
ಕನ್ನಡದ ಪವರ್ ಸ್ಟಾರ್ ಖ್ಯಾತಿಯ ನಟ ಅಪ್ಪು (Puneeth Rajkumar) ಅವರು ಬದುಕಿದ್ದಾಗ 'ಕನ್ನಡದ ಕೋಟ್ಯಧಿಪತಿ' (Kannadada Kotyadhipati) ಶೋ ನಡೆಸಿಕೊಡುತ್ತಿದ್ದುದು ಗೊತ್ತೇ ಇದೆ. ಈ ಶೋದಲ್ಲಿ ಒಮ್ಮೆ ನಟ ಉಪೇಂದ್ರ ಅವರು ಅಪ್ಪು ಮುಂದೆ ಕುಳಿತು ಮಾತನಾಡುತ್ತಿದ್ದರು. ಆ ವೇಳೆ ಸ್ಪರ್ಧಿಗೆ ಬಂದ ಪ್ರಶ್ನೆಯೊಂದರಿಂದ ನಟ ಪುನೀತ್ ಅವರಿಗೆ ಕಣ್ಣುಗುಡ್ಡೆ ಶಬ್ದ ಕಂಡೊಡನೆ ಎದುರಿಗಿದ್ದ ಉಪೇಂದ್ರ ಮಾಡುತ್ತಿದ್ದುದು ನೆನಪಾಗಿದೆ. ತಕ್ಷಣವೇ ಪುನೀತ್ ರಾಜ್‌ಕುಮಾರ್ ಅವರು ಉಪೇಂದ್ರ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ನಟ, ಕೋಟ್ಯಧಿಪತಿ ನಿರೂಪಕ ಪುನೀತ್ ರಾಜ್‌ಕುಮಾರ್ ಅವರು 'ಸರ್, ಕಣ್ಣುಗುಡ್ಡೆ ಅಂತ ಬರ್ತಾ ಇದ್ದಂಗೆ.. ನೀವು ಕಣ್ಣು ಆಡಿಸ್ತೀರಲ್ಲಾ.. 'ಎಂದಿದ್ದಾರೆ. ತಕ್ಷಣವೇ ಎದುರಿಗಿದ್ದ ನಟ ಉಪೇಂದ್ರ (Real Star Upendra) ಅಪ್ಪು ಮಾತನ್ನು ತಕ್ಷಣವೇ ಅರ್ಥ ಮಾಡಿಕೊಂಡು 'ಅದು ಆಡ್ಸೋದಲ್ಲಾ, ತುಂಬಾ ಜನ ನನ್ ನೋಡ್ಬಿಟ್ಟು ಮನೆಲೆಲ್ಲಾ ಕನ್ನಡಿ ಮುಂದೆ ನಿಂತ್ಕೊಂಡ್ಬಿಟ್ಟು ಪ್ರಾಕ್ಟೀಸ್ ಮಾಡಿದಾರಂತೆ.. ' ಎನ್ನಲು ಪುನೀತ್ ಅವರು 'ಹೌದು ಸರ್, ಹೌದು' ಎನ್ನುತ್ತಾರೆ.
ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!
ಬಳಿಕ ಮಾತು ಮುಂದುವರೆಸಿದ ಉಪೇಂದ್ರ ಅವರು 'ಅದು ಮಾಡ್ಬೇಡಿ ಅಂತ ನಾನು ತುಂಬಾ ಜನಕ್ಕೆ ಹೇಳಿದೀನಿ, ಇದು ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟು..' ಎನ್ನಲು ಪುನೀತ್ ಚೆಂದದ ರಿಯಾಕ್ಷನ್ ಕೊಟ್ಟಿದ್ದಾರೆ. ಅವರಿಬ್ಬರ ಸಂಭಾಷಣೆ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೃರಲ್ ಆಗುತ್ತಿದೆ. ಅದನ್ನು ನೋಡಿದ ಹಲವರು ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. 'ಒಹೋ, ಅದು ನಿಮ್ಮ ಸಮಸ್ಯೆಯಾ, ನಾವೇನೋ ಅದೂ ನಿಮ್ಮ ಟ್ಯಾಲೆಂಟ್ ಅಂದ್ಕೊಂಡಿದ್ವಿ' ಎಂದಿದ್ದಾರೆ ಒಬ್ಬರು.
ಸ್ಟಾರ್ ಕಿಡ್ ಆಗಿದ್ದರೂ ಸಕ್ಸಸ್‌ಗೆ ಅದಕ್ಕಿಂತ ಹೆಚ್ಚಿನದೇನೋ ಬೇಕು; ನಟ ಜೂನಿಯರ್ ಎನ್‌ಟಿಆರ್
ಅದಕ್ಕೆ ಇನ್ನೊಬ್ಬರು 'ಉಪೇಂದ್ರ ಅವರು ಯಾವುದನ್ನೂ ಮುಚ್ಚಿಡಲ್ಲ, ಎಲ್ಲಾ ಖುಲ್ಲಂಖುಲ್ಲಾ.. ನೇರವಾಗಿಯೇ ಅದು ತಮಗಿರುವ ಹುಟ್ಟು ಸಮಸ್ಯೆ, ನನ್ನನ್ನು ಅನುಕರಿಸಬೇಡಿ ಎಂದು ನೇರವಾಗಿಯೇ ಹೇಳಿದ್ದಾರೆ. ಬಹಳಷ್ಟು ಜನ ತಮಗಿರುವ ಸಮಸ್ಯೆಯನ್ನು ಮುಚ್ಚಿಡುತ್ತಾರೆ, ಆದರೆ ಉಪೇಂದ್ರ ಅದನ್ಜು ಇಷ್ಟು ದೊಡ್ಡ ವೇದಿಕೆಯಲ್ಲಿ, ಕೋಟ್ಯಾಂತರ ಜನ ವೀಕ್ಷಿಸುವ ಶೋದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರಿಗೊಂದು ಹ್ಯಾಟ್ಸಪ್ ಹೇಳ್ರೀ' ಎಂದು ಪ್ರತಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಹಲವು ವರ್ಷಗಳು ಬಳಿಕ ಅಪ್ಪು-ಉಪ್ಪಿ ವೀಡೀಯೋ ಮತ್ತೆ ವೈರಲ್ ಆಗತೊಡಗಿದೆ.
ರಿಲೀಸ್‌ಗೂ ಮೊದ್ಲೇ 'ಫಾರ್ ರಿಜಿಸ್ಟ್ರೇಷನ್'ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ತೆಲುಗಿಗೂ ಹೊರಟ ಪೃಥ್ವಿ-ಮಿಲನಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.