವುದರಿಂದ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ತರಬಹುದು. ಆದರೆ, ಆಮೆ ಉಂಗುರವನ್ನು ಧರಿಸುವಾಗ ನಿಯಮಗಳನ್ನು ಪಾಲಿಸದಿದ್ದರೆ ಸಂಪತ್ತು ಹೋಗುತ್ತದೆ. 'ಆಮೆ ಉಂಗುರ' ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಲ್ಲ. ಟರ್ಟಲ್ ರಿಂಗನ್ನು ಯಾರು ಧರಿಸಬೇಕು, ಹೇಗೆ ಧರಿಸಬೇಕು ವಿವರಗಳು ಇಲ್ಲಿವೆ. 

Tap to resize

Latest Videos

ಆಮೆ ಉಂಗುರ ಧಾರಣೆ ನಿಯಮಗಳು

  • 'ಟರ್ಟಲ್ ರಿಂಗ್' ಧರಿಸಲು ಹಲವು ನಿಯಮಗಳಿದ್ದು ಎಲ್ಲರೂ ಅದನ್ನು ಧರಿಸುವಂತಿಲ್ಲ. ಜ್ಯೋತಿಷಿಯ ಸಲಹೆಯ ಮೇರೆಗೆ ಇದನ್ನು ಧರಿಸಬೇಕು. 
  • 'ಟರ್ಟಲ್ ರಿಂಗ್' ಧರಿಸುವಾಗ, ಮೊದಲನೆಯದಾಗಿ, ಆಮೆಯ ಮುಖವು ನಿಮ್ಮ ಕಡೆಗೆ ಇರಬೇಕೆಂದು ಗಮನಿಸಿ. ಆಗ ಹಣವು ನಿಮ್ಮ ಕಡೆಗೆ ಆಕರ್ಷಿತವಾಗುತ್ತದೆ ಮತ್ತು ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷ ತುಂಬುತ್ತದೆ.
  • ಆಮೆಯ ಮುಖವು ನಿಮ್ಮ ಮುಖದ ವಿರುದ್ಧ ದಿಕ್ಕಿನಲ್ಲಿದ್ದರೆ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು ಏಕೆಂದರೆ ಸಂಪತ್ತು ಬರುವ ಬದಲು ಅದು ಹೋಗುತ್ತದೆ.
  • ಬಲಗೈಯ ಮಧ್ಯದ ಬೆರಳಿಗೆ ಮಾತ್ರ ಆಮೆಯ ಉಂಗುರವನ್ನು ಧರಿಸಿ.
  • ಇದನ್ನು ಶುಕ್ರವಾರದಂದು ಮಾತ್ರ ಧರಿಸಬೇಕು.
  • ಆಮೆ ಉಂಗುರವನ್ನು ಬೆಳ್ಳಿಯಲ್ಲಿಯೇ ಮಾಡಿಸಿ ಧರಿಸಬೇಕು.
  • 'ಟರ್ಟಲ್ ರಿಂಗ್' ಅನ್ನು ತಯಾರಿಸುವಾಗ, ಆಮೆಯ ಹಿಂಭಾಗದಲ್ಲಿ 'ಶ್ರೀ' ಹಚ್ಚೆ ಹಾಕಿಸಬೇಕು.

    ಅಮವಾಸ್ಯೆಯಂದು ಮಗು ಜನಿಸಿದರೆ ಅದು ಶುಭವೋ, ಅಶುಭವೋ?
     
  • 'ಟರ್ಟಲ್ ರಿಂಗ್' ಅನ್ನು ತೆಗೆಯಬೇಕು ಎಂದು ನಿಮಗೆ ಅನಿಸಿದಾಗ, ಅದನ್ನು ತೆಗೆದು ಎಲ್ಲಿಯೂ ಇಡಬೇಡಿ. ಅದನ್ನು ತೆಗೆದು ಪೂಜೆಯ ಮನೆಯಲ್ಲಿ ಲಕ್ಷ್ಮಿ ದೇವಿಯ ಪಾದದಲ್ಲಿ ಇರಿಸಿ.
  • ಒಮ್ಮೆ ತೆಗೆದಿಟ್ಟು ಮತ್ತೊಮ್ಮೆ ಧರಿಸಬೇಕಾದರೂ ನಿಯಮವಿದೆ. ಹಾಲು ತುಂಬಿದ ಬಟ್ಟಲಿನಲ್ಲಿ ಹಾಕಿ ನಂತರ ಅದನ್ನು ಲಕ್ಷ್ಮಿ ದೇವಿಯ ಪಾದಗಳಿಗೆ ಸ್ಪರ್ಶಿಸಿ ಧರಿಸಿ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕ, ಮೇಷ, ವೃಶ್ಚಿಕ ಮತ್ತು ಮೀನ ರಾಶಿಯ ಜನರು ಜ್ಯೋತಿಷ್ಯದ ಸಲಹೆಯಿಲ್ಲದೆ 'ಆಮೆ ಉಂಗುರ' ಧರಿಸಬಾರದು. ಈ ರಾಶಿಯ ಜನರು ಆಮೆ ಉಂಗುರವನ್ನು ಧರಿಸಿದರೆ, ಅವರು ಗ್ರಹ ದೋಷಗಳಿಗೆ ಬಲಿಯಾಗುತ್ತಾರೆ ಮತ್ತು ಅವರ ನಷ್ಟದ ದಿನಗಳು ಪ್ರಾರಂಭವಾಗುತ್ತವೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!