
ಕಾರವಾರ (ಜು.17): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ದಾರುಣ ಘಟನೆ ನಡೆದಿದ್ದು, ಕುತ್ತಿಗೆಗೆ ಚೂಡಿದಾರದ ವೇಲು ಸಿಲುಕಿಕೊಂಡು ಬಾಲಕಿಯೊಬ್ಬಳು ಸಾವು ಕಂಡಿದ್ದಾಳೆ. ಮನೆಯಲ್ಲಿ ಅಟವಾಡುವ ವೇಳೆಯಲ್ಲಿಯೇ 12 ವರ್ಷದ ಬಾಲಕಿ ದಾರುಣವಾಗಿ ಸಾವು ಕಂಡಿದ್ದಾಳೆ. ಮನೆಯಲ್ಲಿ ಬಾಲಕಿ ಜೋಕಾಲಿ ಆಟ ಆಡುತ್ತಿದ್ದಾಗ ಕುತ್ತಿಗೆಗೆ ವೇಲು ಸಿಲುಕಿಕೊಂಡಿತ್ತು. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ಘಟನೆ ನಡೆದಿದೆ. ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣೀತಾ ಜಗನ್ನಾಥ ನಾಯ್ಕ ಮೃತ ಬಾಲಕಿ.
ಭಾರೀ ಮಳೆಯಿಂದಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಾಲೆಗೆ ರಜೆಯಿದ್ದ ಹಿನ್ನೆಲೆ ಮನೆಯಲ್ಲಿ ಪ್ರಣೀತಾ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದಳು. ಈ ವೇಳೆ ಜೋಕಾಲಿಗೆ ಕಟ್ಟಿದ ಚೂಡಿದಾರದ ವೇಲು ಕುತ್ತಿಗೆಗೆ ಬಿಗಿದು ತೀವ್ರ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಮಾರ್ಗ ಮಧ್ಯದಲ್ಲೇ ಬಾಲಕಿ ಸಾವು ಕಂಡಿದ್ದಾಳೆ. ಘಟನೆ ಸಂಬಂಧಿಸಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.