ದೀಪಾವಳಿಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ವತಿಯಿಂದ ಉದ್ಯಮಿ ಪುರುಷೋತ್ತಮ ಶೆಟ್ಟಿಪ್ರಾಯೋಜಕತ್ವದಲ್ಲಿ ಸುಮಾರು 5000 ಮಣ್ಣಿನ ಹಣತೆಗಳನ್ನು ರಥಬೀದಿಯಲ್ಲಿ ಶುಕ್ರವಾರ ಸಂಜೆ ಉಚಿತವಾಗಿ ವಿತರಿಸಲಾಯಿತು.
ಉಡುಪಿ(ಅ.27): ದೀಪಾವಳಿಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ವತಿಯಿಂದ ಉದ್ಯಮಿ ಪುರುಷೋತ್ತಮ ಶೆಟ್ಟಿಪ್ರಾಯೋಜಕತ್ವದಲ್ಲಿ ಸುಮಾರು 5000 ಮಣ್ಣಿನ ಹಣತೆಗಳನ್ನು ರಥಬೀದಿಯಲ್ಲಿ ಶುಕ್ರವಾರ ಸಂಜೆ ಉಚಿತವಾಗಿ ವಿತರಿಸಲಾಯಿತು.
ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸಾರ್ವಜನಿಕರಿಗೆ ಹಣತೆಯನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ನಂತರ, ದೀಪಾವಳಿ ಎಂಬುದು ಬಡವರ ಹಬ್ಬವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿಯೂ ನೈಜ ಅರ್ಥದಲ್ಲಿ ಆಚರಿಸಬೇಕು. ದೇಶವು ಅತಿವೃಷ್ಟಿಯನ್ನು ಅನುಭವಿಸುತ್ತಿದೆ. ದೀಪಾವಳಿಯ ಈ ಸಂದರ್ಭದಲ್ಲಿ ಈ ಸಂಕಷ್ಟುನಿವಾರಣೆಯಾಗಿ ದೇಶವು ಸುಭಿಕ್ಷವಾಗಲಿ ಎಂದು ಹಾರೈಸಿದ್ದಾರೆ.
undefined
ಉಡುಪಿ ಸೇರಿ 6 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು: ಡಿಸಿಎಂ
ಈ ಸಂದರ್ಭದಲ್ಲಿ ಪರ್ಯಾಯ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಕನ್ನರಪಾಡಿ ಜಯದುರ್ಗಾ ದೇವಳದ ಧರ್ಮದರ್ಶಿ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸುಧಾಕರ ಒಳಕಾಡು, ಸತೀಶ್ ಕಲ್ಮಾಡಿ, ಡೇವಿಡ್, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಒಟ್ಟು ಐದು ಸಾವಿರ ಹಣತೆಯನ್ನು ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಪ್ರತಿಯೊಬ್ಬರಿಗೂ ಐದು ಹಣತೆಗಳಂತೆ ವಿತರಿಸಲಾಯಿತು.
ಡಿಕೆಶಿಯನ್ನು ಇಲಿಗೆ ಹೋಲಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್