ಗೆಳತಿಗೆ ಸೆಟ್ ಮಾಡಿಕೊಡಲು ಹೋಗಿ, ತಾನೇ ಪ್ರೀತಿಯಲ್ಲಿ ಬಿದ್ದ ಪ್ರೇಮಕಥೆ ಹಂಚಿಕೊಂಡ ನಟಿ!

Published : Aug 21, 2025, 12:59 PM IST
Alina Padikkal

ಸಾರಾಂಶ

ಮಲೆಯಾಳಂ ಖ್ಯಾತ ನಟಿ ಎಲೆನಾ ಪಡಿಕ್ಕಲ್ ಹಾಗೂ ಬೆಂಗಳೂರಿನಲ್ಲಿ ಓದಿದ ರೋಹಿತ್ ಜೊತೆಗೆ ಪ್ರೇಮಕಥೆ ರಿವೀಲ್ ಮಾಡಿದ್ದಾರೆ. ಸ್ನೇಹಿತೆಗೆ ಸೆಟ್ ಮಾಡಿಕೊಡಲು ಹೋಗಿ ತಾನೇ ಪ್ರೀತಿಯಲ್ಲಿ ಬಿದ್ದಿರುವ ಕತೆಯನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಬೆಂಗಳೂರಿನಿಂದ ಬರುತ್ತಿದ್ದಾಗ ಸರ್ಪೈಸ್ ತರುತ್ತಿದ್ದನು.

ಮಲೆಯಾಳಂ ಖ್ಯಾತ ನಟಿ ಎಲೆನಾ ಪಡಿಕ್ಕಲ್ ಹಾಗೂ ಬೆಂಗಳೂರಿನಲ್ಲಿ ಓದಿದ ರೋಹಿತ್ ಜೊತೆಗೆ ಪ್ರೇಮಕಥೆ ರಿವೀಲ್ ಮಾಡಿದ್ದಾರೆ. ಸ್ನೇಹಿತೆಗೆ ಸೆಟ್ ಮಾಡಿಕೊಡಲು ಹೋಗಿ ತಾನೇ ಪ್ರೀತಿಯಲ್ಲಿ ಬಿದ್ದಿರುವ ಕತೆಯನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಮಲಯಾಳಂ ಕಿರುತೆರೆ ಪ್ರೇಕ್ಷಕರ ಪ್ರೀತಿಯ ತಾರೆ ಎಲೀನಾ ಪಡಿಕಲ್. ನಟಿ ಮತ್ತು ನಿರೂಪಕಿಯಾಗಿರುವ ಎಲೀನಾ ಬಿಗ್ ಬಾಸ್ ಮಲಯಾಳಂ ಸೀಸನ್ ಎರಡರಲ್ಲಿ ಸ್ಪರ್ಧಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಎಲೀನಾಗೆ ಅಭಿಮಾನಿಗಳು ಹೆಚ್ಚು. ಈ ಸುಂದರಿ ಎಲೆನಾಗೆ ಬೆಂಗಳೂರಿನಲ್ಲಿ ಓದಿದ ರೋಹಿತ್ ಜೀವನ ಸಂಗಾತಿ. ಇದೀಗ ನಟಿ ಎಲೆನಾ ಪಡಿಕ್ಕಲ್ ತಮ್ಮ ಪ್ರೇಮಕಥೆಯನ್ನು ಸಂದರ್ಶನವೊಂದರಲ್ಲಿ ನವಿರಾಗಿ ಹಂಚಿಕೊಂಡಿದ್ದಾರೆ. ಮೈಲ್ಸ್ಟೋನ್ ಮೇಕರ್ಸ್ ನೀಡಿದ ಸಂದರ್ಶನದಲ್ಲಿ ಎಲೀನಾ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ನಾನು ಒಬ್ಬ ಗೆಳತಿಯ ಫೋನಿನಿಂದ ರೋಹಿತ್‌ಗೆ ಮೊದಲು ಸಂದೇಶ ಕಳುಹಿಸಿದ್ದೆ. ಆದರೆ, ಆ ಗೆಳತಿ ಈ ವ್ಯಕ್ತಿಯ ಬಗ್ಗೆ ನನಗೆ ಹೇಳಿದ್ದಳು. ಆಗ ಅವರಿಬ್ಬರೂ ಜೋಡಿಯಾಗಲಿ ಎಂಬ ಉದ್ದೇಶದಿಂದ ಆಕೆಯ ಮೊಬೈಲ್‌ನಿಂದ ನಾನು ರೋಹಿತ್‌ಗೆ ಒಂದು ಸಂದೇಶ ಕಳುಹಿಸಿದೆ. ಅದು ಕೂಡ ಫಾರ್ವರ್ಡ್ ಸಂದೇಶ ಆಗಿತ್ತು. ಆದರೆ, ಆಕೆಯ ಮೊಬೈಲ್‌ನಿಂದ ಕಳಿಸಿದ ಮೆಸೇಜ್ ರೋಹಿತ್‌ಗೆ ಇಷ್ಟವಾಗಲಿಲ್ಲ. ಇದೇ ಉದ್ದೇಶಕ್ಕೆ ರೋಹಿತ್ ಆ ಹುಡುಗಿಗೆ ಕರೆ ಮಾಡಿ ಚೆನ್ನಾಗಿ ಬೈದಿದ್ದನು. ಈ ಬಗ್ಗೆ ನನ್ನ ಮೊಬೈಲ್‌ನಿಂದ ಬೇರೆ ಯಾರೋ, ಮೆಸೇಜ್ ಮಾಡಿದ್ದು ಅಂತ ಆಕೆ ಹೇಳಿದರೂ ಕೇಳದೆ ಬೇಜಾರಾಗುವಂತೆ ಬೈದಿದ್ದನು. ಇದಾದ ನಂತರ ನಾನು ಆಕೆಯ ಫೋನ್ ತೆಗೆದುಕೊಂಡು ಕರೆಮಾಡಿ ಕ್ಷಮೆ ಕೇಳಿ ಸಂದೇಶ ಕಳುಹಿಸಿದಾಗ ಇಟ್ಸ್ ಓಕೆ ಅಂತ ಉತ್ತರ ಬಂತು. ಆಗ ಪುಣ್ಯಾತ್ಮನ ಧ್ವನಿ ತುಂಬಾ ಚೆನ್ನಾಗಿದೆ ಅಂತ ಅನಿಸಿತು.

