ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಬಿಡುಗಡೆಯಿಂದ ಮುಂಬರುವ ಚುನಾವಣೆ ಮೇಲೆ ಯಾವುದೇ ಎಫೆಕ್ಟ್ ಆಗೋದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಉಡುಪಿ(ಅ.25): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದು, ಎಲ್ಲಡೆ ಡಿಕೆಶಿ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ.
ಹಾಗೆಯೇ ಚುನಾವಣೆ ಸಮೀಪದಲ್ಲಿದ್ದು, ಡಿಕೆಶಿ ಬಿಡುಗಡೆಯಾಗಿರುವುದು ಮುಂದೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಲವನ್ನು ಹೆಚ್ಚಿಸಲಿದೆ ಎಂಬ ಮಾತುಗಳೂ ಕೇಳಿ ಬರ್ತಿದೆ. ಆದರೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತ್ರ ಡಿಕೆಶಿಯಿಂದ ಎಲೆಕ್ಷನ್ ಮೇಲೆ ನೋ ಎಫೆಕ್ಟ್ ಅನ್ನೋ ತರ ಮಾತನಾಡಿದ್ದಾರೆ.
ಕಾಂಗ್ರೆಸ್ ಗಾಂಧೀಜಿಯ ಮರೆತು ಸಂಭ್ರಮಿಸುತ್ತಿದೆ : ಕೋಟ
ಡಿ.ಕೆ.ಶಿವಕುಮಾರ್ ಅವರ ಮೇಲೆ ಇನ್ನೂ ಅನೇಕ ಕೇಸುಗಳು ನಡೆಯುತ್ತಿವೆ. ಅವರ ಬಿಡುಗಡೆಯಿಂದ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಈ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದವರು ಹೇಳಿದ್ದಾರೆ.
ಉಪಚುನಾವಣೆಯಿಂದ ರಾಜ್ಯದ ಪ್ರಸಕ್ತ ನೆರೆ ಪರಿಹಾರ ಕಾರ್ಯದಲ್ಲಿ ಒಂದು ಹೆಜ್ಜೆಯೂ ವಿಳಂಬವಾಗುವುದಿಲ್ಲ, ಸ್ವತಃ ಮುಖ್ಯಮಂತ್ರಿಗಳು ಸೇರಿ ಉಸ್ತುವಾರಿ ಸಚಿವರು ನೆರೆ ಪರಿಹಾರದಲ್ಲಿ ತೊಡಗಿದ್ದಾರೆ ಎಂದು ಕೋಟ ಹೇಳಿದ್ಧಾರೆ.
ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ!