ಚಿತ್ರದುರ್ಗದ ಮಹಿಳೆಯಿಂದ 172 ಚೀಲ ಈರುಳ್ಳಿ ಖರೀದಿಸಿದ ಉಡುಪಿಯ ರೈತ

By Suvarna NewsFirst Published May 1, 2020, 9:51 AM IST
Highlights

ಈರುಳ್ಳಿ ಬೆಳೆದು ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಮಹಿಳೆಗೆ ಚಿತ್ರದುರ್ಗದ ರೈತನೊಬ್ಬ ನೆರವಿನ ಹಸ್ತ ಚಾಚಿದ್ದಾನೆ. 150 ರುಪಾಯಿಗೂ ಕೊಳ್ಳುವವರಿಲ್ಲದಿರುವಾಗ ರೈತರೊಬ್ಬರು ಮೂಟೆಗೆ 550 ರುಪಾಯಿ ನೀಡಿ ಖರೀದಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿದೆ.

ಉಡುಪಿ(ಮೇ.01): ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ಬೆಳೆದ ಈರುಳ್ಳಿ ಮೂಟೆಗೆ 150 ರುಪಾಯಿಗೂ ಕೊಳ್ಳುವವರಿಲ್ಲದೆ ಕೊಳೆತು ಹೋಗುತಿದ್ದಾಗ ಉಡುಪಿಯ ರೈತರೊಬ್ಬರು ಮೂಟೆಗೆ 550 ರುಪಾಯಿ ಕೊಟ್ಟು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗದ ರೈತ ಮಹಿಳೆ ವಸಂತ ಕುಮಾರಿ ಅವರು ಈರುಳ್ಳಿ ಬೆಳೆದಿದ್ದು, ಲಾಕ್‌ಡೌನ್‌ ಮಧ್ಯೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಕಂಗಾಲಾಗಿ ನೆರವು ನೀಡುವಂತೆ ಮಾಡಿದ್ದ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ವಸಂತ ಕುಮಾರಿಗೆ ಕರೆ ಮಾಡಿ ಸಾಂತ್ವನ ಹೇಳಿ, ನೆರವಿನ ಭರವಸೆ ನೀಡಿದ್ದರು.

ಗುಡ್‌ ನ್ಯೂಸ್: 95 ವರ್ಷದ ಅಜ್ಜಿ ಕೊರೋನಾದಿಂದ ಗುಣಮುಖ

ಈ ವಿಡಿಯೋವನ್ನು ನೋಡಿದ ಉಡುಪಿಯ ಬೊಮ್ಮರಬೆಟ್ಟು ಗ್ರಾಮದ ರೈತ ಸುರೇಶ್‌ ನಾಯಕ್‌ ಈ ಮಹಿಳೆಯನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ಈರುಳ್ಳಿ ಖರೀದಿಸುವುದಾಗಿ ಹೇಳಿದರು. ಅದರಂತೆ ಚಿತ್ರದುರ್ಗದಲ್ಲಿ ಒಂದು ಚೀಲ ಈರುಳ್ಳಿಗೆ .150 ರಿಂದ .250 ಬೆಲೆ ಇದೆ. ಆದರೆ ನಾಯಕ್‌ ಅವರು ಉಡುಪಿಯ ಮಾರುಕಟ್ಟೆಗನುಗುಣವಾಗಿ ಚೀಲಕ್ಕೆ 550 ರುಪಾಯಿ ನೀಡಿ ಈರುಳ್ಳಿ ಖರೀದಿಸಿದ್ದಾರೆ. ವಸಂತ ಕುಮಾರಿ ಅವರು ತಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಬೆಲೆ ಪಡೆದು ಸಂತಸಗೊಂಡಿದ್ದಾರೆ. ಇದೀಗ ಚಿತ್ರದುರ್ಗದಿಂದ 60 ಕೆಜಿಯ 172 ಚೀಲ ಈರುಳ್ಳಿ ಉಡುಪಿಗೆ ಬಂದಿದೆ. ಅದನ್ನೀಗ ಸುರೇಶ್‌ ನಾಯಕ್‌ ಅವರು ತಮ್ಮ ಸಂಪರ್ಕಗಳ ಮೂಲಕ ಉಡುಪಿ ಜಿಲ್ಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡುತಿದ್ದಾರೆ.
 

click me!