ತುಳುವಿನಲ್ಲಿ ಸಿನಿಮಾ ನಿರ್ಮಿಸ್ತಾರಾ ಅರ್ಜುನ್ ಸರ್ಜಾ..?

By Kannadaprabha News  |  First Published Oct 25, 2019, 1:36 PM IST

ನಟ ಅರ್ಜುನ್ ಸರ್ಜಾ ತುಳು ಚಿತ್ರರಂಗಕ್ಕೆ ಕಾಲಿಡ್ತಾರಾ ಅನ್ನೋ ಮಾತು ಕೇಳಿ ಬರ್ತಿದೆ. ಖುದ್ದಾಗಿ ಅರ್ಜುನ್ ಸರ್ಜಾ ಅವರೇ ತುಳು ಚಿತ್ರರಂಗದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ತುಳು ಸಿನಿಮಾ ಮಾಡ್ತಾರಾ..? ಯಾವಾಗ..? ಯಾರ ಜೊತೆ ? ಎಂಬ ಕುತೂಹಲಕಾರಿ ವಿಷಯಳು ಇಲ್ಲಿವೆ.


ಮಂಗಳೂರು(ಅ.25):  ತುಳು ಸಿನಿಮಾ ನಿರ್ಮಿಸುವ ಕುರಿತು ನಟ ಅರ್ಜುನ್ ಸರ್ಜಾ ಅವರು ಆಸಕ್ತಿ ತೋರಿಸಿದ್ದಾರೆ. ಉಡುಪಿಯ ದೇವಸ್ಥಾನಗಳಿಗೆ ಭೇಟಿ ನೀಡಿದ ಸಂದರ್ಭ ತುಳು ಸಿನಿಮಾ ನಿರ್ಮಿಸುವ ಕುರಿತು ಅವರು ಮಾತನಾಡಿದ್ದಾರೆ.

ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಹುದೊಡ್ಡ ಹಾಗೂ ವಿಭಿನ್ನವಾದ ಹನುಮಾನ್‌ ದೇವಸ್ಥಾನಕ್ಕೆ ಬೇಕಾದ ಮರದ ಕೆತ್ತನೆ ಶೈಲಿ ವೀಕ್ಷಣೆಗಾಗಿ ಬಹುಭಾಷಾ ನಟ ಅರ್ಜುನ್‌ ಸರ್ಜಾ ಇದೀಗ ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ದೇವಸ್ಥಾನಕ್ಕೆ ಬೇಕಾದ ಆಕರ್ಷಕವಾದ ಕುಸುರಿ ಕೆಲಸಗಳಿಗೆ ಮಂಗಳೂರಿನ ಬೋಳಾರದ ವಾಸ್ತುಶಿಲ್ಪಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಮುಡಿಪು ಭಾಗದಲ್ಲಿ ಮಣ್ಣು ಅಕ್ರಮ ಗಣಿಗಾರಿಕೆ

ತುಳುವಿನಲ್ಲಿ ಚಿತ್ರ ನಿರ್ಮಾಣ ಆಸೆ

ತುಳುಚಿತ್ರರಂಗ ವೇಗವಾಗಿ ಬೆಳೆಯುತ್ತಿದ್ದು, ನಾನು ಹಲವು ಭಾಷೆಗಳ ಚಿತ್ರ ನಿರ್ದೇಶನ ನಟನೆ ಮಾಡಿದ್ದೇನೆ. ಹಾಗಾಗಿ ತುಳುಚಿತ್ರರಂಗದಲ್ಲೊಂದು ಚಿತ್ರ ನಿರ್ಮಿಸುವ ಬಗ್ಗೆ ಯೋಚಿಸಿದ್ದೇನೆ. ಈ ಬಗ್ಗೆ 15 ದಿನಗಳ ಹಿಂದೆಯಷ್ಟೇ ಚರ್ಚೆ ಮಾಡಿದ್ದೆ. ಮೊದಲ ಬಾರಿಗೆ ಈ ವಿಚಾರವನ್ನು ಬಹಿರಂಗಪಡಿಸುತ್ತಿದ್ದೇನೆ. ಶೀಘ್ರದಲ್ಲೇ ಈ ಬಗ್ಗೆ ಸಂಪೂರ್ಣ ಚಿತ್ರಣ ನೀಡಲಿದ್ದೇನೆ ಎಂದು ಅರ್ಜುನ್‌ ಸರ್ಜಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅರ್ಜುನ್‌ ಸರ್ಜಾ ನಿರ್ಮಾಣದ ಹನುಮ ದೇಗುಲಕ್ಕೆ ಮಂಗಳೂರಿನ ಶಿಲ್ಪಿ

click me!