Uttar kannada: ಅಯ್ಯೋ.. ಸಾವಿನ ದುಃಖ; ನೀರಲ್ಲೇ ಸಾಗಿದ ಶವ; ಹೊನ್ನಾವರದಲ್ಲಿ ತಲೆ ಸಮಾಜವೇ ತಲೆ ತಗ್ಗಿಸುವಂಥ ಘಟನೆ!

Published : Jul 04, 2026, 01:07 PM IST
Honnavara

ಸಾರಾಂಶ

carrying dead body in water karnataka: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ, ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಉಕ್ಕಿ ಹರಿಯುವ ಹೊಳೆಯಲ್ಲಿಯೇ ಶವವನ್ನು ಹೊತ್ತು ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಂತರವೂ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಉತ್ತರಕನ್ನಡ: ದೇಶ ಸ್ವಾತಂತ್ರ್ಯ ದೊರೆತು ಅಮೃತ ಮಹೋತ್ಸವ ಆಚರಿಸಿಕೊಂಡು ಮುಂದೆ ಸಾಗಿದೆ. ಆದರೆ ಕಾಡಂಚನಲ್ಲಿನ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು ಅಂತಂತ್ರ ಸ್ಥಿತಿಯಲ್ಲಿವೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ರಸ್ತೆ ಇರದ ಕಾರಣ ಗ್ರಾಮಸ್ಥರು ನೀರಲ್ಲಿ ಮುಳುಗಿ ಶವ ಸಂಸ್ಕಾರ ಹಿಡಿದು ಸಾಗಿದ್ದಾರೆ. ಇದಕ್ಕೆ ಶೋಚನೀಯ ಸ್ಥಿತಿ ಎನ್ನದೇ ಇನ್ನೇನು ಎನ್ನಲು ಸಾಧ್ಯ. ಹಾಗಾದರೆ ಈ ಘಟನೆ ನಡೆದಿದ್ದೆಲ್ಲಿ? ಎನ್ನುವುದರ ಇನ್‌ಸೈಡ್‌ ಸ್ಟೋರಿ ಇಲ್ಲಿದೆ.

ದೊಡ್ಡ ಹಿತ್ತಲದಲ್ಲಿ ನಡೆದ ಘಟನೆ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ ನಿಲ್ಲದ ಮಳೆಯಿಂದಾಗಿ, ಭಾಸ್ಕಕೇರಿ ಹೊಳೆ ಉಕ್ಕಿ ಹರಿಯುತ್ತಿದೆ. ಅಲ್ಲದೇ ಅಂಚಿನಲ್ಲಿರುವ ಈ ದೊಡ್ಡ ಹಿತ್ತಲ ಗ್ರಾಮಕ್ಕೆ ತೆರಳಲು ಸಹ ರೋಡ್ ಇಲ್ಲ. ಗ್ರಾಮದಲ್ಲಿ 50 ಮನೆಗಳಿದ್ದರೂ ಇಂಥ ದುರದೃಷ್ಟಕರ ಪರಿಸ್ಥಿತಿ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಶವವನ್ನು ನೀರಲ್ಲಿ ಮುಳುಗಿ ಶವ ಹಿಡಿದು ಸಾಗಿದ್ದಾರೆ. ಆದ್ದರಿಂಸ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕಾರ್ಯವಾಗಿದೆ. ಈ ಘಟನೆ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಉಕ್ಕಿ ಹರಿಯುತ್ತಿರುವ ಭಾಸ್ಕೇರಿ ಹೊಳೆ!

ಕರಾವಳಿ ಹಾಗೂ ಮಲೆನಾಡಿನಲ್ಲಿನ ವರುಣಾರ್ಭಟದಿಂದ ಈಗಾಗಲೇ ನದಿ,ಹೊಳೆ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅದರೊಂದಿಗೆ ಅಲ್ಲಲ್ಲಿ ಆರೆಂಜ್ ಅಲರ್ಟ್ ನೀಡಿದೆ. ಮುಂದಿನ ಕೆಲ ಗಂಟೆಗಳಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಆದ್ದರಿಂದ ಇಂಥ ಮಳೆಯಾದರೆ, ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗದ ಜನ ಪಡಬಾರದ ಪಡಿಪಾಟಲನ್ನು ಪಡುತ್ತಾರೆ. ಈ ಘಟನೆ ಬರೀ ದೊಡ್ಡ ಹಿತ್ತಲ ಗ್ರಾಮವಷ್ಟೇ ಅಲ್ಲ ಇನ್ನು ಅನೇಕ ಕಡೆ ನಡೆದಿವೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡ ಜನರ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯ‌‌!

ಹೌದು ದೊಡ್ಡ ಹಿತ್ತಲ ಗ್ರಾಮದಲ್ಲಿ ನಡೆದ ಘಟನೆ ಮಳೆಗಾಲದಲ್ಲಿ ಹೊಸತೆನಲ್ಲ. ಆದರೆ, ಇದರಿಂದ ರೋಸಿ ಹೋದ ಜನ ರಸ್ತೆ, ನೀರು, ಸಾರಿಗೆ, ಶಿಕ್ಷಣ ಸೇರಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ದೊಡ್ಡ ಹಿತ್ತಲ ಗ್ರಾಮ ಒಂದು ಉದಾಹರಣೆಯಷ್ಟೇ. ರಾಜ್ಯದ ಹಲವಾರು ಹಳ್ಳಿಗಳಲ್ಲಿ ಇದೇ ಸ್ಥಿತಿ ಇದೆ. ಆದ್ದರಿಂದ ಸರ್ಕಾರ ಇನ್ನಾದರೂ ಎಚ್ಚೆತ್ತು ಮೂಲಭೂತ ಸೌಕರ್ಯ ಕಲ್ಪಿಸಿ, ಕನಿಷ್ಠ ಮಟ್ಟದ ಜೀವನ ಸಾಗಿಸಲಾದರೂ, ಅವಕಾಶ ಕಲ್ಪಪಿಸಿಕೊಡಬೇಕು ಎಂದು ಜನ ಆಗ್ರಿಹಿಸಿದ್ದಾರೆ.

PREV
Read more Articles on
click me!

Recommended Stories

Uttara Kannada Rain: ಶಿರೂರು ಗುಡ್ಡಕುಸಿತ ದುರಂತ ಮರೆತರಾ ಪ್ರವಾಸಿಗರು? ಅಪಾಯಕಾರಿ ಜಲಪಾತಗಳಡಿ ಮೋಜು-ಮಸ್ತಿ!
ಕರಾವಳಿ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್: ದಕ್ಷಿಣ ಕನ್ನಡ, ಕಾರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!