
ಮುಂಬೈ (ಜ. 25): ' ದಿಲ್ ತೋ ಹ್ಯಾಪಿ ಹೈ ಜಿ' ಸೀರಿಯಲ್ ಖ್ಯಾತಿಯ ಸೇಜಲ್ ಶರ್ಮಾ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಇದಮಿತ್ಥಂ ಎನ್ನುವ ಕಾರಣ ತಿಳಿದು ಬಂದಿಲ್ಲ. ತಂದೆಯ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದೆಂದು ವರದಿಯಾಗಿದೆ.
ರಜನಿಕಾಂತ್ ಚಿತ್ರವನ್ನೇ ತಿರಸ್ಕರಿಸಿದ ಕನ್ನಡ ನಟಿ!ಕಾರಣವಾದ್ರೂ ಏನು?
'ತಂದೆಯ ಅನಾರೋಗ್ಯದಿಂದ ಸೇಜಲ್ ತುಂಬಾ ಒತ್ತಡದಲ್ಲಿದ್ದಳು. ನಾನು ಅವಳಿಗೆ ಮೆಸೇಜ್ ಮಾಡಿದ್ದೆ. ಮೆಡಿಕಲ್ ಎಮರ್ಜೆನ್ಸಿಯಿಂದಾಗಿ ಉದಯಪುರಕ್ಕೆ ಹೋಗುತ್ತಿದ್ದೇನೆ ಎಂದಿದ್ದಳು. ಯಾಕೆ ಎಂದು ಕೇಳಿದ್ದಕ್ಕೆ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದಿದ್ದಳು. ಇದೀಗ ಆಕೆಯೇ ಆತ್ಮಹತ್ಯೆಗೆ ಶರಣಾಗಿರುವುದು ಶಾಕ್ ಆಗಿದೆ' ಎಂದು ದಿಲ್ ತೋ ಹ್ಯಾಪಿ ಹೇ ಜಿ ಸಹನಟ ಅರು ಕೆ ವರ್ಮಾ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಜೊತೆ ಸಿಹಿ ಕಹಿ ಚಂದ್ರು ಪುತ್ರಿ; ವೈರಲ್ ಫೋಟೋ ಹಿಂದಿನ ಕಥೆ!
ವೈಯಕ್ತಿ ಕಾರಣಗಳಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸೇಜಲ್ ಶರ್ಮಾ ರಾಜಸ್ಥಾನದ ಉದಯಪುರದವರು. ಕೆಲವರ್ಷಗಳ ಹಿಂದೆ ಸಿನಿಮಾ ಕರಿಯರ್‌ಗಾಗಿ ಮುಂಬೈಗೆ ಬಂದಿದ್ದರು. ಸದ್ಯ 'ದಿಲ್ ತೋ ಹ್ಯಾಪಿ ಹೈ ಜಿ' ಸೀರಿಯಲ್‌ನಲ್ಲಿ ನಟಿಸುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.