ವಿದ್ಯಾರ್ಥಿಗೆ ರಾಸಾಯನಿಕ ಸ್ಪ್ರೇ ಮಾಡಿ ಓಡಿದ ದುಷ್ಕರ್ಮಿಗಳು

By Kannadaprabha News  |  First Published Nov 17, 2019, 8:16 AM IST

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ರಾಸಾಯನಿಕವನ್ನು ಎರಚಿ ಪ್ರಜ್ಞೆ ತಪ್ಪಿಸಿ, ಓಡಿ ಹೋದ ವಿಚಿತ್ರ ಘಟನೆ ಶನಿವಾರ ಇಲ್ಲಿನ ಬೆಳ್ವೆ ಪಂಚಾಯಿತಿಯ ಗೊಮ್ಮೊಲ ರಸ್ತೆಯಲ್ಲಿ ನಡೆದಿದೆ. ರಾಸಾಯನಿಕ ಎರಚಲ್ಪಟ್ಟಬೆಳ್ವೆ ಪಂಚಾಯಿತಿಯ ಮಾಜಿ ಅಧ್ಯಕ್ಷ ಬೆಳ್ವೆ ಉದಯಕುಮಾರ್‌ ಪೂಜಾರಿ ಅವರ ಅಣ್ಣನ ಮಗ 5ನೇ ತರಗತಿ ವಿದ್ಯಾರ್ಥಿ ಹರ್ಷಿತ್‌ (10) ಅಸ್ವಸ್ಥವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.


ಉಡುಪಿ(ನ.17): ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ರಾಸಾಯನಿಕವನ್ನು ಎರಚಿ ಪ್ರಜ್ಞೆ ತಪ್ಪಿಸಿ, ಓಡಿ ಹೋದ ವಿಚಿತ್ರ ಘಟನೆ ಶನಿವಾರ ಕುಂದಾಪುರ ಬೆಳ್ವೆ ಪಂಚಾಯಿತಿಯ ಗೊಮ್ಮೊಲ ರಸ್ತೆಯಲ್ಲಿ ನಡೆದಿದೆ.

ರಾಸಾಯನಿಕ ಎರಚಲ್ಪಟ್ಟಬೆಳ್ವೆ ಪಂಚಾಯಿತಿಯ ಮಾಜಿ ಅಧ್ಯಕ್ಷ ಬೆಳ್ವೆ ಉದಯಕುಮಾರ್‌ ಪೂಜಾರಿ ಅವರ ಅಣ್ಣನ ಮಗ 5ನೇ ತರಗತಿ ವಿದ್ಯಾರ್ಥಿ ಹರ್ಷಿತ್‌ (10) ಅಸ್ವಸ್ಥವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

Latest Videos

undefined

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!

ಹರ್ಷಿತ್‌ ಎಂದಿನಂತೆ ಶನಿವಾರ ಬೆಳಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಒಂದು ನೀಲಿ ಬಣ್ಣದ ಓಮ್ನಿ ಕಾರು ನಿಂತಿತ್ತು. ಹರ್ಷಿತ್‌ ಅಲ್ಲಿಗೆ ಬರುತ್ತಿದ್ದಂತೆ ಓಮ್ನಿಯಲ್ಲಿದ್ದವರು ಬಾ ನಿನ್ನನ್ನು ಶಾಲೆಗೆ ಬಿಡುತ್ತೇವೆ ಎಂದು ಕರೆದಿದ್ದಾರೆ. ಹರ್ಷಿತ್‌ ಒಪ್ಪದೇ ಮುಂದೆ ಹೋದಾಗ, ಕಾರಿನವರು ಹಿಂಬಾಲಿಸಿ ಬಂದು ಆತನ ಮುಖಕ್ಕೆ ಯಾವುದೋ ರಾಸಾಯನಿಕವನ್ನು ಸ್ಪ್ರೇ ಮಾಡಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ..!

ತಕ್ಷಣ ಪ್ರಜ್ಞೆ ಕಳೆದುಕೊಂಡ ರಕ್ಷಿತ್‌ ರಸ್ತೆಗೆ ಕುಸಿದಿದ್ದು, ಅದೇ ಸಂದರ್ಭ ಯಾರೋ ಬಂದ ಕಾರಣ ಓಮ್ನಿಯಲ್ಲಿದ್ದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಸೇರಿ ಹರ್ಷಿತ್‌ನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಹೆಬ್ರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿ ಮೂಗಿಗೆ ಸಿಂಪಡಿಸಿದ ಸ್ಪ್ರೇ ರಾಸಾಯನಿಕವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ: ಮಹಿಳೆಯರ ದೇಹ ಸ್ಪರ್ಶಿಸಿ ಪರಾರಿಯಾಗ್ತಿದ್ದ ಬೀದಿ ಕಾಮಣ್ಣ ಸೆರೆ

click me!