
ಕಿರುತೆರೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಸುವರ್ಣ ಸೂಪರ್‌ಸ್ಟಾರ್ ಎರಡನೇ ಸೀಸನ್ ಆರಂಭವಾಗುತ್ತಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ, ಶ್ರೀ ಸಾಮಾನ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದುಬಾರಿ ಗಿಫ್ಟ್‌ಗಳನ್ನು ಪಡೆದುಕೊಂಡಿದ್ದಾರೆ. ಸೀಸನ್ ಮುಗಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳಿಗೋಸ್ಕರ ಈ ಸೀಸನ್ ಎರಡು ಶುರುವಾಗುತ್ತಿದೆ.
ಶಾಲಿನಿ ಸತ್ಯನಾರಾಯಣಾ ನಿರೂಪಣೆ ಮಾಡುತ್ತಿರುವ ಎರಡನೇ ಸೀಸನ್ ಅಗಸ್ಟ್ 23ರಿಂದ ಸಂಜೆ 5ಗಂಟೆಗೆ ಪ್ರಸಾರವಾಗಲಿದೆ. ಕೊರೋನಾ ಸೋಂಕು ತಗುಲಿದ ಕಾರಣ ಸೀಸನ್ 1ರಲ್ಲಿ ಶಾಲಿನಿ ಕೆಲವು ದಿನಗಳ ಕಾಲ ನಿರೂಪಣೆ ಮಾಡಿರಲಿಲ್ಲ, ಬದಲಿಗೆ ಅನುಪಮಾ ಗೌಡ ಕಾಣಿಸಿಕೊಂಡಿದ್ದರು. ಸೀಸನ್ 2ರಲ್ಲಿ ಶಾಲಿನಿ ಸಂಪೂರ್ಣವಾಗಿ ಇರಲಿದ್ದಾರೆ ಎಂಬ ಭರವಸೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮಾತ್ರ ಭಾಗವಹಿಸಲಿದ್ದು, ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ವಯಸ್ಸಿನ ಲಿಮಿಟ್ ಇರುವುದಿಲ್ಲ. ಕಿರುತೆರೆ ನಟಿಯರು ಮಾತ್ರವಲ್ಲದೇ ಸಿನಿಮಾ ನಟಿಯರಾದ ಐಂದ್ರಿತಾ ರೈ, ರೇಖಾ, ವನಿತಾ ವಾಸು ಹಾಗೂ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾರೆ. ಯಾವ ಹೆಣ್ಣು ವೈಯಕ್ತಿಕ ಹಾಗೂ ವೃತ್ತಿ ಜೀವನ ಸಮಾನವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ, ಗಂಡಸರ ಸಮಕ್ಕೆ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. 'ಈ ಶೋ ಫಾರ್ಮ್ಯಾಟ್ ಹೇಗಿದೆ ಎಂದರೆ ನಾನು ಇಲ್ಲಿ ಬರುವ ಪ್ರತಿಯೊಬ್ಬ ಸ್ಪರ್ಧಿಗೂ ಕನೆಕ್ಟ್ ಆಗುವೆ. ಇಲ್ಲಿ ನಾನು ಸೆಲೆಬ್ರಿಟಿ ಅನ್ನೋ ಭಾವನೆ ಇರುವುದಿಲ್ಲ. ಹೀಗಾಗಿ ಎಲ್ಲರೂ ಸಂಕೋಚ ಇಲ್ಲದೆ ಇರುತ್ತಾರೆ,' ಎನ್ನುತ್ತಾರೆ ಶಾಲಿನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.