Holi Tips : ದುಡ್ಡಿನ ಸಮಸ್ಯೆ ದೂರ ಮಾಡಲು ಹೋಳಿ ಬರ್ತಿದೆ, ಹೀಗ್ ಮಾಡಿ

By Suvarna News  |  First Published Feb 24, 2023, 5:55 PM IST

ಹೋಳಿ ಹಬ್ಬ ಹತ್ತಿರ ಬರ್ತಿದ್ದಂತೆ ಜನರಲ್ಲಿ ಸಂತೋಷ ಮನೆ ಮಾಡುತ್ತದೆ. ಹೋಳಿ ಸಂದರ್ಭದಲ್ಲಿ ಹೋಲಿಕಾ ದಹನ ನಡೆಯುತ್ತದೆ. ಕೆಟ್ಟದ್ದನ್ನು ಸುಡುವ ದಿನ ಇದು. ಈ ದಿನ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಕಷ್ಟ ನಿವಾರಣೆಯಾಗುತ್ತದೆ.
 


ಹೋಳಿ ಎಂದರೆ ಬಣ್ಣಗಳ ಹಬ್ಬ. ಎಲ್ಲೆಡೆ ರಂಗು ರಂಗಿನ ಪಿಚಕಾರಿಗಳು ರಾರಾಜಿಸುವ ರಂಗಿನ ಹಬ್ಬ. ಇದು ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಧಾರ್ಮಿಕ ಹಿನ್ನಲೆ ಕೂಡ ಇದೆ.

ಹೋಳಿ (Holi) ಹಿನ್ನಲೆ :  ಹಿರಣ್ಯ ಕಶ್ಯಪು ಎಂಬ ರಾಜನ ಮಗ ಪ್ರಹ್ಲಾದ. ಪ್ರಹ್ಲಾದ (Prahlada) ವಿಷ್ಣುವಿನ ಪರಮ ಭಕ್ತ. ಆದರೆ ಹಿರಣ್ಯ ಕಶ್ಯಪುವಿಗೆ ವಿಷ್ಣುವಿನ ಮೇಲೆ ದ್ವೇಷವಿತ್ತು. ಹಾಗಾಗಿ ಆತ ಮಗನ ವಿಷ್ಣುನಾಮ ಸ್ಮರಣೆಯನ್ನು ಸಹಿಸುತ್ತಿರಲಿಲ್ಲ. ಮಗನ ಹರಿನಾಮ ಸ್ಮರಣೆಯನ್ನು ನಿಲ್ಲಿಸಲು ಹಿರಣ್ಯ ಕಶ್ಯಪು ಅನೇಕ ಪ್ರಯತ್ನಗಳನ್ನು ಮಾಡಿ ಸೋಲುತ್ತಾನೆ. ನಂತರ ತನ್ನ ತಂಗಿ ಹೋಲಿಕಾಳ ಸಹಾಯ ಪಡೆದು ಮಗನನ್ನು ಸಾಯಿಸಲು ಮುಂದಾಗುತ್ತಾನೆ. 

Tap to resize

Latest Videos

undefined

ಹೋಲಿಕಾಳ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರನ್ನು ಸುಟ್ಟು ಭಸ್ಮ ಮಾಡುವ ಶಕ್ತಿ ಅವಳಿಗಿರುತ್ತದೆ. ಆಕೆ ಪ್ರಹ್ಲಾದನನ್ನು ಕೂಡ ತನ್ನ ತೊಡೆಯ ಮೇಲೆ ಕುಳಿಸಿಕೊಳ್ಳುತ್ತಾಳೆ. ಪ್ರಹ್ಲಾದನ ವಿಷ್ಣುಭಕ್ತಿಯಿಂದ ಹೋಲಿಕಾಳೇ ಸುಟ್ಟು ಭಸ್ಮವಾಗುತ್ತಾಳೆ. ಹೋಲಿಕಾಳ ದಹನವನ್ನೇ ಇಂದು ಹೋಳಿ ಹುಣ್ಣಿಮೆಯಾಗಿ ಆಚರಿಸಲಾಗುತ್ತದೆ. ಶಿವನ ತಪಸ್ಸನ್ನು ಭಂಗ ಮಾಡಿದ ಮನ್ಮಥನನ್ನು ಸುಟ್ಟು ಭಸ್ಮ ಮಾಡಿದ ದಿನ ಇದೆಂದು ಕೂಡ ಹೇಳಲಾಗುತ್ತೆ. ಮತ್ತು ಪೂತನಿಯ ವಿಷದ ಹಾಲನ್ನು ಕುಡಿದಾಗ ಕೃಷ್ಣ ನೀಲಿ ಬಣ್ಣಕ್ಕೆ ತಿರುಗುತ್ತಾನೆ. ಕೃಷ್ಣನ ಬಣ್ಣದ ಬಗ್ಗೆ ಚಿಂತಿಸದೆ ರಾಧೆ ಅವನನ್ನು ಪ್ರೀತಿಸುತ್ತಾಳೆ. ಅವರಿಬ್ಬರ ಪ್ರೀತಿಯ ದ್ಯೋತಕ ಹೋಳಿಯಾಗಿದೆ.

