ಚಂದನ್‌ -ನಿವೇದಿತಾ ಒಂದೇ ದಿನದಲ್ಲಿ ಡಿವೋರ್ಸ್ ಆಗಿದ್ದು ಇದೊಂದೇ ಕಾರಣಕ್ಕಾ? ನೆಟ್ಟಿಗರ ಹಲವು ಅನುಮಾನ!

By Suvarna News  |  First Published Jun 7, 2024, 7:00 PM IST

ಚಂದನ್ ಶೆಟ್ಟಿ ಮತ್ತು ನಿವೇದಿತಾ  ಪರಸ್ಪರ ಕೈ ಹಿಡಿದುಕೊಂಡು ಮಾಧ್ಯಮಗಳ ಕಣ್ಣು ತಪ್ಪಿಸಿ  ಕೋರ್ಟ್ ಹಿಂದೆ ಗೇಟ್ ನಿಂದ ಎಸ್ಕೇಪ್ ಆಗಿದ್ದಾರೆ. ಇವರಿಬ್ಬರ ವಿಚ್ಚೇದನದ ಬಗ್ಗೆ ಈಗ ಹಲವಾರು ಅನುಮಾನ ಹುಟ್ಟಿಕೊಂಡಿದೆ.


ಒಂದೇ ದಿನದಲ್ಲಿ ಕಿರುತೆರೆ ಸ್ಟಾರ್ ದಂಪತಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಚೇದನ ಪಡೆದುಕೊಂಡಿದ್ದಾರೆ. ಶಾಂತಿನಗರದಲ್ಲಿರುವ ಕೌಟುಂಬಿಕ ಜೊತೆಯಾಗಿಯೇ ನ್ಯಾಯಾಲಯಕ್ಕೆ ಬಂದ ಚಂದನ್ ಮತ್ತು ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದ ಬಳಿಕ ಪರಸ್ಪರ ಕೈ ಹಿಡಿದುಕೊಂಡು ಮಾಧ್ಯಮಗಳ ಕಣ್ಣು ತಪ್ಪಿಸಿ  ಕೋರ್ಟ್ ಹಿಂದೆ ಗೇಟ್ ನಿಂದ ಎಸ್ಕೇಪ್ ಆಗಿದ್ದಾರೆ. ಇವರಿಬ್ಬರ ವಿಚ್ಚೇದನದ ಬಗ್ಗೆ ಈಗ ಹಲವಾರು ಅನುಮಾನ ಹುಟ್ಟಿಕೊಂಡಿದೆ.

ಕಿರುತೆರೆಯ ಸ್ಟಾರ್ ಜೋಡಿಯ ವಿಚ್ಚೇದನ ಈಗ ಸ್ಯಾಂಡಲ್‌ವುಡ್‌ ನಲ್ಲಿ ಚರ್ಚೆಯ ವಿಷಯವಾಗಿದೆ.  ಮಾತ್ರವಲ್ಲ ಅಭಿಮಾನಿಗಳು, ಫಾಲೋವರ್ಸ್ ವಿಚ್ಚೇದನಕ್ಕೆ ಕಾರಣ ಹುಡುಕಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ. ನಿನ್ನೆ ಮೊನ್ನೆಯವರೆಗೆ ಜೊತೆಯಾಗಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ವಾರದ ಹಿಂದೆ ಕಲರ್ಸ್ ಕನ್ನಡದಲ್ಲಿ ಕೋಟಿ ಸಿನೆಮಾ ಪ್ರೊಮೋಷನ್‌ನಲ್ಲಿ  ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ ಈಗ ಒಂದೇ ದಿನದಲ್ಲಿ ಬೇರೆಯಾಗಿರುವುದು ಏಕೆ ಎಂದು ಚರ್ಚೆ ಆರಂಭಿಸಿದ್ದಾರೆ.

Tap to resize

Latest Videos

ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್: ಪೋಷಕರಾಗೋ ವಿಚಾರಕ್ಕೆ ಇಬ್ಬರ ಮಧ್ಯೆ ಮೂಡಿತಾ ಬಿರುಕು?

