ಕಾಮಿಡಿ ಮಾಡೋರಿಗೂ ಬಿಗ್‌ಬಾಸ್‌ ಮನೆಯಲ್ಲಿದೆ ಜಾಗ; ನಯನಾ ಹೋಗೋದು ಗ್ಯಾರಂಟಿ?

By Suvarna News  |  First Published Feb 10, 2021, 11:12 AM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಬಿಗ್ ಬಾಸ್‌ ಮನೆ ಪ್ರವೇಶಿಸುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಗಾಸಿಪ್.....
 


ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್‌ ರಿಯಾಲಿಟಿ ಶೋ ಆರಂಭವಾದರೆ ಸಾಕಪ್ಪಾ ಎನ್ನುತ್ತಿದ್ದಾರೆ ವೀಕ್ಷಕರು. ಮನೆಗೆ ಪ್ರವೇಶಿಸುವ ಸೆಲೆಬ್ರಿಟಿಗಳ ಆಯ್ಕೆ ಈಗಾಗಲೇ ಅಂತಿಮಗೊಂಡಿದೆ. ಅದರೂ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರದ್ದೇ ಲಿಸ್ಟ್‌ ರೆಡಿ ಮಾಡಿಕೊಂಡಿದ್ದಾರೆ. ಈ ಲಿಸ್ಟ್‌ನಲ್ಲಿ ಕಾಮಿಡಿ ಕಿಲಾಡಿಗಳು ನಯನಾ ಹೆಸರಿದೆ ಎನ್ನಲಾಗಿದೆ.

ಬಿಗ್ ಬಾಸ್‌ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ! 

Tap to resize

Latest Videos

ಕಾಮಿಡಿ ಕಿಲಾಡಿಗಳ ಮೂಲಕ ಪರಿಚಿತರಾದ ನಯನಾ ಈಗ ಕಾಮಿಡಿ ಚಾಪಿಯನ್‌ಶಿಪ್ ಶೋ ಹಾಗೂ ಎಡೆಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಿಖಿಲ್ ಕುಮಾರಸ್ವಾಮಿ ಜೊತೆ ಸೀತಾರಾಮ ಕಲ್ಯಾಣದಲ್ಲಿಯಬ ನಟಿಸಿದ್ದಾರೆ. ಇಷ್ಟಕ್ಕೆ ಬಿಗ್ ಬಾಸ್‌ ಹೋಗಬಹುದಾ?

ಬಿಬಿ ಮನೆಯಲ್ಲಿ ಇರಬೇಕೆಂದರೆ ಟ್ಯಾಲೆಂಟ್ ಅಥವಾ ಕಾಂಟ್ರೋವರ್ಸಿ ಮಾಡಿಕೊಳ್ಳುವ ವ್ಯಕ್ತಿ ಆಗಿರಬೇಕು. ಕೆಲವು ತಿಂಗಳ ಹಿಂದೆ ನಯನಾ ಪೋಸ್ಟ್‌ವೊಂದಕ್ಕೆ ಇಂಗ್ಲಿಷ್‌ನಲ್ಲಿ ಸಾಲುಗಳನ್ನು ಬರೆದುಕೊಂಡಿದ್ದರು, ಕನ್ನಡದಲ್ಲಿ ಪೋಸ್ಟ್‌ ಮಾಡಿ ಎಂದು ಕೇಳಿಕೊಂಡ ನೆಟ್ಟಿಗನಿಗೆ ಎಗ್ಗಾಮುಗ್ಗಾ ಬೈದಿದ್ದರು. ಅದಾದ ಮೇಲೆ ಮಾಡಿಕೊಂಡದ್ದೆಲ್ಲವೂ ಕ್ರಾಂಟ್ರವರ್ಸಿಯೇ. ನಗಿಸುವ ಟ್ಯಾಲೆಂಟ್ ಇರುವುದು ಹೌದು. ಒಟ್ಟಾರೆ ಬಿಬಿ ಮನೆಯಲ್ಲಿ ಕಾಮಿಡಿ ಮಾಡುವವರು ಹೋಗುತ್ತಾರಾ ಅಥವಾ ಹೋದವರೇ ಕಾಮಿಡಿ ಮಾಡುತ್ತಾರೋ, ಕಾಮಿಡಿ ಆಗುತ್ತಾರೋ ಎಂದು ಕಾದು ನೋಡಬೇಕಿದೆ.

