ಕೆಟ್ಟ ಕಣ್ಣು ನಿಮ್ಮ ಮನೆ ಮೇಲೆ ಬಿದ್ದಿದ್ರೆ 21 ದಿನ ತಪ್ಪದೆ ಈ ಕೆಲ್ಸ ಮಾಡಿ

Published : Jun 09, 2025, 04:36 PM ISTUpdated : Jun 09, 2025, 04:41 PM IST
negative energy

ಸಾರಾಂಶ

ಪ್ರತಿಯೊಬ್ಬ ವ್ಯಕ್ತಿಗೆ ನೆಮ್ಮದಿ ನೀಡುವ ಜಾಗ ಮನೆ. ಈ ಮನೆಯೇ ನರಕವಾದ್ರೆ ಬದುಕೋದು ಕಷ್ಟ. ನಿಮ್ಮ ಮನೆ ವಾತಾವರಣ ಹಾಳಾಗಲು ನಾನಾ ಕಾರಣವಿರಬಹುದು. ನಕಾರಾತ್ಮಕ ಶಕ್ತಿ ಪ್ರವೇಶವಾಗಿದ್ರೆ ಅದನ್ನು ಈ ಟಿಪ್ಸ್ ಮೂಲಕ ಶಮನಗೊಳಿಸಿ.

ಸುಂದರವಾಗಿ ರೆಡಿಯಾದ ಯಾರನ್ನ ಕಂಡ್ರೂ ದೃಷ್ಟಿ ತೆಗೆಸ್ಕೊಳ್ಳಿ, ತುಂಬಾ ಚೆನ್ನಾಗಿ ಕಾಣ್ತಿದ್ದೀರಿ ಅನ್ನೋದು ವಾಡಿಗೆ. ಬರೀ ಸುಂದರವಾಗಿ ಕಾಣೋರಿಗೆ ಮಾತ್ರವಲ್ಲ, ಒಳ್ಳೆ ಕೆಲ್ಸ ಮಾಡಿದ್ರೆ, ಉತ್ತಮ ಉದ್ಯೋಗ ಸಿಕ್ಕಿದ್ರೆ, ಐಷಾರಾಮಿ ಜೀವನ ನಡೆಸ್ತಿದ್ರೆ ಅವರಿಗೂ ದೃಷ್ಟಿ ಬೀಳೋದಿದೆ. ಕೆಟ್ಟ ದೃಷ್ಟಿಯಿಂದ ಆರಾಮವಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿತಾನೆ. ಕೆಲವರ ಕಣ್ಣು ಅತೀ ಕೆಟ್ಟದ್ದು, ಅಪ್ಪಿತಪ್ಪಿಯೂ ಅವ್ರ ದೃಷ್ಟಿಗೆ ಬೀಳ್ಬೇಡಾ ಎನ್ನುವ ಮಾತನ್ನು ಹಿರಿಯರು ಹೇಳ್ತಿರುತ್ತಾರೆ. ಆಗಾಗ ಮಕ್ಕಳು, ಮೊಮ್ಮಕ್ಕಳ ದೃಷ್ಟಿ ತೆಗಿತಿರ್ತಾರೆ. ಬರೀ ವ್ಯಕ್ತಿ ಮಾತ್ರ ದೃಷ್ಟಿ ಬೀಳೋದಿಲ್ಲ. ವಸ್ತು, ಆಸ್ತಿ, ನಿಮ್ಮ ಮನೆಗೂ ಕೆಲವೊಮ್ಮೆ ಕೆಟ್ಟ ದೃಷ್ಟಿ ನಾಟುತ್ತೆ. ಇದ್ರಿಂದ ಮನೆ ವಾತಾವರಣ ಸಂಪೂರ್ಣ ಬದಲಾಗುತ್ತೆ. ಸಂತೋಷವಾಗಿದ್ದ ಮನೆಯಲ್ಲಿ ನಾನಾ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತೆ. ಮನೆಯವರು ಅನಾರೋಗ್ಯಕ್ಕೆ ತುತ್ತಾಗ್ತಾರೆ. ಬರೀ ದೃಷ್ಟಿಯಿಂದ ಮಾತ್ರವಲ್ಲ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡೋದ್ರಿಂದಲೂ ಈ ಎಲ್ಲ ಸಮಸ್ಯೆ ಕಾಡುತ್ತೆ.

ಮನೆಗೆ ನಕಾರಾತ್ಮಕ ಶಕ್ತಿ (negative energy) ಪ್ರವೇಶ ಮಾಡಿದೆ ಅನ್ನೋದನ್ನು ಪತ್ತೆ ಮಾಡೋದು ಕಷ್ಟ. ನಕಾರಾತ್ಮಕ ಶಕ್ತಿಯಾಗ್ಲಿ, ಸಕಾರಾತ್ಮಕ ಶಕ್ತಿಯಾಗ್ಲಿ ನಿಮ್ಮ ಕಣ್ಣಿಗೆ ಕಾಣೋದಿಲ್ಲ. ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಿದೆ ಎನ್ನುವ ಅನುಮಾನ ಬಂದ್ರೆ ನೀವು ಎಚ್ಚೆತ್ತುಕೊಳ್ಳೋದು ಒಳ್ಳೆಯದು. ಸತತ 21 ದಿನಗಳ ಕಾಲ ನೀವು ಒಂದು ಕೆಲ್ಸವನ್ನು ನಿತ್ಯ ಪಾಲನೆ ಮಾಡಿದ್ರೆ ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಬಹುದು.