ಈ ಘಟನೆ ನಡೆದ ಮೇಲೆ ಒಂದು ದಿನ ನನಗೆ ರೋಹಿತ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದನು. ನಾನು ಅದನ್ನು ಅಕ್ಸೆಪ್ಟ್ ಮಾಡಿದ ನಂತರ ನಾವು ಮಾತನಾಡಲು ಶುರುಮಾಡಿದೆವು. ಇದು ಬೇರೆ ಟ್ರಾಕ್ ನಲ್ಲಿ ಹೋಗಬೇಕು ಅಂತ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಅಂತ ನಾನು ಮೊದಲೇ ರೋಹಿತ್‌ಗೆ ಹೇಳಿದ್ದೆ. ಇದರಿಂದ ನಮ್ಮ ನಡುವೆ ಸ್ನೇಹ ತುಂಬಾ ದಿನ ಉಳಿದುಕೊಂಡಿತ್ತು.

ಆದರೆ, ಅವನು ನನ್ನನ್ನು ಮಾತ್ರ ಭೇಟಿಯಾಗಲು, ಮಾತನಾಡಲು ಮತ್ತು ನೋಡಲು ಚೆನ್ನೈನಿಂದ, ಬೆಂಗಳೂರಿನಿಂದ ಬರುತ್ತಿದ್ದನು. ಇಲ್ಲಿಗೆ ಬಂದ ನಂತರ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದೆವು. ಹೀಗೆ ಬೆಂಗಳೂರಿನಿಂದ ನ್ನ ಭೇಟಿಯಾಗಲು ಬರುವಾಗಲೆಲ್ಲಾ ನನಗೆ ತುಂಬಾ ಸರ್ಪ್ರೈಸ್ ಕೊಡುತ್ತಿದ್ದನು. ಆತ ಕೊಡುತ್ತಿದ್ದ ಒಂದೊಂದು ಸರ್ಪ್ರೈಸ್‌ಗಳು ಕೂಡ ನನಗೆ ತುಂಬಾ ಇಷ್ಟ ಆಗುತ್ತಿದ್ದವು. ಅವನು ನನಗಾಗಿ ಮಾಡಿದ ಪ್ರಯತ್ನ ನನಗೆ ಇಷ್ಟವಾಗಲು ಕಾರಣವಾದವು. ಇನ್ನು ರೋಹಿತ್ ಬೆಂಗಳೂರಿನಲ್ಲಿ ಓದಿದ್ದು. ನನ್ನನ್ನು ಲೈನ್ ಹೊಡೆಯಲು ಇಲ್ಲಿಗೆ ಬಂದು ಬಂದು, ನಮಗೆಲ್ಲರಿಗೂ ಇಲ್ಲಿ ಗೆಳೆಯರಾದರು, ಎಂದು ಎಲೀನಾ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!