ಸ್ವಾಮೀಜಿಗಳು ತಲೆಯ ಮೇಲೆ ಧರಿಸುವ ಕೇಸರಿ ವಸ್ತ್ರದ ಬಗ್ಗೆ ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಕಿಷ್ಕಿಂದದ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಖಂಡಿಸಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮಾ.25): ಸಿದ್ದರಾಮಯ್ಯ (siddaramaiah) ಹೆಸರಿನಲ್ಲೇ ರಾಮನ ಹೆಸರಿದೆ, ಹಿಂದೂ ಧರ್ಮ ಮತ್ತು ಹಿಂದೂ ದೇವರ ವಿರುದ್ಧ ಅವರು ಕೆಲಸ ಮಾಡುತ್ತಿರುವುದು ತಪ್ಪು ಸಿದ್ದರಾಮಯ್ಯನವರ ವರ್ತನೆ ಸರಿಯಲ್ಲ ಎಂದು ಕಿಷ್ಕಿಂದದ (Kishkindha) ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ (Sri Govindananda saraswati swamiji) ಹೇಳಿದ್ದಾರೆ.
ಉಡುಪಿಯ (udupi) ಕೊಲ್ಲೂರು ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಉಡುಪಿ. ಹಿಜಾಬ್ ಗೂ (Hijab), ಸ್ವಾಮೀಜಿಗಳು ( swamiji) ತಲೆಯ ಮೇಲೆ ಧರಿಸುವ ಕೇಸರಿ ವಸ್ತ್ರಕ್ಕೂ ಹೋಲಿಸಿ ಮಾತನಾಡಿರುವ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸ್ವಾಮೀಜಿ ಕಟುವಾದ ಮಾತುಗಳಲ್ಲಿ ಖಂಡಿಸಿದ್ದಾರೆ. ಸಿದ್ದರಾಮಯ್ಯನವರದ್ದು ಹಿಂದೂ ವಿರೋಧ ಮತ್ತು ಧರ್ಮ ವಿರೋಧ ಹೇಳಿಕೆ. ಇಂಥ ಹೇಳಿಕೆಗಳನ್ನೆಲ್ಲಾ ಅವರು ಕೊಡಬಾರದು.
ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳು ಕಾಲೇಜಿಗೆ ಹೋಗುತ್ತಿದ್ದೇವಾ? ಹಿಜಾಬ್ ವಿಚಾರಕ್ಕೂ ಸನ್ಯಾಸಿಗಳ ವಿಚಾರಕ್ಕೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ?ನಿಮಗೆ ಸ್ವಲ್ಪವೂ ಬುದ್ಧಿ, ಜ್ಞಾನ ಇಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಹಿಂದೂ ಸನ್ಯಾಸಿಗಳು ಮತ್ತು ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಹಿಂದೂ ಎಂಬ ಪದ ಉಚ್ಚರಣೆ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ.
MUSLIM TRADERS BOYCOTT ಕೊಲ್ಲೂರು ಮೂಕಾಂಬಿಕಾ ಉತ್ಸವದಲ್ಲೂ ಮುಸ್ಲಿಂಮರಿಗೆ ನಿರ್ಬಂಧ
ಇಂಥಹ ಜನಗಳು ಬಂದು ನಾಯಕರಾದರೆ ಅಧರ್ಮವಾಗಿ ಹೋಗುತ್ತದೆ.ಇಂತಹ ನಾಯಕರಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕು,ಇದು ಕೇವಲ ಸಿದ್ದರಾಮಯ್ಯ ಒಬ್ಬರಿಗೆ ಎಚ್ಚರಿಕೆಯಲ್ಲ ಎಲ್ಲಾ ನಾಯಕರಿಗೆ ಎಚ್ಚರಿಕೆ. ರಾವಣಾಸುರನಿಗೆ ಹಿರಣ್ಯಾಕ್ಷನಿಗೆ ಯಾವ ಗತಿಯಾಯಿತೋ ಇವರುಗಳಿಗೂ ಅದೇ ಗತಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಸಾವಿರ ಕೋಟಿ ಜನ್ಮ ಎತ್ತಿದರೂ ಹಿಂದೂ ಸಂತರ ಬಗ್ಗೆ ಮಾತನಾಡಲು ನಿಮಗೆ ಲಾಯಕ್ಕಾಗೂದಿಲ್ಲ. ಸುಮ್ಮನೆ ಮನೆಯಲ್ಲಿ ರಾಮನಾಮ ಜಪ ಮಾಡಿಕೊಂಡಿರಿ.ನಿಮ್ಮ ಜನ್ಮ ಉದ್ದಾರವಾಗುತ್ತದೆ. ಹಿಂದೂ ಧರ್ಮದ ಮೇಲೆ ಕೈ ಇಡುತ್ತೇನೆ ಹಿಂದೂ ಧರ್ಮವನ್ನು ಪ್ರಶ್ನೆ ಮಾಡುತ್ತೇನೆ ಎಂದು ಮುಂದಾದರೆ, ಹಿಂದೆ ರಾಕ್ಷಸರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.
Chikkamagaluru: ತಾನು ಓದಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