ಬಹುತೇಕ ಮಂದಿಗೆ ಇರುವ ಸಮಸ್ಯೆ ಇದು- ದುಡಿಯುತ್ತೇವೆ, ಆದರೆ ಹಣ ನಿರೀಕ್ಷಿಸಿದಷ್ಟು ಬರುತ್ತಿಲ್ಲ. ಬಂದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ. ಸೇವ್ ಮಾಡೋದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಮನೆಗೆ ಒಂದು ಚೈನೀಸ್ ಫ್ರಾಗ್ ತಂದಿಟ್ಟುಕೊಂಡು ನೋಡಿ.
ಚೈನೀಸ್ ಫ್ರಾಗ್- ಇದನ್ನು ಚಾನ್ ಚು ಎಂದೂ ಕರೆಯುತ್ತಾರೆ. ಚೀನಾದ ಫೆಂಗ್ ಶುಯಿ ಪದ್ಧತಿಯಲ್ಲಿ ಇದು ತುಂಬಾ ಮಂಗಳಕರ ಎಂದು ಭಾವಿಸಲಾಗುತ್ತದೆ. ಎಲ್ಲರ ಮನೆಗಳ ಬಳಿ ಪ್ರತಿ ಹುಣ್ಣಿಮೆಯಂದು ಕಾಣಿಸಿಕೊಳ್ಳುತ್ತದೆ ಎಂದು ನಂಬಲಾಗುತ್ತದೆ. ಸಾಂಪ್ರದಾಯಿಕ ಚೀನೀಯರು ಇದನ್ನು ನಂಬುತ್ತಾರೆ. ಇದನ್ನು ನೋಡಿದರೆ ಸದ್ಯದಲ್ಲೇ ಸಂಪತ್ತು ಅಥವಾ ಹಣಕಾಸಿನ ಆಗಮನದ ಬಗ್ಗೆ ಸುದ್ದಿಯನ್ನು ಸ್ವೀಕರಿಸುತ್ತೇವೆ ಎಂದು ಭಾವಿಸುತ್ತಾರೆ. ಇದೀಗ ಚೈನೀಸ್ ಫ್ರಾಗ್ ಎಲ್ಲ ಫೆಂಗ್ ಶುಯಿ ಅಂಗಡಿಗಳಲ್ಲಿ, ತಜ್ಞರ ಬಳಿಯಲ್ಲಿ ಸಿಗುತ್ತದೆ. ನೀವು ವ್ಯಾಪಾರ ಮಾಡುವವರಾಗಿದ್ದರೆ, ಸೇವಾನಿರತರಾಗಿದ್ದರೆ, ಅಥವಾ ಹಣಕಾಸಿನ ಸಂಬಂಧಿಸಿದ ಕೆಲಸ ಮಾಡುವವರಾಗಿದ್ದರೆ ಈ ʼಹಣದ ಕಪ್ಪೆʼ ನಿಮಗೆ ತುಂಬಾ ಪ್ರಯೋಜನಕಾರಿ. ಬಂಗಾರದ ಬಣ್ಣದ ಕಪ್ಪೆಯನ್ನು ಬಳಸಿ. ಕಪ್ಪು ಅಥವಾ ಹಸಿರು ಕಪ್ಪೆಗಳು ಅಷ್ಟೊಂದು ಅದೃಷ್ಟಕಾರಿಯಲ್ಲ.
ಹಣದ ಕಪ್ಪೆಯನ್ನು ಎಲ್ಲಿಡುವುದು?
