ಒಂದಷ್ಟು ಬಿಡುವ ನೀಡಿದ್ದ ಮಳೆ ಈಗ ಕರಾವಳಿಯಲ್ಲಿ ಮತ್ತೊಮ್ಮೆ ಆರ್ಭಟಿಸಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತಲ್ಲಿ ಮಾತ್ರ ಮಳೆಯಾಗುತ್ತಿತ್ತು. ಮಂಗಳವಾರ ಉಡುಪಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಉಡುಪಿ(ಅ.15): ಒಂದಷ್ಟು ಬಿಡುವ ನೀಡಿದ್ದ ಮಳೆ ಈಗ ಕರಾವಳಿಯಲ್ಲಿ ಮತ್ತೊಮ್ಮೆ ಆರ್ಭಟಿಸಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತಲ್ಲಿ ಮಾತ್ರ ಮಳೆಯಾಗುತ್ತಿತ್ತು. ಮಂಗಳವಾರ ಉಡುಪಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಬಾರಿ ಮಳೆಯಾಗುತ್ತಿದ್ದು, ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಮತ್ತೊಮ್ಮೆ ಜೋರಾಗಿ ಸುರಿದಿದೆ. ಕಾಪು, ಉದ್ಯಾವರ, ಕಾರ್ಕಳ,ಕುಂದಾಪುರದಲ್ಲೂ ಭರ್ಜರಿ ಮಳೆಯಾಗಿದೆ.
ಸುದೀಪ್ ಅಭಿಮಾನಿ ಮೇಲೆ ಹಲ್ಲೆ ಮಾಡಿದ ವಿನಯ್ ಗುರೂಜಿ ಭಕ್ತರು
ಆರಂದಲ್ಲಿ ಹೆಚ್ಚಿನ ಮಳೆಯಾಗಿದ್ದರೂ ನಂತರದಲ್ಲಿ ಹೆಚ್ಚಿನ ಬಿಸಿಲ ಧಗೆಯಿಂದ ಸುಡುತಿದ್ದ ಭೂಮಿಯನ್ನುಮಳೆರಾಯ ತಂಪಾಗಿಸಿದ್ದಾನೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಭಾರಿ ಮಿಂಚು ಗುಡುಗು ಸಹಿತ ಮಳೆ ಸುರಿಯುತ್ತಿದೆ. ಇನ್ನೂ ಒಂದು ವಾರಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮಂಗಳೂರಿನ ಕೆಲವು ಭಾಗಗಳಲ್ಲಿಯೂ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ.
ಧರೆಗುರುಳಿದ ಹಂಪಿ ಸಾಲುಮಂಟಪ ಕಂಬಗಳು