ಇನ್ನು ಈ ಜೋಡಿ ತೋರಿಕೆಗೆ ಮಾತ್ರವೇ ಜೊತೆಯಲ್ಲೇ ಇದ್ದು ಚೆನ್ನಾಗಿ ಇರುವಂತೆ ನಡೆದುಕೊಂಡಿದ್ದರು. ಮಾತ್ರವಲ್ಲ ತಮ್ಮ ನಡುವಿನ ಮನಸ್ತಾಪವನ್ನು ಎಲ್ಲೂ ಕೂಡ ಹೇಳಿಕೊಳ್ಳದೆ, ಸಣ್ಣ ಕ್ಲೂ ಕೂಡ ಬಿಟ್ಟುಕೊಟ್ಟಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಡಿಲೀಟ್‌ ಮಾಡಿದ್ರೆ, ಪರಸ್ಪರ ಅನ್‌ಫೋಲೋ ಮಾಡಿದ್ರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತದೆ. ಆದರೆ ಅದ್ಯಾವುದೇ ಸಣ್ಣ ಸುಳಿವು ಕೂಡ ಕೊಡದ ಚಂದನ್ ಮತ್ತು ನಿವೇದಿತಾ, ಯಾವುದೇ ಫೋಟೋ ಆಗಲಿ, ರೀಲ್ಸ್ ಆಗಲಿ ಡಿಲೀಟ್‌ ಮಾಡಿಲ್ಲ. ಎಲ್ಲವೂ ಹಾಗೇಯೇ ಉಳಿಸಿಕೊಂಡಿದ್ದಾರೆ. ಇಬ್ಬರೂ ಕೋರ್ಟ್ ಗೆ ಬಂದಾಗಲೇ ವಿಚಾರ ಬಹಿರಂಗವಾಗಿದೆ.

2017ರ ಅಕ್ಟೋಬರ್‌ ನಲ್ಲಿ ಆರಂಭವಾದ ಬಿಗ್‌ಬಾಸ್‌ ಸೀಸನ್ 5 ಸ್ಪರ್ಧಿಗಳಾಗಿದ್ದರು. ಈ ಶೋನಲ್ಲಿ ಚಂದನ್‌ ವಿನ್ನರ್ ಆಗಿ 50 ಲಕ್ಷ ಗೆದ್ದಿದ್ದರೆ, ನಿವೇದಿತಾ ನಾಲ್ಕನೇ ಸ್ಥಾನ ಪಡೆದಿದ್ದರು. ಶೋ ನಿಂದ  ಹೊರಬಂದ ಬಳಿಕ ಈ ಜೋಡಿ ಪ್ರೀತಿಸಿ 2020ರಲ್ಲಿ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈಗ ಅದೇನಾಯ್ತೋ ಗೊತ್ತಿಲ್ಲ. ತಮ್ಮ ತಮ್ಮ ಕೆರಿಯರ್ ದೃಷ್ಟಿಯಿಂದ ಇಬ್ಬರೂ ದೂರಾಗುತ್ತಿದ್ದೇವೆ. ಪರಸ್ಪರ ಒಪ್ಪಿಗೆ ಮೇರೆಗೆ ನಾವು ಈ ನಿರ್ಧಾರ ಮಾಡಿದ್ದು, ವಿಚ್ಚೇದನ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದು, ಒಂದೇ ದಿನದಲ್ಲಿ ನ್ಯಾಯಾಲಯ ಇವರಿಗೆ ವಿಚ್ಚೇದನ ಕೂಡ ಮಂಜೂರು ಮಾಡಿದೆ.

ಮೈಸೂರು ಯುವ ದಸರಾದಲ್ಲಿ ಚಂದನ್- ನಿವೇದಿತಾ ಪ್ರಪೋಸ್‌, ಅಂದಿನ ಸಚಿವರ ಶಾಪ ತಟ್ಟಿತೇ!?

ಇದೀಗ ತಮ್ಮ ತಮ್ಮ ವೃತ್ತಿಜೀವನದ ಬಗೆಗಿನ ಕಾರಣ ನೀಡಿ ಬೇರೆಯಾಗಿದ್ದು, ಇದೊಂದೇ ಕಾರಣಕ್ಕೆ ಈ ಜೋಡಿ ಬೇರೇಯಾದ್ರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ  ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ  ಮಾಡಿಕೊಳ್ಳುತ್ತಿದ್ದಾರೆ. ಚಂದನ್ ಮತ್ತು ನಿವೇದಿತಾ ಅವರ ಮಧ್ಯೆ ಬಿರುಕಿಗೆ ಕಾರಣ ಎಂದು ಹುಡುಕುತ್ತಿದ್ದಾರೆ.

ಮಾತ್ರವಲ್ಲ ಪೋಷಕರಾಗೋ ವಿಚಾರಕ್ಕೆ ನಿವೇದಿತಾ ಚಂದನ್ ಮಧ್ಯೆ  ಬಿರುಕು ಮೂಡಿದೆ.  ಮಗು ಹೊಂದುವ ಬಗ್ಗೆ ಚಂದನ್ ಆಸಕ್ತಿ ಇಟ್ಟುಕೊಂಡಿದ್ದರು. ಆದ್ರೆ ನಿವೇದಿತಾಗೆ ತಾಯಿ ಆಗೋ ಆಸೆ ಇರಲಿಲ್ಲ. ಮಗುವನ್ನು ಹೆತ್ತರೆ ತನ್ನ ಫಿಸಿಕ್ ಹಾಳಾಗುತ್ತೆ ಎನ್ನುವ ಮನಸ್ಥಿತಿ ಇತ್ತು. ಮಾತ್ರವಲ್ಲ ಬಣ್ಣದ ಜಗತ್ತಿಗೆ ಬರೋ ಆಸಕ್ತಿ ಹೆಚ್ಚಿಸಿಕೊಂಡಿದ್ದ ನಿವೇದಿತಾ ಗೌಡ. ಮಗು ಬೇಡ ಎಂದು  ನಿರ್ಧರಿಸಿದ್ದರು. ಮಗು ಆದ್ರೆ ಸಿನಿಮಾ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಅನ್ನುವ ಯೋಚನೆ ಕೂಡ ನಿವೇದಿತಾಗೆ ಇದ್ದಿರಬೇಕು. ಇದೆಲ್ಲದರ ಜೊತೆಗೆ ನಿವೇದಿತಾ ಮತ್ತು ಚಂದನ್ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆ ಆರಂಭವಾಗಿದೆ. ನಿವೇದಿತಾಗೆ ಈಗ 26 ವರ್ಷ ಮತ್ತು ಚಂದನ್‌ ಶೆಟ್ಟಿಗೆ 35 ವಯಸ್ಸಾಗಿದೆ. ಹೀಗಾಗಿ ವಯಸ್ಸಿನ ಅಂತರ ಕೂಡ ಕಾರಣವಾಗಿರಬಹುದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಎಗ್ಗಿಲ್ಲದೆ ಮೀಮ್ಸ್, ಕಮೆಂಟ್‌, ಚರ್ಚೆ ಹುಟ್ಟಿಕೊಂಡಿದೆ.

ಈ ಹಿಂದೆ ಕಲರ್ಸ್ ಕನ್ನಡದ ರಾಜಾ-ರಾಣಿ ಶೋ ನಲ್ಲೂ ಈ ಜೋಡಿ ಕಾಣಿಸಿಕೊಂಡು ಫೈನಲಿಸ್ಟ್ ಕೂಡ ಆಗಿದ್ದರು. ಅದಲ್ಲದೆ ನಿವೇದಿತಾ ಗಿಚ್ಚಿಗಿಲಿ ಶೋನಲ್ಲೂ ಸ್ಪರ್ಧಿಯಾಗಿದ್ದರು. ಇತ್ತೀಚೆಗೆ ನಟಿ ನಿವೇದಿತಾಗೆ ಹೆಚ್ಚು ಸಿನಿಮಾ ಆಫರ್ ಗಳು ಕೂಡ ಬರುತ್ತಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ ಜಿಎಸ್‌ಟಿ ಎಂಬ ಸಿನೆಮಾ ಘೋಷಣೆ ಮಾಡಲಾಗಿತ್ತು. ಇದರಲ್ಲಿ ಸೃಜನ್ ಲೋಕೇಶ್ ಹೀರೋ ಆದರೆ ನಿವೇದಿತಾ ಗೌಡ ಹಿರೋಯಿನ್, ಇದೊಂದು ಹಾರರ್‌, ಕಾಮಿಡಿ ಸಿನಿಮಾ ಆಗಿದ್ದು ಚಂದನ್‌ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.  ಚಂದನ್ ಶೆಟ್ಟಿಯೂ ಕೂಡ ಮೂರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.  

ಕಳೆದ ನಾಲ್ಕು ದಿನದವರೆಗೂ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲೇ ವಾಸಿಸುತ್ತಿದ್ದರ ಅನ್ನೋ ಮಾಹಿತಿ ಇದೆ. ಯಾವುದೇ ಕಿತ್ತಾಟ ಇಲ್ಲದೆ ಇಬ್ಬರೂ ಒಪ್ಪಿಕೊಂಡು ವಿಚ್ಛೇದನ ಪಡೆದುಕೊಂಡಿದ್ದು, ಈ ಬಗ್ಗೆ ಚಂದನ್ ಆಗಲಿ. ನಿವೇದಿತಾ ಆಗಲಿ  ಕಾರಣ ನೀಡಿಲ್ಲ. ಹೀಗಾಗಿ  ಇವರ ಬಗ್ಗೆ ಹಲವಾರು ಅನುಮಾನ ಹುಟ್ಟಿಕೊಂಡಿದೆ.

click me!