ನಕಾರಾತ್ಮಕ ಶಕ್ತಿ ಓಡಿಸಲು ಹೀಗೆ ಮಾಡಿ : ನೀವು ಮೊದಲು ಧೂಪ ಬೆಳಗುವ ಕಪ್ ತೆಗೆದುಕೊಳ್ಳಿ. ಅದಕ್ಕೆ , ಭೀಮಸೇನಿ ಕರ್ಪೂರವನ್ನು ಹಾಕಿ. ಹಳದಿ ಸಾಸಿವೆ, ಲವಂಗ ಮತ್ತು ಲವಂಗದ ಎಲೆಯನ್ನು ಹಾಕಿ, ಕರ್ಪೂರವನ್ನು ಬೆಳಗಿಸಿ. ಈ ಕರ್ಪೂರದ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ತೋರಿಸಬೇಕು. ಮನೆಯ ಹೊರಗಿರುವ ಅಥವಾ ಮೆಟ್ಟಿಲ ಕೆಳಗಿರುವ ಗಿಡಗಳಿಂದ ಹಿಡಿದು ಬಾತ್ ರೂಮ್, ಬೆಡ್ ರೂಮ್ ಸೇರಿದಂತೆ ಮನೆಯ ಎಲ್ಲ ಕಡೆ ಧೂಪದ ಹೊಗೆ ಹೋಗುವಂತೆ ಮಾಡಿ. ನೀವು ಸತತ 21 ದಿನಗಳ ಕಾಲ ಇದನ್ನು ಮಾಡಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಇದನ್ನೂ ಮಾಡಿ ನೋಡಿ : ಧೂಪ ಬೆಳಗುವ ಜೊತೆಗೆ ನೀವು ಸಿಂಪಲ್ ಟ್ರಿಕ್ ಗಳನ್ನು ಫಾಲೋ ಮಾಡ್ಬಹುದು. ನಿಮ್ಮ ಮನೆಯ ಮುಖ್ಯ ದ್ವಾರ ಶುದ್ಧವಾಗಿರಬೇಕು. ಪ್ರತಿಯೊಂದು ಶಕ್ತಿಯ ಪ್ರವೇಶ ಅಲ್ಲಿಂದಲೇ ಆಗುತ್ತೆ. ಹಾಗಾಗಿ ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ. ಇದು ಮನೆಗೆ ಮಂಗಳಕರ. ಮನೆಯಲ್ಲಿ ಶುಭ ಘಟನೆಗಳು ನಡೆಯಲು ಕಾರಣವಾಗುತ್ತದೆ.

ಪ್ರತಿ ದಿನ ನಾವು ಮನೆಯನ್ನು ಸ್ವಚ್ಛಗೊಳಿಸ್ತೇವೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಅನ್ನಿಸಿದ್ರೆ ಇಲ್ಲವೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎನ್ನಿಸಿದ್ರೆ ಮನೆಯನ್ನು ಸ್ವಚ್ಛಗೊಳಿಸುವ ನೀರಿಗೆ ಉಪ್ಪನ್ನು ಬೆರೆಸಿ. ಆ ನೀರಿನಿಂದ ಮನೆ ಕ್ಲೀನ್ ಮಾಡಿದ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೇಗೆ ಪತ್ತೆ ಮಾಡಿ : ಕುಟುಂಬದಲ್ಲಿ ಸದಾ ಗಲಾಟೆ, ಹಲವು ಚಿಕಿತ್ಸೆ ನಂತ್ರವೂ ಗುಣವಾಗದ ದೀರ್ಘಕಾಲದ ಕಾಯಿಲೆ, ಪ್ರಮುಖ ಕೆಲಸ ಕೊನೆ ಹಂತದಲ್ಲಿ ನಿಲ್ಲುವುದು, ಸಾಕಷ್ಟು ಪ್ರಯತ್ನಗಳ ನಂತರವೂ ಅಪೇಕ್ಷಿತ ಫಲಿತಾಂಶ ಸಿಗದೆ ಹೋಗುವುದು, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಿವಾದ, ಕೈನಲ್ಲಿ ಹಣ ನಿಲ್ಲದೆ ಇರುವುದು, ಕೆಟ್ಟ ಸ್ವಪ್ನ, ನಿದ್ರೆ ಕೊರತೆ ಇವೆಲ್ಲವೂ ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.

PREV
Read more Articles on
click me!

Recommended Stories

Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು
Vaastu tips: ಹೊಸ ವರ್ಷಕ್ಕೆ ಕಾಲಿಡುವ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ!