ಪಕ್ಷದ ಮೇಲಿನ ಭರವಸೆಯಿಂದ ಬಿಜೆಪಿಗೆ ಬಹುಮತ: ಕೋಟ

By Web DeskFirst Published Nov 14, 2019, 3:34 PM IST
Highlights

 ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿ ಅವರು ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಉಡುಪಿ(ನ.14): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿ ಅವರು ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಕನ್ನಡ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಗೆಲುವು ಪ್ರತಿಯೊಬ್ಬ ಕಾರ್ಯಕರ್ತನ ಶ್ರಮದ ಗೆಲುವಿನ ಸಂಕೇತ. ಮತದಾರರು ಪಕ್ಷದ ಮೇಲೆ‌ ವಿಶ್ವಾಸವಿಟ್ಟು ಪೂರ್ಣ ಬಹುಮತ ನೀಡಿದ್ದಾರೆ. ಮತಯಾಚನೆ ವೇಳೆ‌ ನಾವು ನೀಡಿದ ಭರವಸೆ ಈಡೇರಿಸುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು

ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ್ , ಯೋಜನೆಗಳ ಅನುಷ್ಠಾನದ  ಭರವಸೆಗಳ ಮೇಲೆ‌ ಮತದಾರರ ವಿಶ್ವಾಸ ಹೆಚ್ಚಿದ್ದು, ಇದಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿದ್ದಾರೆ ಎಂದಿದ್ದಾರೆ.

ಬಿಎಸ್‌ವೈ ಜಾಣನಡೆ: ರೆಬೆಲ್ ಆಗಿದ್ದ ಸೊಗಡು ಶಿವಣ್ಣ ಮನೆಯಲ್ಲಿ ಊಟ

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಲಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 9 ವಾರ್ಡ್ ಗಳಲ್ಲಿ ತಲಾ 4 ಅಭ್ಯರ್ಥಿಗಳಿದ್ದರೆ, 6 ವಾರ್ಡ್‌ಗಳಲ್ಲಿ ಗರಿಷ್ಠ ತಲಾ 5 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಿರ್ಧಾರವಾಗಿದೆ.

click me!