ಈ ಒಂದು ಕಾರಣಕ್ಕೆ ಬಿಗ್ ಬಾಸ್‌ ಮನೆಯಿಂದ ದೂರ ಉಳಿದ ಸಿಹಿ ಕಹಿ ಚಂದ್ರು ಪುತ್ರಿ? 

ಫೆಬ್ರವರಿ 28ರಿಂದ ಬಿಗ್ ಬಾಸ್ ಆರಂಭಗೊಳ್ಳಲ್ಲಿದ್ದು, ಈಗಾಗಲೇ ಸರಗಮಪ ಖ್ಯಾತಿಯ ಹನುಮಂತು, ಎಕ್ಸ್‌ಕ್ಯೂಸ್ ಮೀ ಚಿತ್ರದ ನಾಯಕ ಸುನೀಲ್ ರಾವ್, ಬ್ರಹ್ಮಗಂಟುವಿನ ಗೀತಾ ಭಾರತಿ ಭಟ್ ಮತ್ತು ಅಗ್ನಿಸಾಕ್ಷಿಯ ಸನ್ನಿಧಿ ಖ್ಯಾತಿ ವೈಷ್ಣವಿ ಗೌಡ ಮನೆಯೊಳಗೆ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಕಳೆದ ವರ್ಷ ಡ್ರೋನ್ ತಯಾರಿಸಿದ್ದೇನೆ ಎಂದು ಬಣ್ಣ ಹಾರಿಸಿದ ಪ್ರತಾಪ್ ಹೆಸರೂ ಕೇಳಿ ಬಂದಿರುವುದು ಸುಳ್ಳಲ್ಲ. ಝೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿಯ ಆರ್ಯ ಸರ್ ಆಗಿ ನಟಿಸುತ್ತಿರುವ ಅನಿರುದ್ಧ ಅವರ ಹೆಸರೂ ಹರಿದಾಡಿತ್ತು. ಅದೇ ಕಾರಣಕ್ಕೆ ಆ ಧಾರಾವಾಹಿಗೆ ಸೂರ್ಯ ಅವರನ್ನು ಮತ್ತೊಬ್ಬ ಹೀರೋ ಆಗಿ ಕರೆ ತರಲಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ, ಈ ಗಾಸಿಪ್‌ಗೆ ಇಂಬು ನೀಡುವಂತೆ ಯಾವುದೇ ಸೂಚನೆಯೂ ಇನ್ನೂ ಸಿಕ್ಕಿಲ್ಲ. 

2020ರಲ್ಲಿ ಮಾಡಿಕೊಂಡ ಈ ಎಡವಟ್ಟಿನಿಂದ ಬಿಗ್ ಬಾಸ್‌ ಪ್ರವೇಶಿಸುವ ಅವಕಾಶ ಪಡೆದ್ರಾ ಗೀತಾ? 

ಒಟ್ಟಿನಲ್ಲಿ ಶ್ರೀಸಾಮಾನ್ಯನಿಲ್ಲದ ಬಿಗ್ ಬಾಸ್ ಇದಾಗಲಿದ್ದು, ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ. ಕೋವಿಡ್ ಮಾರ್ಗಸೂಚಿಗಳ ಕಾರಣದಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗಬಹುದು. ವಾರದ ಕತೆ ಕಿಚ್ಚನ ಜೊತೆಯೂ ಪ್ರತೀ ಸಾರಿಗಿಂತ ಈ ವರ್ಷ ತುಸು ವಿಭಿನ್ನವಾಗಿರುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಎಲ್ಲಾ ಊಹಾಪೋಹಗಳಿಗೂ ಶೀಘ್ರವೇ ತೆರೆ ಬೀಳಲಿದೆ.

click me!