ಪ್ರೀತಿಯನ್ನು ಆಕರ್ಷಿಸುವುದು ಹೇಗೆ? ಫೆಂಗ್ ಶುಯ್‌ನಲ್ಲಿ ಟ್ರಿಕ್ಸ್ ಇವೆ!

Published : Jun 12, 2022, 12:58 PM IST
ಪ್ರೀತಿಯನ್ನು ಆಕರ್ಷಿಸುವುದು ಹೇಗೆ? ಫೆಂಗ್ ಶುಯ್‌ನಲ್ಲಿ ಟ್ರಿಕ್ಸ್ ಇವೆ!

ಸಾರಾಂಶ

ಪ್ರೀತಿ ಎಷ್ಟು ಸಿಕ್ಕಿದರೂ ಬೇಕು ಎನ್ನುವ ಭಾವ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲರೂ ಪ್ರೀತಿಯಲ್ಲಿ ಅದೃಷ್ಟವಂತರಲ್ಲ. ಪ್ರೀತಿಯನ್ನು ನಮ್ಮತ್ತ ಆಕರ್ಷಿಸಲು ಏನು ಮಾಡಬಹುದು ಎಂಬ ಬಗ್ಗೆ ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶುಯ್‌ನಲ್ಲಿ ತಿಳಿಸಲಾಗಿದೆ. 

ಪ್ರೀತಿಯಲ್ಲಿ ಎಲ್ಲರೂ ಅದೃಷ್ಟವಂತರಲ್ಲ. ನಮ್ಮಲ್ಲಿ ಅನೇಕರು ತಮ್ಮನ್ನು ಪ್ರೀತಿಸುವ ಏಕೈಕ ಜೀವಿಗಾಗಿ ಹುಡುಕಾಡುತ್ತಿರುತ್ತಾರೆ, ಹಂಬಲಿಸುತ್ತಿರುತ್ತಾರೆ. ಅಂಥವರನ್ನು ಪಡೆಯಲು ಕೈಲಾದ ಎಲ್ಲವನ್ನೂ ಮಾಡುತ್ತಿರುತ್ತಾರೆ. ಹೀಗೆ ಎಲ್ಲವನ್ನೂ ಮಾಡಲು ಸಿದ್ಧರಾಗಿರುವವರು ನೀವಾಗಿದ್ದರೆ ಫೆಂಗ್ ಶುಯ್‌(Feng Shui)ಗೆ ಒಂದು ಅವಕಾಶ ಕೊಟ್ಟು ನೋಡಬಾರದೇಕೆ? ಈ ವಾಸ್ತು ಶಾಸ್ತ್ರವು ಪ್ರೀತಿಯನ್ನು ನಿಮ್ಮತ್ತ ಆಕರ್ಷಿಸಲು ಏನು ಮಾಡಬೇಕೆಂಬ ಬಗ್ಗೆ ಕೆಲ ಟಿಪ್ಸ್ ನೀಡಿದೆ. ಸಂಗಾತಿಯಿಂದ ಪ್ರೀತಿ(Love)ಯ ಕೊರತೆಯಾಗುವವರೂ ಇದನ್ನು ಪ್ರಯತ್ನಿಸಬಹುದು.

ಗುಲಾಬಿ ಬಣ್ಣದ ತಾಜಾ ಬೆಡ್ ಶೀಟ್‌ಗಳು(Fresh bed sheets in pink hues)
ಕೇವಲ ನೈರ್ಮಲ್ಯಕ್ಕಾಗಿ ಅಲ್ಲ, ಉತ್ತಮ ಪ್ರೀತಿಯ ಜೀವನಕ್ಕಾಗಿ ಕೂಡಾ ತಾಜಾ ಬೆಡ್‌ಶೀಟ್ ಬಳಸಿ. ಫೆಂಗ್ ಶುಯ್ ತಜ್ಞರ ಪ್ರಕಾರ, ತಾಜಾ ಬೆಡ್ ಶೀಟ್‌ಗಳ ಬಳಕೆಯು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲಸ ಮಾಡುತ್ತದೆ. ಗುಲಾಬಿ ಬಣ್ಣವು ಪ್ರೀತಿಯನ್ನು ಪ್ರತಿನಿಧಿಸುತ್ತದೆ.

ಕೆಂಪು ಬಣ್ಣದ ಬಳಕೆ
ನಿಮ್ಮ ಕೋಣೆಯಲ್ಲಿ ಕೆಂಪು(red) ಬಣ್ಣದ ಡೆಕೋರೇಟಿವ್ ವಸ್ತುಗಳನ್ನು ಬಳಸಿ. ಇದು ಉತ್ಸಾಹವನ್ನು ತರುತ್ತದೆ, ಪ್ರೀತಿಯನ್ನು ಆಕರ್ಷಿಸುತ್ತದೆ. ಆದರೆ, ಅತಿಯಾಗಿ ಕೆಂಪು ಬಣ್ಣದ ಬಳಕೆ ಬೇಡ. ಇಡೀ ಗೋಡೆಗೆ ಹಚ್ಚಿಡಬೇಡಿ. ಏಕೆಂದರೆ ಕೆಂಪು ಹೆಚ್ಚಾದರೆ ಆಕ್ರಮಣಶೀಲತೆ ಮತ್ತು ಕೋಪವನ್ನು ಆಕರ್ಷಿಸುತ್ತದೆ. 