CHANAKYA NITI: ಗಂಡು ಹೆಣ್ಣಿನ ಸುಖ ಸಂಸಾರಕ್ಕೆ ಆಚಾರ್ಯ ಚಾಣಕ್ಯರು ನೀಡಿದ 9 ಲೈಂಗಿಕ ಸೂತ್ರ!

ಈ ವರ್ಷ ಮಾರ್ಚ್ 8ರಂದು ಎಲ್ಲೆಡೆ ಹೋಳಿ ಹಬ್ಬ (Festival) ವನ್ನು ಆಚರಿಸಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ ಅಂದು ಕೆಲವು ಕೆಲಸಗಳನ್ನು ಮಾಡಿದರೆ ಅನೇಕ ರೀತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಗೃಹದೋಷಗಳೂ ಕೂಡ ನಿವಾರಣೆಯಾಗುತ್ತದೆ.

ಹೋಳಿ ಹಬ್ಬದ ದಿನ ಹೀಗೆ ಮಾಡಿ : 
• ಹೋಳಿ ಹಬ್ಬವನ್ನು ಪಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸುತ್ತಾರೆ. ಹೋಳಿಗೆ ಮೊದಲು ಗಣೇಶನ ಪೂಜೆ ಮಾಡಿದರೆ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.
• ವಾಸ್ತು ಶಾಸ್ತ್ರದ ಪ್ರಕಾರ ಹೋಳಿ ಹುಣ್ಣಿಮೆಯಂದು ರಾಧಾ ಕೃಷ್ಣರ ಫೋಟೋವನ್ನು ನಿಮ್ಮ ಕೋಣೆಯಲ್ಲಿಡಿ. ನಂತರ ಅದಕ್ಕೆ ಗುಲಾಲ್ ಮತ್ತು ಹೂವನ್ನು ಹಾಕಿ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮತ್ತು ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚುತ್ತದೆ.
• ಮನೆಯ ಸದಸ್ಯರ ಏಳ್ಗೆಯನ್ನು ಬಯಸುವವರು ಹೋಳಿ ಹುಣ್ಣಿಮೆಯ ದಿನ ಮನೆಯ ಮುಖ್ಯ ಬಾಗಿಲಿನ ಹೊರಗೆ ಮೇಲ್ಗಡೆಯಲ್ಲಿ ಸೂರ್ಯನ ಚಿತ್ರವನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಕಷ್ಟಗಳು ದೂರವಾಗುತ್ತದೆ.
• ಹೋಳಿಯ ದಿನ ಮನೆಗೆ ತುಳಸಿಯ ಗಿಡ ಅಥವಾ ಮನಿ ಪ್ಲಾಂಟ್ ಅನ್ನು ತರುವುದರಿಂದ ಮನೆಗೆ ಶುಭವಾಗುತ್ತೆ.
• ನಿಮ್ಮ ಮನೆಯ ಮೇಲೆ ಧ್ವಜವನ್ನು ಹಾಕಿದ್ದಲ್ಲಿ ಹೋಳಿ ಹುಣ್ಣಿಮೆಯಂದು ಅದನ್ನು ಬದಲಾಯಿಸುವುದು ಉತ್ತಮ. ಧ್ವಜವನ್ನು ಬದಲಾಯಿಸುವುದರಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ, ಮಧುರ ಬಾಂಧವ್ಯ ಬೆಳೆಯುತ್ತದೆ.
• ಹೋಳಿ ಹುಣ್ಣಿಮೆಯ ದಿನ ಹನುಮಂತನ ಆರಾಧನೆ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ. ಹನುಮಂತನ ವಿಗ್ರಹದ ಮುಂದೆ ದೀಪ ಹಚ್ಚಿ ಹನುಮಾನ ಚಾಲೀಸಾ ಕೂಡ ಓದಬಹುದು.
• ಹೋಲಿಕಾ ದಹನದ ಭಸ್ಮ ಕೂಡ ಅಷ್ಟೇ ಪವಿತ್ರವೆಂದು ಹೇಳಲಾಗುತ್ತೆ. ಆ ಭಸ್ಮವನ್ನು ಮನೆಗೆ ತಂದು ದೇವರ ಕೋಣೆಯಲ್ಲಿ ಇಡಬಹುದು.

ಶುಕ್ರವಾರ ಈ 5 ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ವರ ಕೊಡ್ತಾಳೆ!

ಹೋಳಿ ಹುಣ್ಣಿಮೆಯೆಂದರೆ ಕೆಟ್ಟದರ ಮೇಲೆ ಜಯವನ್ನು ಸಾಧಿಸುವುದು. ನಮ್ಮಲ್ಲಿರುವ ಕೆಟ್ಟ ಗುಣಗಳನ್ನು, ನಕಾರಾತ್ಮಕ ಭಾವನೆಗಳನ್ನು ಸುಟ್ಟು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.
 

click me!