ಎಲ್ಲಾ ವಾಸ್ತು ಅಥವಾ ಫೆಂಗ್ ಶುಯಿ ವಸ್ತುಗಳಂತೆ, ಇದನ್ನು ಸರಿಯಾದ ಜಾಗದಲ್ಲಿ ಇಡುವುದು ಮುಖ್ಯ. ನೀವು ಯಾವಾಗಲೂ ಕುಳಿತುಕೊಂಡು ಕೆಲಸ ಮಾಡುವ ಜಾಗದಲ್ಲಿ ಅಥವಾ ಕಚೇರಿ ಜಾಗದಲ್ಲಿ ಚೈನೀಸ್ ಕಪ್ಪೆಯನ್ನು ಮೇಜಿನ ಮೇಲೆ ಅಥವಾ ಕಟ್ಟೆಯ ಮೇಲೆ ಇರಿಸಿ. ಕಪ್ಪೆಯ ಮುಖವು ಬಾಗಿಲಿನ ಕಡೆಗೆ ಇರಬೇಕು. ಹೀಗಿದ್ದರೆ ಬಾಗಿಲಿನಿಂದ ಬರುವ ಹಣವನ್ನು ಅದು ಬಾಯಿ ತೆರೆದು ಹಿಡಿದುಕೊಳ್ಳುತ್ತದೆ ಎಂದು ಅರ್ಥ.
undefined
Best Quotes: ಬುದ್ಧ ಹೇಳುವುದನ್ನ ಫಾಲೋ ಮಾಡಿದರೆ ಲೈಫ್ ಬಿಂದಾಸ್!
ಇನ್ನು ಮಲಗುವ ಕೋಣೆಯಲ್ಲಿ ಇಡುತ್ತೀರಾದರೆ, ನಿದ್ರೆಯಿಂದ ಏಳುವಾಗ ನಿಮ್ಮ ಕಣ್ಣಿಗೆ ಮೊದಲು ಬೀಳುವಂತೆ ಇರಿಸಿ. ತಲೆಯ ಹಿಂಬದಿಯಲ್ಲಿ ಇಡಬಾರದು. ಹಾಗೇ ಕಾಲಿನ ಕೆಳಗೂ ಇರಬಾರದು. ಕಪ್ಪೆಯನ್ನು ಇಟ್ಟ ಕೋಣೆಯಲ್ಲಿ ಅಥವಾ ಹಾಲ್‌ನಲ್ಲಿ ಯಾವುದೇ ಹಾವಿನ ಚಿತ್ರ(Snake image) ವಾಗಲೀ ಪ್ರತಿಮೆಯಾಗಲೀ ಇಡಬಾರದು.
ಕಪ್ಪೆಯನ್ನು ಎಲ್ಲಿ ಇಡಬಾರದು?
ಕಪ್ಪೆಯನ್ನು ಸರಿಯಾದ ಜಾಗದಲ್ಲಿ ಇಡುವಂತೆ, ಎಲ್ಲಿ ಇಡಬಾರದು ಎಂದೂ ಗೊತ್ತಿರಬೇಕು. ನೀವು ಮನೆಯ ಮಹಾದ್ವಾರ ತೆರೆದಾಗ ಕಪ್ಪೆಯ ಬಂದವರಿಗೆ ಥಟ್ಟನೆ ಕಾಣುವಂತೆ ನಿಮ್ಮ ಕಪ್ಪೆಯನ್ನು ಇಡಬಾರದು. ನೆಲದ ಮೇಲೆ ಕಪ್ಪೆಯನ್ನು ಇಡಬಾರದು. ಅಡುಗೆಮನೆಯಲ್ಲಿ ಕಪ್ಪೆಯನ್ನು ಇಡಕೂಡದು. ಹೆಚ್ಚಿನ ಆದಾಯ ಮತ್ತು ಉತ್ತಮ ಆರ್ಥಿಕ ಸುದ್ದಿಗಾಗಿ, ಯಾವಾಗಲೂ ನಿಮ್ಮ ಹಣದ ಕಪ್ಪೆಯನ್ನು ನಿಮ್ಮ ಕಚೇರಿ ಜಾಗದಲ್ಲಿ, ಅಂಗಡಿಯಲ್ಲಿ, ನಿಮ್ಮ ಪಕ್ಕದಲ್ಲಿ ಇರಿಸಿಕೊಳ್ಳಿ. ಕಪ್ಪೆಯನ್ನು ಹಣದ ಪೆಟ್ಟಿಗೆಯಲ್ಲಿ ಎಂದೂ ಇಡಬಾರದು. ಯಾಕೆಂದರೆ ಅದು ಅನ್ಯರ ಹಣವನ್ನು ಸೆಳೆದು ನಿಮಗೆ ಕೊಡಬೇಕೇ ಹೊರತು, ನಿಮ್ಮ ಪೆಟ್ಟಿಗೆಯ ಹಣವನ್ನೇ ನುಂಗಬಾರದು ಅಲ್ಲವೆ?
ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..
ಹಣದ ಕಪ್ಪೆಯನ್ನು ಖರೀದಿಸುವುದು ಸುಲಭ. ಆದರೆ ಅದರಿಂದ ಪ್ರಯೋಜನ ಪಡೆಯಬೇಕಿದ್ದರೆ ಅದನ್ನು ಸಕ್ರಿಯಗೊಳಿಸಬೇಕು. ಸಕ್ರಿಯಗೊಳಿಸಲು ನಿಮ್ಮ ಕಪ್ಪೆಯನ್ನು ಕೆಂಪು ಕಾಗದದ ಮೇಲೆ ಇರಿಸಿ ಅಥವಾ ಕೆಂಪು ಬಟ್ಟೆಯ ತುಂಡನ್ನು ಅದಕ್ಕೆ ಕಟ್ಟಿ. ನಿಮ್ಮ ಕಪ್ಪೆ ಈಗಾಗಲೇ ಕೆಂಪು ಆಭರಣವನ್ನು ಹೊಂದಿದ್ದರೆ ಅದಕ್ಕೆ ಕೆಂಪು ಬಟ್ಟೆ ಕಟ್ಟುವ ಅಗತ್ಯವಿಲ್ಲ. ಮತ್ತೊಂದು ಅದೃಷ್ಟದ ಅಂಶವೆಂದರೆ ನಿಮ್ಮ ಕಪ್ಪೆಯ ಬಾಯಿಯಲ್ಲಿ ನಾಣ್ಯ(Coin)ವಿದೆಯೇ ಎಂಬುದು. ಇದೆ ಎಂದು ಖಚಿತಪಡಿಸಿಕೊಳ್ಳಿ. ಅದರ ಬಾಯಿಯಲ್ಲಿ ಚೈನೀಸ್ ನಾಣ್ಯ ಇರಬೇಕು. ಅದರ ಮೇಲ್ಭಾಗದಲ್ಲಿ ಚೈನೀಸ್ ಬರಹ ಇರಬೇಕು.
ಎಷ್ಟು ಹಣದ ಕಪ್ಪೆ(Feng Shui Money Frog) ಇಟ್ಟುಕೊಳ್ಳಬಹುದು?
ಇದು ನಿಮ್ಮ ಇಟ್ಟುಕೊಳ್ಳಬಹುದಾದ ಜಾಗಗಳನ್ನು ಅವಲಂಬಿಸಿದೆ. ನಿಮಗೆ ಎಷ್ಟು ಕಪ್ಪೆಗಳು ಬೇಕು ಎಂದು ಕೇಳಿಕೊಳ್ಳಿ. ಬಯಸಿದ ಫಲಿತಾಂಶ ಪಡೆಯಲು ಮೂರು, ಆರು ಅಥವಾ ಒಂಬತ್ತು ಕಪ್ಪೆಗಳನ್ನು ಇಟ್ಟುಕೊಳ್ಳಬಹುದು. ಅಂದರೆ ಕಪ್ಪೆಗಳ ಸಂಖ್ಯೆ ಯಾವಾಗಲೂ ಮೂರರ ಗುಣಕದಲ್ಲಿ ಇರಬೇಕು. ಸಾಧ್ಯವಾಗಲಿಲ್ಲ ಎಂದರೆ ಒಂದು ಕಪ್ಪೆಯೂ ಸಾಕಾಗುತ್ತದೆ.