ವಸ್ತುಗಳನ್ನು ಜೋಡಿಸಿ
ಕೋಣೆಯ ಅಲಂಕಾರದಲ್ಲಿ ಜೋಡಿ ವಸ್ತುಗಳನ್ನು ಬಳಸಿ. ಜೋಡಿಯಾಗಿರುವ ಎರಡು ಕುರ್ಚಿಗಳು(chairs), ಎರಡು ಹಂಸಗಳು ಅಥವಾ ಅಲಂಕಾರಿಕ ತುಣುಕುಗಳನ್ನು ಪಡೆಯಿರಿ. ಯಾವುದಕ್ಕೂ ಒಬ್ಬರ ಶಕ್ತಿಯನ್ನು ತೋರಿಸಲು ಬಿಡಬೇಡಿ. ಅದು ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರತಿಫಲಿಸುತ್ತದೆ. ಹೀಗಾಗಿ, ಕೋಣೆಯಲ್ಲಿ ಎದುರಾ ಬದುರಾಗಿ ಎರಡು ಕುರ್ಚಿಗಳಿರಲಿ. 

ಈ ರಾಶಿಗಳಿಗೆ ನಿದ್ದೆಗಿಂತ ಹೆಚ್ಚಿನದು ಮತ್ತೇನೂ ಇಲ್ಲ!

ಹೆಚ್ಚುವರಿ ದಿಂಬುಗಳನ್ನು ತಪ್ಪಿಸಿ
ಹಲವರಿಗೆ ಹಲವಾರು ದಿಂಬುಗಳು(pillows) ಮತ್ತು ಸ್ಟಫ್ಡ್ ಆಟಿಕೆಗಳ ಬಗ್ಗೆ ಅಪಾರ ಪ್ರೀತಿ ಇರುತ್ತದೆ. ಮಂಚದ ತುಂಬಾ ದಿಂಬುಗಳು ಹಾಗೂ ಸಾಫ್ಟ್ ಟಾಯ್ಸ್ ತುಂಬಿರುತ್ತವೆ. ಆದರೆ, ಫೆಂಗ್ ಶುಯ್ ಇದನ್ನು ಬೆಂಬಲಿಸುವುದಿಲ್ಲ. ಹೀಗೆ ಮಂಚದ ತುಂಬಾ ದಿಂಬುಗಳಿದ್ದರೆ ಅದು ಅಸ್ತವ್ಯಸ್ತವಾಗಿ ಕಾಣುತ್ತದೆ ಮತ್ತು ನಿಮ್ಮ ಜೀವನದಲ್ಲಿ ಬೇರೆ ಯಾವುದೇ ಜೀವಿಗಳಿಗೆ ಅವಕಾಶವಿಲ್ಲ ಎಂದು ಸೂಚಿಸುತ್ತದೆ. 

ತಾಜಾ ಹೂವುಗಳು(fresh flowers)
ನಿಮ್ಮ ಮನೆಯನ್ನು ಪ್ಲ್ಯಾಸ್ಟಿಕ್ ಹೂವಿನಿಂದ ಅಲಂಕರಿಸಬೇಡಿ. ಯಾವಾಗಲೂ ತಾಜಾ ಹೂಗಳನ್ನು ಅಲಂಕಾರಕ್ಕೆ ಬಳಸಿ. ವಾಸ್‌ನಲ್ಲಿ ತಾಜಾ ಹೂವನ್ನಿರಿಸಿ. ಇದು ನಿಮ್ಮ ಮನೆಗೆ ಹೊಸ ಜೀವನವನ್ನು ಆಕರ್ಷಿಸುತ್ತದೆ. ನಿಮ್ಮ ವಾಸಸ್ಥಾನಕ್ಕೆ ಉತ್ತಮ ಸುವಾಸನೆಯನ್ನು ನೀಡುತ್ತದೆ ಮತ್ತು ಧನಾತ್ಮಕ ಶಕ್ತಿ ಆಕರ್ಷಿಸುತ್ತದೆ.

ಉರಿಯುತ್ತಿರುವ ಮೇಣದ ಬತ್ತಿ(Burning candle)
ತಜ್ಞರ ಪ್ರಕಾರ, ಬೆಂಕಿ ಹೊಸ ಸಂಬಂಧಗಳನ್ನು ಹುಟ್ಟು ಹಾಕುತ್ತದೆ ಮತ್ತು ಪ್ರೀತಿಯನ್ನು ಜೀವಂತವಾಗಿರಿಸುತ್ತದೆ. ಆದ್ದರಿಂದ ನಿರಂತರವಾಗಿ ಮೇಣದಬತ್ತಿಯನ್ನು ಮನೆಯಲ್ಲಿ ಉರಿಸಿ. ಅದು ಪ್ರೀತಿಯನ್ನು ಆಕರ್ಷಿಸುತ್ತದೆ. 

ಕೇತು, ಶನಿ , ಪಿತೃ ದೋಷ ನಿವಾರಣೆಗೆ ಬೇವಿನ ಉಪಾಯ

ಅರೋಮಾಥೆರಪಿ(Aromatherapy)
ಸಾಮಾನ್ಯವಾಗಿ ಸುಗಂಧವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಹಲವರು ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಮನೆಯಲ್ಲಿ ಸುಗಂಧ ತುಂಬಿದ್ದರೆ ಮನಸ್ಸು ಆಹ್ಲಾದಕರವಾಗಿರುತ್ತದೆ. ಇತರರನ್ನು ಆಹ್ವಾನಿಸುವ ವಾತಾವರಣವನ್ನು ಮನೆಗೆ ತರುತ್ತದೆ. ಆಗ ಪ್ರೀತಿ ಕೂಡಾ ಮನೆಯಲ್ಲಿ ಸುಗಂಧದಂತೆ ತುಂಬುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು
Vaastu tips: ಹೊಸ ವರ್ಷಕ್ಕೆ ಕಾಲಿಡುವ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ!