2ನೇ ಸೀಸನ್ ಅರ್ಧಕ್ಕೆ ಮುಗಿದರೇನು? 3ನೇ ಸೀಸನ್ ಇದೆಯಲ್ಲ.?.ದಿನಾಂಕ ರಿವೀಲ್ ಮಾಡಿದ ಬಿಗ್ ಬಾಸ್ ಟೀಂ....
ಕಿರುತೆರೆ ಮಾಧ್ಯಮದ ಫುಲ್ ಟೈಮ್ ಮನೋರಂಜನಾ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 9 ಕನ್ನಡ ಈಗ ಬರುತ್ತೆ, ಆಗ ಬರುತ್ತಿದೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಇನ್ನೂ ಗುಡ್ ನ್ಯೂಸ್ ಸಿಕ್ಕಿಲ್ಲ. ಬರೋದು ಮಾತ್ರ ಖಾತರಿಯಾಗಿದೆ. ಆದರೂ ಅನ್ಯ ಭಾಷಾ ರಿಯಾಲಿಟಿ ಶೋ ಶುರುವಾಗಿರುವುದನ್ನು ನೋಡಿ ಕನ್ನಡಿಗರು ಕೊಂಚ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಾಗಾರ್ಜುನನಿಗೆ ಪ್ರಪೋಸ್ ಮಾಡಿದ ಮೋನಾಲ್ ಗಜ್ಜರ್ ಯಾರು ಗೊತ್ತಾ?
ಮೋನಲಾಲ್ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್ ಬಾಸ್ ಸೀಸನ್ 3ರ ಆರಂಭದ ದಿನಾಂಕ ನಿಗದಿಯಾಗಿದೆ. ಖ್ಯಾತ ರಿಯಾಲಿಟಿ ಶೋ ಸ್ಟಾರ್ ಸಿಂಗರ್ ಟೋವಿನೋ ಥಾಮಸ್ ಸೀಸನ್ 3ರ ಲೋಗೋ ರಿವೀಲ್ ಮಾಡಿದ್ದಾರೆ. ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂಬ ಸೂಚನೆಯೂ ನೀಡಿದ್ದಾರೆ. ಪ್ರತೂ ವೀಕೆಂಡ್ ಮೋಹನ್‌ಲಾಲ್ ಅವರನ್ನು ನೋಡಬಹುದು ಎಂದು ಕೆಲವರು ಥ್ರಿಲ್ ಆದರೆ, ಇನ್ನೂ ಕೆಲವರು ಸ್ಪರ್ಧಿಗಳ ಹೆಸರು ಗೆಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಸೀಸನ್ 2 ಏನಾಗಿತ್ತು ಗೊತ್ತಾ?
ಕೊರೋನಾ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಿದ್ದಂತೆ, ಅನೇಕ ಟಿವಿ ಕಾರ್ಯಕ್ರಮಗಳಿಗೆ ತಡೆ ಹಾಕಲಾಗಿತ್ತು. ಈ ವೇಳೆ ನಡೆಯುತ್ತಿದ್ದ ಮಲಯಾಳಂ ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋ 75ನೇ ದಿನ ಪೂರೈಸಿತ್ತು, ಆದರೆ ಕೇಂದ್ರ ಸರಕಾರ ಆದೇಶ ಮೀರುವಂತಿರಲಿಲ್ಲ. ಮನೆಯಲ್ಲಿದ್ದ ಸ್ಪರ್ಧಿಗಳು ನಿರಾಸೆಯಿಂದ ಹೊರ ಬಂದರು. ಸೀಸನ್ 3 ಸಂಪೂರ್ಣವಾಗಿ ನಡೆಯಲಿದ್ದು, ನಿಯಮಗಳನ್ನು ಗಮನದಲಿಟ್ಟಿಕೊಂಡೇ ಮನೆ ರೆಡಿ ಮಾಡಲಾಗಿದೆ ಎಂದಿದ್ದಾರೆ.